ಕನ್ನಡ ಕಿರುತೆರೆಯ ಬಾರ್ಬಿ ಡಾಲ್, ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಶೂಟ್ ಮತ್ತು ಹೊಸ ರೀಲ್ಸ್‌ಗಳನ್ನು ಅಪ್ಲೋಡ್ ಮಾಡುತ್ತಾರೆ.
ಇತ್ತೀಚಿಗೆ ಕಿತ್ತಲೆ ಬಣ್ಣದ ಇಂಡೋ ವೆಸ್ಟ್ರನ್ ಡ್ರೆಸ್ ಧರಿಸಿ ನಿವೇದಿತಾ ಫೋಟೋಶೂಟ್ ಮಾಡಿಸಿದ್ದರು. ಅಯ್ಯೋ ಸೆರಗು ಹಾಕಿಲ್ಲ, ಸರಿಯಾಗಿ ಕೂತಿಲ್ಲ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.
ಇದೀಗ ಅದೇ ಲುಕ್‌ನಲ್ಲಿ ಸೆರಗು ಹಾಕಿದ್ದರೆ ಹೇಗೆ ಕಾಣಿಸುತ್ತದೆ ಎಂದು ನಿವೇದಿತಾ ಗೌಡ ಹೊಸ ಫೋಟೋ ಅಪ್ಲೋಡ್ ಮಾಡಿದ್ದಾರೆ. ಗೋಲ್ಡ್ ಬಣ್ಣದ ದಾವಣಿ ಧರಿಸಿಗೆ ಹಾಸಿಗೆ ಮೇಲೆ ಕುಳಿತು ಪೋಸ್ ಕೊಟ್ಟಿದ್ದಾರೆ.
ಬೆಡ್ ರೂಮ್‌ನಲ್ಲಿ ನಿವೇದಿತಾ ಫೋಟೋ ತೆಗೆದಿದ್ದು ಯಾರು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅದಿಕ್ಕೆ ತಮ್ಮ ಸ್ನೇಹಿತೆ ಜೊತೆ ಅದೇ ರೂಮ್‌ನಲ್ಲಿ ಮಾಡಿರುವ ರೀಲ್ಸ್ ಕೂಡ ಅಪ್ಲೋಡ್ ಮಾಡಿದ್ದಾರೆ.
'ಅಯ್ಯೋ ಜನರ ಗಮನ ಸೆಳೆಯಬೇಕು ಎಂದು ಯಾಕೆ ಬೆಡ್ ರೂಮ್ ಮತ್ತು ಬಾತ್‌ರೂಮ್‌ನಲ್ಲಿ ಹೆಚ್ಚಾಗಿ ಫೋಟೋಶೂಟ್ ಮಾಡುವುದು ಬೇರೆ ಜಾಗ ಇಲ್ವಾ ಅಥವಾ ಗಮನ ಸೆಳೆಯಲು ಆಗುತ್ತಿಲ್ಲವೇ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ನಂತರ ನಿವೇದಿತಾ ಯಾವ ಪ್ರಾಜೆಕ್ಟ್‌ಗೂ ಸಹಿ ಹಾಕಿರಲಿಲ್ಲ. ಅನುಬಂಧ ಅವಾರ್ಡ್ ಸಮಯಲ್ಲಿ ಕೊಂಚ ಆಂಕರಿಂಗ್ ಪ್ರಯತ್ನ ಪಟ್ಟರು. ಅದಾದ ಮೇಲೆ ಜಾಹೀರಾತುಗಳಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ.
ಇದೀಗ ಬಿಗ್ ಬಾಸ್ ಸೀಸನ್ 11 ಆರಂಭವಾಗಿದ್ದು ಅಷ್ಟಾಗಿ ಮಜಾ ಸಿಗುತ್ತಿಲ್ಲ ಎಂದು ಜನರು ಟ್ರೋಲ್ ಮಾಡುತ್ತಿದ್ದಾರೆ. ಹೀಗಾಗಿ ನಿವೇದಿತಾ ಡಿಮ್ಯಾಂಡ್‌ನಲ್ಲಿ ಇರುವ ಚಲುವೆ ಕರೆಸಿ ನೋಡಿ ಹುಡುಗರು ನೋಡೋಕೆ ಶುರು ಮಾಡುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.