ಮನಸ್ಸಿಗೆ ಹತ್ತಿರದವರು ಕಷ್ಟ ಅನುಭವಿಸುತ್ತಿದ್ದಾರೆ, ಮುಂದಿನ ವರ್ಷದೊಳಗೆ ಏನಾದ್ರೂ ಸಾಧನೆ ಮಾಡ್ತೀನಿ: ರಕ್ಷಕ್ ಬುಲೆಟ್

First Published | Jun 18, 2024, 3:48 PM IST

ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲು ಬೇಸರ ವ್ಯಕ್ತ ಪಡಿಸಿದ ರಕ್ಷಕ್. ಅಣ್ಣನ ನಿರ್ಧಾರಕ್ಕೆ ಜೈಕಾರ ಹಾಕಿದ ಅಭಿಮಾನಿಗಳು.... 

ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ಈ ವರ್ಷ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧಾರ ಮಾಡಿರುವುದಾಗಿ ಪೋಸ್ಟ್‌ ಹಾಕಿದ್ದಾರೆ. 

 'ಎಲ್ಲರಿಗೂ ನಮಸ್ಕಾರ ಹಾಗೂ 'ಫಾದರ್ಸ್‌ ಡೇ'ನ ಶುಭಾಶಯಗಳು. ಇವತ್ತು ಬೆಳಗ್ಗೆಯಿಂದ ನನ್ನ ತಂದೆ ನೆನಪು ನನ್ನನ್ನು ತುಂಬಾ ಕಾಡುತ್ತಿದೆ. ಎಲ್ಲರಂತೆ ನನಗೂ ಕೂಡ ನನ್ನ ತಂದೆಯೇ ಮೊದಲ ಹೀರೋ. 

Tap to resize

ಹೀರೋ ಅಷ್ಟೇ ಅಲ್ಲ ಒಳ್ಳೆಯ ಮಾರ್ಗದರ್ಶಕರು ಹಾಗೂ ಸ್ನೇಹಿತರು ಕೂಡ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ನಡೆದ ಕೆಲವೊಂದು ಘಟನೆಗಳು ಮನಸ್ಸಿಗೆ ನೋವು ತಂದಿದೆ. 

ನಮ್ಮ ಮನಸ್ಸಿಗೆ ಹತ್ತುರವಾದವರು ಕಷ್ಟ ಅನುಭವಿಸುತ್ತಿರುವಾಗ ನಾವು ಸಂಭ್ರಮಾಚರಣೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ. ನಾನು ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ. 

ಮುಂದಿನ ವರ್ಷದ ಹುಟ್ಟುಹಬ್ಬದಷ್ಟರಲ್ಲಿ ಏನಾದರೂ ಒಂದು ಸಾಧನೆ ಮಾಡಿರುತ್ತೇನೆ, ಆಗ ನನ್ನ ಎಲ್ಲ ಸ್ನೇಹಿತರು, ಹಿತೈಷಿಗಳು, ಗುರು ಹಿರಿಯರು ಹಾಗೂ ಪ್ರೀತಿ ಪಾತ್ರರೊಂದಿಗೆ ಆಚರಣೆ ಮಾಡುತ್ತೇನೆ. 

ಹೀಗೆ ನಿಮ್ಮ ಪ್ರೀತಿ  ವಿಶ್ವಾಸ ಹಾಗೂ ಆಶೀರ್ವಾದ ನನ್ನ ಮೇಲಿರಲಿ. ನನ್ನ ಬೆಂಬಲಿಸುತ್ತಿರುವ ಎಲ್ಲ ನನ್ನ ಸ್ನೇಹಿತರು, ಪ್ರೀತಿ ಪಾತ್ರರು, ಮಾಧ್ಯಮ ಮಿತ್ರರು, ಟ್ರೋಲ್‌ ಪೇಜ್‌ಗಳು, ಯೂಟ್ಯೂಬರ್ಸ್‌ ಹಾಗೂ ಎಲ್ಲಾ ಸಾಮಾಜಿಕ ಜಾಲತಾಣದ ಸ್ನೇಹಿತರಿಗೆ ಧನ್ಯವಾದಗಳು ಎಂದು ರಕ್ಷಕ್ ಬರೆದುಕೊಂಡಿದ್ದಾರೆ. 

 ರಕ್ಷಕ್ ಬುಲೆಟ್‌ ತೆಗೆದುಕೊಂಡಿರುವ ಈ ನಿರ್ಧಾರವನ್ನು ಫಾಲೋವರ್ಸ್‌ ಮೆಚ್ಚಿಕೊಂಡು ಕಾಮೆಂಟ್ಸ್‌ನಲ್ಲಿ ಜೈ ಕಾರ ಹಾಕಿದ್ದಾರೆ. ನೀವು ಸಾಧನೆ ಮಾಡಲೇ ಬೇಕು ಎಂದಿದ್ದಾರೆ. 

Latest Videos

click me!