ನಟನೆಗೂ ಸೈ, ಡ್ಯಾನ್ಸ್ ಗೂ ಸೈ ಎನ್ನುವ ಬಬ್ಲಿ ಗರ್ಲ್ ಮೇಘನಾ ಶಂಕರಪ್ಪ ಲವ್, ಲೈಫ್, ಫ್ಯಾಮಿಲಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ

Published : Oct 14, 2024, 03:48 PM ISTUpdated : Oct 14, 2024, 04:41 PM IST

ಸೀತಾ ರಾಮ ಧಾರಾವಾಹಿಯ ಬಬ್ಲಿ ಬೆಡಗಿ ಪ್ರಿಯಾ ಆಲಿಯಾಸ್ ಮೇಘನಾ ಶಂಕರಪ್ಪ ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸ್ಪೆಷಲ್ ದಿನದಂದು ನಟಿಯ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ನಿಮಗಾಗಿ.   

PREV
18
ನಟನೆಗೂ ಸೈ, ಡ್ಯಾನ್ಸ್ ಗೂ ಸೈ ಎನ್ನುವ ಬಬ್ಲಿ ಗರ್ಲ್ ಮೇಘನಾ ಶಂಕರಪ್ಪ ಲವ್, ಲೈಫ್, ಫ್ಯಾಮಿಲಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ

ಸೀತಾ ರಾಮ ಧಾರಾವಾಹಿಯಲ್ಲಿ (Sita Rama Serial) ಸೀತಾ ಮತ್ತು ರಾಮನಷ್ಟೇ ಜನ ಪ್ರೀತಿ ಕೊಟ್ಟಿರೋದು ಅಂದ್ರೆ ಅದು ಅಶೋಕ್ ಮತ್ತು ಪ್ರಿಯಾ ಜೋಡಿಗೆ. ಇಬ್ಬರ ನಡುವಿನ ಪ್ರೀತಿ, ಅನ್ಯೋನ್ಯತೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ರೀತಿ ಎಲ್ಲವೂ ಜನರಿಗೆ ತುಂಬಾನೆ ಇಷ್ಟವಾಗಿದೆ. ಅದರಲ್ಲೂ ಪ್ರಿಯಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಜನರಿಗೆ. 
 

28

ಯಾವಾಗ್ಲೂ ನಗುನಗುತ್ತಾ ಮಾತನಾಡುವ, ಇನ್ನೊಬ್ಬರನ್ನು ನಗಿಸುವ, ಜೀವನವನ್ನು ಪ್ರೀತಿಸುವ ಪ್ರತಿಯೊಂದು ಹೆಜ್ಜೆಯನ್ನು ಎಂಜಾಯ್ ಮಾಡುವ ಬಬ್ಲಿ ಹುಡುಗಿ ಪ್ರಿಯಾ ಅಂದ್ರೆ ವೀಕ್ಷಕರಿಗೆ ಏನೋ ವಿಶೇಷ ಪ್ರೀತಿ. ಪ್ರಿಯಾ ಪಾತ್ರಕ್ಕೆ ಜೀವ ತುಂಬಿದ ನಟಿ ಮೇಘನಾ ಶಂಕರಪ್ಪ (Meghana Shankarappa). ಇವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರೋ ಬೆಡಗಿಯ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ. 
 

38

ಮೂಲತಃ ಭರತನಾಟ್ಯ ಕಲಾವಿದೆಯಾಗಿರುವ ಮೇಘನಾ, ನಟಿ, ನಿರೂಪಕಿಯಾಗಿ ಕಿರುತೆರೆಯಲ್ಲಿ ಗುರುತಿಸಿಕೊಂಡವರು. ದಾವಣಗೆರೆಯ (Davanagere)ಈ ಬಬ್ಲಿ ಬ್ಯೂಟಿ ಬಿಬಿಎ ಪದವೀದರೆ. ಬಿಬಿಎ ಅಂದ್ರೆ ಬ್ಯಾಚುಲರ್ ಆಫ್ ಬಿಸ್ನೆಸ್ ಅಡ್ಮಿನಿಸ್ಟ್ರೇಶನ್ ಡಿಗ್ರಿಯನ್ನ ಆಕ್ಸಫರ್ಡ್ ಕಾಲೇಜ್ ನಲ್ಲಿ ಮಾಡಿದ್ದಾರೆ 
 

48

ನಿರೂಪಕಿಯಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಂತಹ ಮೇಘನಾ ನಟಿಯಾಗಿ ಕರಿಯರ್ ಆರಂಭಿಸಿದ್ದು, ಕಿನ್ನರಿ ಸೀರಿಯಲ್ ಮೂಲಕ. ಇದಾದ ನಂತರ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಮೊದಲಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ ಅಷ್ಟೇ ಅಲ್ಲ, ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಇವರು ನಟಿಸಿದ್ದಾರೆ. 
 

58

ಪಾತ್ರ ಪಾಸಿಟಿವ್ ಆಗಿರಲಿ ಅಥವಾ ನೆಗೆಟಿವ್ (negative role)ಆಗಿರಲಿ ಎರಡೂ ಪಾತ್ರಕ್ಕೂ ಜೀವ ತುಂಬಿ ನಟಿಸುವ ಮೇಘನಾ ಸದ್ಯ ಸೀತಾ ರಾಮ ಧಾರಾವಾಹಿಯ ಪ್ರಿಯ ಆಗಿ ಗಮನ ಸೆಳೆಯುತ್ತಿದ್ದಾರೆ. ಪ್ರಿಯ ಪಾತ್ರ ಮತ್ತು ಮೇಘನಾ ರಿಯಲ್ ಲೈಫ್ ಗೆ ತುಂಬಾನೆ ಹೋಲಿಕೆ ಇದೆಯಂತೆ, ಮೇಘನಾ ಪ್ರಿಯಾ ಆಗಿ ನಟಿಸೋದೆ ಇಲ್ವಂತೆ, ತಾನು ತಾನಾಗಿಯೇ ಇರ್ತಾರಂತೆ ಮೇಘನಾ, ಅಂದ್ರೆ ರಿಯಲ್ ಲೈಫಲ್ಲೂ ಪ್ರಿಯಾ ಬಬ್ಲಿ ಹುಡುಗೀನೆ. 
 

68

ಇನ್ನು ಪ್ರಿಯಾ ಮತ್ತು ಅಶೋಕ್ ಜೋಡಿ ಅಂದ್ರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ. ಇಬ್ಬರನ್ನೂ ರಿಯಲ್ ಲೈಫಲ್ಲೂ ಜೋಡಿಯಾಗಿ ನೋಡಬೇಕು ಎಂದು ವೀಕ್ಷಕರು ಬಯಸ್ತಿದ್ದಾರೆ. ಆದರೆ ಪ್ರಿಯಾಗೆ ಈಗಾಗಲೇ ಒಬ್ಬ ಬಾಯ್ ಫ್ರೆಂಡ್ ಕೂಡ ಇದ್ದಾರೆ. ಇಲ್ಲಿವರೆಗೂ ಮೇಘಾನ ತಮ್ಮ ಬಾಯ್ ಫ್ರೆಂಡ್ ಮುಖ ರಿವೀಲ್ ಮಾಡಿಲ್ಲ, ಆದ್ರೆ, ಇಬ್ಬರು ಉಂಗುರ ಧರಿಸಿರುವ ಫೋಟೊ ಶೇರ್ ಮಾಡೋ ಮೂಲಕ ಹಿಂಟ್ ಕೊಟ್ಟಿದ್ರು. 
 

78

ಇದೇ ವರ್ಷದ ಆರಂಭದಲ್ಲಿ ಮೇಘನಾ ತಮ್ಮ ಕನಸಿನ ಹೊಸ ಮನೆಗೆ ಕಾಲಿಟ್ಟಿದ್ದರು ಆ ಮೂಲಕ ತಮ್ಮ ಜೀವನದ ದೊಡ್ಡ ಕನಸನ್ನು ನನಸು ಮಾಡಿದ್ದರು. ಶೀಘ್ರದಲ್ಲೇ ಮೇಘನಾ ಮದ್ವೆ ಆಗ್ತಿದ್ದಾರ ಅನ್ನೋ ಸುದ್ದಿ ಕೇಳಿ ಬರ್ತಿದೆ, ಆದ್ರೆ ಇದುವರೆಗೂ ಆ ಬಗ್ಗೆ ಯಾವುದೇ ಕ್ಲಾರಿಟಿ ಮಾತ್ರ ಸಿಕ್ಕಿಲ್ಲ. 
 

88

ಇನ್ನು ಮೇಘನಾ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD) ಸ್ಪರ್ಧಿ ಕೂಡ ಆಗಿದ್ದು, ಅಲ್ಲೂ ಕೂಡ ತಮ್ಮ ಡ್ಯಾನ್ಸ್ ಜೊತೆಗೆ ಮಾತಿನ ಮೂಲಕ ಜನಮನ ಗೆದ್ದಿದ್ದಾರೆ. ಇತ್ತೀಚೆಗೆ ಫ್ಯಾಮಿಲಿ ರೌಂಡ್ಸ್ ನಡೆದಿದ್ದು, ಅಲ್ಲೂ ಕೂಡ ಪ್ರಿಯಾ ಜೊತೆ ಅಶೋಕ್ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ಅಶೋಕ್ ಅವರೇನಾ ಮೇಘನಾ ರಿಯಲ್ ಬಾಯ್ ಫ್ರೆಂಡ್ ಅನ್ನೋ ಕುತೂಹಲ ಕೂಡ ಹೆಚ್ಚಾಗಿದೆ. ಒಟ್ಟಲ್ಲಿ ಜನರು ತೆರೆ ಮೇಲಿನ ತುಂಟ ಹುಡುಗಿ ಪ್ರಿಯಾ - ಮೆಚ್ಯೂರ್ ಹುಡುಗ ಅಶೋಕ್ ಜೋಡಿ, ರಿಯಲ್ ಲೈಫಲ್ಲೂ ಒಂದಾಗಲಿ ಎಂದು ಹಾರೈಸ್ತಿದ್ದಾರೆ. 
 

Read more Photos on
click me!

Recommended Stories