ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ಅವರ ಐಷಾರಾಮಿ ಜೀವನ ಮತ್ತು ವಿದೇಶಿ ಪ್ರವಾಸಗಳು ಚರ್ಚೆಗೆ ಗ್ರಾಸವಾಗಿವೆ. ತಮ್ಮ ದುಬಾರಿ ಜೀವನಶೈಲಿಗೆ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗಳಿಗೆ ನಿವೇದಿತಾ ಉತ್ತರಿಸಿದ್ದಾರೆ.
ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ (Niveditha Gowda) ಅವರ ಲವ್ ಮತ್ತು ಡಿವೋರ್ಸ್ ಸುದ್ದಿ ಎಲ್ಲರಿಗೂ ತಿಳಿದದ್ದೇ. ಬಿಗ್ಬಾಸ್ನಲ್ಲಿ ಲವ್ ಆಗಿ, ಹೊರ ಬಂದು ಮದ್ವೆ ಆಗಿದ್ದು, ಇದಕ್ಕೂ ಮುನ್ನ ಮೈಸೂರು ದಸರಾ ವೇದಿಕೆಯನ್ನು ಪ್ರಪೋಸ್ ವೇದಿಕೆ ಮಾಡಿಕೊಂಡು ಕೆಂಗಣ್ಣಿಗೆ ಗುರಿಯಾದದ್ದು, ಇದಾದ ಕೆಲವೇ ವರ್ಷಗಳಲ್ಲಿ ಡಿವೋರ್ಸ್ ಆದದ್ದು ಈಗ ಇತಿಹಾಸ.
27
ತುಂಡುಡುಗೆಯಿಂದಲೇ ಬಿಗ್ಬಾಸ್ ಆಫರ್
ಮೊದಲಿನಿಂದಲೂ ರೀಲ್ಸ್ ಮಾಡುತ್ತಲೇ, ತುಂಡುಡುಗೆ ಮೂಲಕವೇ ಫೇಮಸ್ ಆಗಿ, ಟ್ರೋಲ್ನಿಂದಾಗಿಯೇ ಬಿಗ್ಬಾಸ್ (Bigg Boss) ಅವಕಾಶ ಗಿಟ್ಟಿಸಿಕೊಂಡಿದ್ದ ನಿವೇದಿತಾ ಗೌಡ, ರೀಲ್ಸ್ ಅನ್ನು ಮದುವೆಯಾದ ಮೇಲೂ ಮುಂದುವರೆಸಿದ್ದರು. ಆದರೆ, ಡಿವೋರ್ಸ್ ಬಳಿಕ, ದೇಹ ಪ್ರದರ್ಶನ ಒಂದು ಹಂತ ಮುಂದಕ್ಕೆ ಹೋಗಿದೆ. ಬಳಕುವ ಬಳ್ಳಿಯಂತಿರುವ ನಿವೇದಿತಾ ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಪ್ರದರ್ಶನ ಮಾಡುತ್ತಾರಾ ಎಂದೂ ಕೇಳುವ ದೊಡ್ಡ ವರ್ಗವೇ ಇದೆ.
37
ಡಿವೋರ್ಸ್ಗೆ ಕಾರಣ
ಈಕೆಯ ಐಷಾರಾಮಿ ಜೀವನ, ದುಬಾರಿ ವಸ್ತುಗಳು ಹಾಗೂ ತಮ್ಮ ಸಿಂಪಲ್ ಜೀವನದ ನಡುವೆ ಹೊಂದಾಣಿಕೆ ಆಗುತ್ತಿರಲಿಲ್ಲ ಎಂದು ಇದಾಗಲೇ ದೂರವಾಗಿರುವ ಕಾರಣವನ್ನು ಚಂದನ್ ಶೆಟ್ಟಿ (Chandan Shetty) ಕೊಟ್ಟಾಗಿದೆ. ಆದರೆ ಯಾವುದೇ ಗದ್ದಲ-ಗಲಾಟೆ ಇಲ್ಲದೇ ಡಿವೋರ್ಸ್ ಆಗಿದ್ದು, ಈಗಲೂ ಚಂದನ್ ಶೆಟ್ಟಿ ನಿವೇದಿತಾದ ಮೇಲೆ ಅದೇ ಗೌರವವನ್ನು ಉಳಿಸಿಕೊಂಡಿದ್ದಾರೆ.
ಆದರೆ ಡಿವೋರ್ಸ್ ಬಳಿಕ ನಿವೇದಿತಾ ಅವರ ಫಾರಿನ್ ಟೂರ್ ಹೆಚ್ಚಾಗಿದೆ. ಶ್ರೀಲಂಕಾದ ಜೂಜುಅಡ್ಡೆ, ಕ್ಲಬ್ಬು, ಪಬ್ಬು ಎಂದೆಲ್ಲಾ ತುಂಡುಡುಗೆಯಲ್ಲಿಯೇ ಹೋಗಿ ಧಾರಾಳ ಪ್ರದರ್ಶನ ಮಾಡಿ ಅದನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಾಗಿದ್ದರೆ ಇವರ ಆದಾಯದ ಮೂಲ ಯಾವುದು? ಇಷ್ಟು ಐಷಾರಾಮಿ ಜೀವನಕ್ಕೆ ದುಡ್ಡು ಎಲ್ಲಿಂದ ಬರುತ್ತೆ ಎಂದು ಹಲವರು ಪ್ರಶ್ನಿಸೋದು ಇದೆ.
57
ಟ್ರೋಲ್ಸ್ನಿಂದಲೇ ದುಡಿಮೆ!
ಅದಕ್ಕೆಲ್ಲಾ ನಟಿ ಈಗ ಉತ್ತರ ಕೊಟ್ಟಿದ್ದಾರೆ. ವಯಸ್ಸು ಚಿಕ್ಕದಾದರೂ ಟ್ರೋಲ್ ಮೂಲಕವೇ ಈಕೆಯ ರೀಲ್ಸ್ ಫೇಮಸ್. ಅದರಿಂದ ನಿವೇದಿತಾ ಸಕತ್ ದುಡಿಮೆ ಮಾಡುತ್ತಿದ್ದಾರೆ. ಟ್ರೋಲ್ ಮಾಡುವವರು ಉಗಿದು ಉಪ್ಪಿನಕಾಯಿ ಹಾಕಿದ್ದಷ್ಟೂ ಫೇಮಸ್ ಆಗುತ್ತಾ, ಆದಾಯ ಗಳಿಸಿಕೊಳ್ತಿದ್ದಾರೆ ನಿವೇದಿತಾ. ಇದೇ ಕಾರಣಕ್ಕೆ ಪ್ರಾಡಕ್ಟ್ಸ್ ಪ್ರಮೋಷನ್ಗೂ ಇವರಿಗೆ ಭಾರಿ ಬೇಡಿಕೆ ಇದೆ.
67
ಆದಾಯ ಮೂಲ ಇದೇ...
ಇಷ್ಟೇ ಅಲ್ಲದೇ ಇನ್ನೂ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ, ರಿಯಾಲಿಟಿ ಷೋಗಳಲ್ಲಿ ಭಾಗವಹಿಸುತ್ತಾರೆ. ಇವೆಲ್ಲವೂ ಸುಮ್ಮನೇ ಅಲ್ಲ. ಇಂಥ ಸೆಲೆಬ್ರಿಟಿಗಳಿಗೆ ಹೋದಲ್ಲಿ, ಬಂದಲ್ಲಿ ದುಡ್ಡು ಕುಣಿದಾಡುತ್ತದೆ. ಮತ್ತೆ ಕೆಲವು ದೇಶಗಳು ಇಂಥವರನ್ನು ಕರೆಸಿಕೊಳ್ಳುವುದೂ ಇದೆ. ಆದ್ದರಿಂದ ನಟಿಯ ಆದಾಯ ಮೂಲ ಅವರ ದುಡಿಮೆಯೇ ಹೊರತು ಬೇರೇನೂ ಅಲ್ಲ.
77
ನನ್ನದೇ ದುಡ್ಡಿನಿಂದ ಜೀವನ
ನಾನು ಚಂದನ್ ಶೆಟ್ಟಿ ಜೊತೆಗೆ ಇರುವಾಗಲೂ ನನ್ನದೇ ದುಡ್ಡು ಖರ್ಚು ಮಾಡುತ್ತಿದ್ದೆ. ನನ್ನದು ಐಷಾರಾಮಿ ಜೀವನ ನಿಜ ಎನ್ನೋದನ್ನು ನಿವೇದಿತಾ ಒಪ್ಪಿಕೊಂಡಿದ್ದಾರೆ. ಈಗ ಲೈಫ್ನಲ್ಲಿ ಏನೇ ಮಾಡಿದರೂ ಅದು ನನ್ನ ಸ್ವಂತ ದುಡಿಮೆಯ ಹಣ ಎಂದೂ ಸ್ಪಷ್ಟನೆ ನೀಡಿದ್ದಾರೆ.