ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ, ಎಲ್ಲಾ ವಿರೋಧಗಳ ನಡುವೆ ಕೊನೆಗೂ ಆದಿ ಮತ್ತು ಭಾಗ್ಯಳ ಮದುವೆ ನಡೆದಿದೆ. ತಾಂಡವ್‌ನ ನಿಜಬಣ್ಣ ಬಯಲು ಮಾಡಿದ ಭಾಗ್ಯಳ ಮುಂದಿನ ಜೀವನ ಸುಖವಾಗಿರುವುದೇ ಅಥವಾ ಹೊಸ ಸವಾಲುಗಳು ಕಾದಿವೆಯೇ ಎಂಬ ಕುತೂಹಲ ವೀಕ್ಷಕರಲ್ಲಿದೆ.
ಕಲರ್ಸ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ವೀಕ್ಷಕರಿಗೆ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ಭಾಗ್ಯಳ ಜೊತೆ ಆದಿಯ ಮದುವೆಯಾಗಿದೆ. ಈ ಮದುವೆಗೆ ಅಮ್ಮ ಸುನಂದ ಮತ್ತು ಮಗಳು ತನ್ವಿಯ ಭಾರಿ ವಿರೋಧವಿತ್ತು. ಅವರ ಆಸೆಯಂತೆಯೇ ತಾಂಡವ್ ಜೊತೆ ಹಸೆಮಣೆ ಏರಿದ್ದ ಭಾಗ್ಯ, ಎಲ್ಲರ ಎದುರೇ ಆತನ ಅಸಲಿ ಮುಖವಾಡವನ್ನು ಕಳಚಿದ್ದಾಳೆ.
26
ಗಂಡನೇ ಪರದೈವ!
ಗಂಡ ಎಂಥವನಾದರೂ ಪರವಾಗಿಲ್ಲ, ಅವನ ಜೊತೆ ಸಹಿಸಿಕೊಂಡು ಹೋಗಬೇಕು, ಪ್ರಾಣ ತೆಗೆಯಲು ಗಂಡ ಮುಂದಾಗಲಿ, ಇನ್ನಿಲ್ಲದಂತೆ ಚಿತ್ರಹಿಂಸೆ ನೀಡಲಿ ಅವನೇ ಪರಮಾತ್ಮ, ಅವನೇ ಪರದೈವ, ಒಮ್ಮೆ ತಾಳಿ ಕಟ್ಟಿಸಿಕೊಂಡರೆ ಮುಗಿಯಿತು, ಹೆಣ್ಣಾದವಳು ಪ್ರತಿಕ್ಷಣ ನರಕ ಅನುಭವಿಸಿದರೂ ಅದು ಅವಳ ಹಣೆಬರಹ ಎಂದು ಹೇಳುವ ಎಷ್ಟೋ ಹೆಣ್ಣು ಹೆತ್ತವರ ಕುಟುಂಬದವರಿಗೆ ಸಾಕ್ಷಿಯಾಗಿ ನಿಂತವಳು ಭಾಗ್ಯಳ ಅಮ್ಮ ಸುನಂದಾ. ಆದರೆ, ಕೊನೆಗೂ ಅವಳು ತಲೆ ಬಾಗಿದ್ದಾಳೆ.
36
ಸೀರಿಯಲ್ ಮುಗಿದಿಲ್ಲ
ಕೊನೆಗೂ ಬಹುತೇಕ ವೀಕ್ಷಕರ ಆಸೆಯಂತೆ ಭಾಗ್ಯ ಮತ್ತು ಆದಿಯ ಮದುವೆಯಾಗಿದೆ. ಹಾಗೆಂದು ಸೀರಿಯಲ್ ಮುಗಿಯತ್ತಾ? ಇಲ್ಲಪ್ಪ, ಖಂಡಿತಾ ಇಲ್ಲ. ಇದಾಗಲೇ ಒಂದು ಸಾವಿರ ಸಂಚಿಕೆ ಪೂರೈಸಿರುವ ಸೀರಿಯಲ್ ಇನ್ನೂ ಒಂದಿಷ್ಟು ಸಾವಿರ ಸಂಚಿಕೆ ನಡೆಸಿದರೂ ಆಶ್ಚರ್ಯ ಇಲ್ಲ ಎನ್ನುವ ಕಮೆಂಟ್ಸ್ಗಳ ಸುರಿಮಳೆಯೇ ಆಗುತ್ತಿದೆ.
ಇದಾಗಲೇ ಸೀರಿಯಲ್ ಮುಗಿಯುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಆದಾಗಲೇ ಭಾಗ್ಯ ಅರ್ಥಾತ್ ಸುಷ್ಮಾ ಕೆ.ರಾವ್ ಸ್ಪಷ್ಟನೆ ಕೊಟ್ಟು ಸೀರಿಯಲ್ ಮುಗಿದಿಲ್ಲ ಎಂದಿದ್ದರು. ಈಗಲೂ ಸೀರಿಯಲ್ ಇನ್ನೂ ಒಂದಷ್ಟು ವರ್ಷ ನಡೆಯುತ್ತದೆ ಎಂದಿರೋ ಸೀರಿಯಲ್ ಪ್ರೇಮಿಗಳು ಕಥೆಯನ್ನೂ ತಾವೇ ಬರೆದಿದ್ದಾರೆ.
56
ಕರ್ನಾಟಕವೇ ಖುಷಿ ಪಡೋ ಸುದ್ದಿ
ಹಲವು ವೀಕ್ಷಕರು ಇದಕ್ಕೆ ಖುಷಿಯಿಂದ ಕಮೆಂಟ್ ಹಾಕಿದ್ದರೆ, ಮತ್ತೆ ಕೆಲವರು, ಇಡೀ ಕರ್ನಾಟಕಕ್ಕೆ ಖುಷಿ ಪಡುವ ಸುದ್ದಿ ಇದು, ಆದಿ ಭಾಗ್ಯ ಮದುವೆ ಆಯ್ತು ಎಂದಿದ್ದಾರೆ. ಮತ್ತೆ ಕೆಲವರು ಇದು ಅತ್ಯಂತ ಕೆಟ್ಟ ಕಥೆ ಎಂದಿದ್ದರೆ, ಹಲವರು ಈ ಕಮೆಂಟ್ ಮಾಡಿದವರಿಗೆ ಉಗಿಯುತ್ತಿದ್ದಾರೆ. ನಿಮ್ಮಂಥ ಮನಸ್ಥಿತಿಯಿಂದಲೇ ಹೆಣ್ಣುಮಕ್ಕಳು ಆ*ತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಗಂಡು ಏನು ಮಾಡಿದ್ರೂ ಮಾತನಾಡದವರು, ಹೆಣ್ಣು ಇನ್ನೊಂದು ಮದುವೆಯಾದರೆ ತಪ್ಪು ಎನ್ನೋದು ಎಂಥ ನೀಚ ಮನಸ್ಥಿತಿ ಎನ್ನುತ್ತಿದ್ದಾರೆ.
66
ಸಲೀಸಾಗಿ ಭಾಗ್ಯಳನ್ನು ಬಿಟ್ಬಿಡ್ತಾರಾ?
ಅದರೆ ಭಾಗ್ಯಳನ್ನು ಇಷ್ಟು ಸಲೀಸಾಗಿ ಬಿಟ್ಟುಬಿಡ್ತಾರಾ ನಿರ್ದೇಶಕರು ಎನ್ನೋದು ಈಗಿರುವ ಪ್ರಶ್ನೆ. ಅದಕ್ಕಾಗಿ ನೆಟ್ಟಿಗರೊಬ್ಬರು ತಾವೇ ಮುಂದಿನ ಸ್ಟೋರಿ ಬರೆದುಬಿಟ್ಟಿದ್ದಾರೆ. ರುದ್ರೇಶ್ ಸಿಎನ್ ಎನ್ನುವವರು ಫೇಸ್ಬುಕ್ನ ಪ್ರೊಮೋದಲ್ಲಿ ಕಮೆಂಟ್ ಮಾಡಿದ್ದಾರೆ. ಅವರು, ಅಭಿಮಾನಿಗಳೆಲ್ಲ ಶಾಂತ ರೀತಿಯಿಂದ ವರ್ತಿಸಬೇಕು... ಭಾಗ್ಯ ಇವತ್ತು ಮದುವೆಯಾಗಿದ್ದಾಳೆ ಇನ್ನ ಅವರ ಮನೆಗೆ ಹೋಗಬೇಕು ಅಲ್ಲಿ ಆದಿ ಅತ್ತೆ ಮತ್ತೆ ತಂಗಿ ಜೊತೆ ಹೆಣಗಬೇಕು ಆಮೇಲೆ ಆದಿಗೂ ಭಾಗ್ಯ ಮಧ್ಯೆ ಮಿಸ್ ಅಂಡರ್ಸ್ಟ್ಯಾಂಡಿಗ್ ಆಗಬೇಕು, ತದನಂತರ ಭಾಗ್ಯ ಮನಸ್ಸಿನಲ್ಲಿ ಮದುವೆ ವಯಸ್ಸಿಗೆ ಬಂದಿರೋ ಮಗಳಿದ್ರೂ... ಎರಡನೇ ಮದುವೆ ಯಾಕೆ ಆಗಬೇಕಾಗಿತ್ತು ಅಂತ ದೇವಸ್ಥಾನಕ್ಕೆ ಹೋಗಿ ಅಳಬೇಕು... ಈ ಮಧ್ಯೆ ಮಗಳಿಗೆ ಮದುವೆಯಾಗಿ ಹೊಸದಾಗಿ ಬರುವ ಅಳಿಯ ನಿಮ್ಮಮ್ಮ ಎರಡನೇ ಮದುವೆ ಆಗಿದೆ ಯಾಕೆ ಅಂತ ಕೇಳಬೇಕು..... ಸೊಸೆ ಭಾಗ್ಯನ ಸೊಸೆ ಅತ್ತೆ ನೀವು ಎರಡು ಮದುವೆ ಆಗಿದ್ದು.. ಯಾಕೆ ಅಂತ ಕೇಳಬೇಕು.. ಇದೆಲ್ಲ ಮುಂದಿನ ದಿನಮಾನಗಳಲ್ಲಿ ಇರುವುದರಿಂದ ಇಷ್ಟಕ್ಕೆ ಶುಭಂ... ಹೇಳಿಲ್ಲ ಅದರಿಂದ ಯಾರು ಗಲಾಟೆ ಮಾಡ್ಕೊಳ್ಳಬೇಡಿ ಭಾಗ್ಯಗೆ ಮೊಮ್ಮಕ್ಕಳು ಆಗೋವರೆಗೂ ಧಾರಾವಾಹಿ ಮುಗಿಯಲ್ಲ ಹೆದರಬೇಡಿ ಎಂದಿದ್ದು, ಇದಕ್ಕೆ ಹಲವರು ಹೌದುದು ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.