ನಂದಿನಿ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದ, ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ (Nithya Ram) ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಹೊಸ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
ಉದಯ ಟಿವಿಯಲ್ಲಿ (Udaya Tv) ಪ್ರಸಾರವಾಗಲಿರುವ ಹೊಚ್ಚ ಹೊಸ ಸೀರಿಯಲ್ ಶಾಂತಿ ನಿವಾಸದಲ್ಲಿ (Shanti Nivasa) ನಿತ್ಯಾ ರಾಮ್ ಮತ್ತೆ ಬಣ್ಣ ಹಚ್ಚಲಿದ್ದಾರೆ. ಧಾರಾವಾಹಿಯಲ್ಲಿ ನಟಿ ಶಾಂತಿ ಹೆಸರಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೋಮೋ ನೋಡಿದ್ರೆ ಇದು ಕೂಡ ದೈವೀಕ ಹಿನ್ನೆಲೆ ಇರುವಂತಹ ಕಥೆಯನ್ನು ಹೊಂದಿರುವ ಧಾರಾವಾಹಿ ಇರಬಹುದು ಅನ್ನೋ ಥರ ಕಾಣಿಸ್ತಿದೆ.
ಈ ಹಿಂದೆ ನಟಿ ನಿತ್ಯಾ ರಾಮ್ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಂದಿನಿ ಧಾರಾವಾಹಿಯಲ್ಲಿ (Nandini Serial) ನಟಿಸುತ್ತಿದ್ದರು. ಅದಾದ ಬಳಿಕ ತಮಿಳಿನಲ್ಲೂ ಬ್ಯುಸಿಯಾಗಿದ್ದರು. ಮದುವೆಯಾದ ಬಳಿಕ ನಿತ್ಯಾ ನಟನೆಯಿಂದ ದೂರವೇ ಉಳಿದಿದ್ದರು.
ವೈವಾಹಿಕ ಜೀವನಕ್ಕೆ (Married Life) ಕಾಲಿಟ್ಟ ಬಳಿಕ ನಿತ್ಯಾ ರಾಮ್, ತಮ್ಮ ಪತಿಯೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಕಳೆದ ವರ್ಷ ಬಂದಾಗ ಅವರು ತಮಿಳಿನ ಅಣ್ಣ ಸೀರಿಯಲ್ ನಲ್ಲಿ ನಟಿಸಿದರು. ಕನ್ನಡ ಬಿಟ್ಟು ತಮಿಳು ಧಾರಾವಾಹಿಯಲ್ಲಿ ನಟಿಸೋದಕ್ಕಾಗಿ ಕನ್ನಡಿಗರ ಕೋಪಕ್ಕೂ ಗುರಿಯಾಗಿದ್ದರು.
ಇದೀಗ ಹಲವು ವರ್ಷಗಳ ಬಳಿಕ ನಿತ್ಯಾ ಮತ್ತೆ ಉದಯ ಟಿವಿಯಲ್ಲಿ ಶಾಂತಿ ನಿವಾಸ ಸೀರಿಯಲ್ ನಲ್ಲಿ (serial) ನಟಿಸುವ ಮೂಲಕ ಕನ್ನಡಿಗರನ್ನು ರಂಜಿಸೋದಕ್ಕೆ ಬರುತ್ತಿದ್ದಾರೆ. ಮತ್ತೆ ನಿತ್ಯಾ ರಾಮ್ ಅವರನ್ನು ತೆರೆ ಮೇಲೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಅಶಾಂತಿ ತುಂಬಿದ ಮನಸುಗಳ ಮಧ್ಯೆ,ಪ್ರೀತಿಯ ಜ್ಯೋತಿ ಹಿಡಿದು ಪ್ರಜ್ವಲಿಸಲು ಬರ್ತಿದ್ದಾಳೆ ಶಾಂತಿ ಎನ್ನುವ ಕ್ಯಾಪ್ಶನ್ ನೊಂದಿಗೆ ಪ್ರೊಮೋ ಪ್ರಸಾರವಾಗಿದೆ. ಜನ್ರು ಮತ್ತೆ ನಂದಿನಿ ಸೀರಿಯಲ್ ನೋಡೋ ತರ ಇದೆ, ಪ್ರೊಮೋ ಚೆನ್ನಾಗಿದೆ, ಹಾರರ್ ಸ್ಟೋರಿ ಇರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಪ್ರೊಮೋ ನೋಡಿದ ಹೆಚ್ಚಿನ ಜನರೆಲ್ಲರೂ ನಾವು ನಂದಿನಿ 3 ಬರ್ತಾ ಇದೆ ಅಂದ್ಕೊಂಡ್ವಿ. ಪ್ರೊಮೋ ತುಂಬಾನೆ ಅದ್ಭುತವಾಗಿದೆ. ನಿತ್ಯಾ ರಾಮ್ ಮೇಡಂ ಅನ್ನು ಮತ್ತೆ ತೆರೆ ಮೇಲೆ ನೋಡಿ ಖುಷಿಯಾಯಿತು. ಬೇಗನೆ ಸೀರಿಯಲ್ ಪ್ರಸಾರ ಆಗೋದಕ್ಕೆ ಕಾಯ್ತಿದ್ದೀವಿ ಎಂದು ಬರೆದುಕೊಂಡಿದ್ದಾರೆ.