ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಕ್ಷಿತಾ ಶೆಟ್ಟಿ ಮತ್ತು ಮ್ಯೂಟಂಟ್ ರಘು, ಫಿಶ್ ಫ್ರೈ ಮಾಡುವ ವಿಡಿಯೋವೊಂದನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ, ರಘು ಮೀನು ಫ್ರೈ ಮಾಡುವಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡು ರಕ್ಷಿತಾ ಗಾಬರಿಗೊಂಡಿದ್ದು, ರಘು ಅವರ ಕಾಲಿಗೆ ಬೆಂಕಿಯ ಕಿಡಿ ತಗುಲಿದೆ.
ಬಿಗ್ಬಾಸ್ ರಕ್ಷಿತಾ ಶೆಟ್ಟಿ (Bigg Boss Rakshita Shetty) ಮತ್ತು ಮ್ಯೂಟಂಟ್ ರಘು ಅವರ ಜೊತೆಗೂಡಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ರಘು ಅವರು ಅತ್ಯಂತ ಅಲ್ಪ ಅವಧಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಲಕ್ಷ ಲಕ್ಷ ಫಾಲೋವರ್ಸ್ ಅನ್ನು ಗಳಿಸುವಲ್ಲಿ ರಕ್ಷಿತಾ ಅವರ ಪಾಲೂ ಬಹು ದೊಡ್ಡದು ಇದೆ.
26
ರಕ್ಷಿತಾ-ರಘು ಕಾಂಬಿನೇಷನ್
ರಕ್ಷಿತಾ ಶೆಟ್ಟಿ ಅವರು ಇದಾಗಲೇ ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ಸಕತ್ ಫೇಮಸ್ ಆಗಿದ್ದು, ಒಳ್ಳೆಯ ಆದಾಯವನ್ನೂ ಗಳಿಸುತ್ತಿದ್ದಾರೆ. ಇದೀಗ ರಘು ಅವರ ಜೊತೆಗೂಡಿಯೂ ವಿಡಿಯೋ ಮಾಡುವ ಮೂಲಕ ಇನ್ನಷ್ಟು ಜನಪ್ರಿಯತೆ ಗಳಿಸುತ್ತಿದ್ದಾರೆ.
36
ರಕ್ಷಿತಾ ಅಂದ್ರೆ ಮೀನು
ರಕ್ಷಿತಾ ಶೆಟ್ಟಿ ಫ್ಯಾನ್ಸ್ಗೆ ತಿಳಿದಿರುವಂತೆ, ಅವರು ಮೀನಿನ ಅಡುಗೆಯಲ್ಲಿ ಸಕತ್ ಫೇಮಸ್. ಅದೇ ರೀತಿ ರಘು ಅವರು ಕೂಡ ಇದಾಗಲೇ ತಮ್ಮ ಚಾನೆಲ್ನಲ್ಲಿ ಕೆಲವು ನಾನ್ವೆಜ್ ಡಿಶ್ ಮಾಡಿ, ನಾನ್ವೆಜ್ ಪ್ರಿಯರ ಬಾಯಲ್ಲಿ ನೀರೂರಿಸಿದ್ದಾರೆ.
ಆದರೆ, ಇದೀಗ ಇಬ್ಬರೂ ಸೇರಿ ಫಿಶ್ ಫ್ರೈ ಮಾಡುವಾಗಿನ ಶಾಕಿಂಗ್ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ರಘು ಅವರು ಮೀನನ್ನು ಹೆಂಚಿನ ಮೇಲೆ ಹಾಕಿ ಫ್ರೈ ಮಾಡುವ ಸಮಯದಲ್ಲಿ ಬೆಂಕಿ ಭುಗ್ ಎಂದು ಕೆನ್ನಾಲಿಗೆ ಚಾಚಿದೆ.
56
ಬೆಂಕಿ ನೋಡಿ ರಕ್ಷಿತಾ ಗಾಬರಿ
ಸಾಮಾನ್ಯವಾಗಿ ಇಂಥ ದೃಶ್ಯಗಳು ಹೋಟೆಲ್ಗಳಲ್ಲಿ ಮಾಮೂಲು. ಆದರೆ ಈ ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯ ನೋಡುಗರನ್ನು ಶಾಕ್ಗೆ ತಳ್ಳುತ್ತದೆ. ಬೆಂಕಿಯನ್ನು ನೋಡಿ ರಕ್ಷಿತಾ ಶೆಟ್ಟಿ ಗಾಬರಿಬಿದ್ದು ಹೋಗಿದ್ದಾರೆ.
66
ಕಾಲಿಗೆ ಬೆಂಕಿ ಕಿಡಿ
ರಘು ಅವರು ವಿಚಲಿತರಾಗದೇ ಇದ್ದರೂ, ಅವರ ಕಾಲಿಗೆ ಬೆಂಕಿಯ ಕಿಡಿ ತಗುಲಿರುವುದು ಈ ವಿಡಿಯೋದಲ್ಲಿ ತಿಳಿಯುತ್ತದೆ. Ragu anna almost got burnt ಎಂದು ರಘು ಅವರು ಇದಕ್ಕೆ ಶೀರ್ಷಿಕೆ ಕೊಟ್ಟಿರುವುದರಿಂದ ಅಭಿಮಾನಿಗಳು ಆತಂಕದಲ್ಲಿ ಈ ವಿಡಿಯೋ ನೋಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.