ಪದೇ ಪದೇ ಮೂಗು ಮುಟ್ಟಿಕೊಳ್ಳುವೆ, ಇದು ಸಮಸ್ಯೆ ಅಲ್ಲ ಕಾರಣವಿದೆ; ಸತ್ಯ ಬಿಚ್ಚಿಟ್ಟ ಬಿಗ್ ಬಾಸ್ ನಮ್ರತಾ

Published : Apr 10, 2024, 01:05 PM ISTUpdated : Apr 10, 2024, 03:33 PM IST

ಬಿಗ್ ಬಾಸ್ ಸ್ಪರ್ಧಿ ನಮ್ರತಾ ಪುಟ್ಟು ಗೌರಿ ಮದುವೆಯಲ್ಲಿ ನಟಿಸಿ, ನಾಗಿಣಿ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದವರು. ಆದರೆ, ಬಿಗ್ ಬಾಸ್ ಮನೆಗೆ ಹೋದ ಮೇಲೆ ಇವರ ಫಾಲೋಯರ್ಸ್ ಹೆಚ್ಚಾಗಿದ್ದು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಸಕತ್ತೂ ಲೈಕ್ಸ್, ಕಮೆಂಟ್ಸ್ ಗಿಟ್ಟಿಸಿಕೊಳ್ಳುತ್ತಾರೆ. ಅದರಲ್ಲಿಯೂ ಕಿಶನ್ ಬೆಳಗಲಿ ಜೊತೆ ಸದಾ ಡ್ಯಾನ್ಸ್ ವೀಡಿಯೋ ಹಾಕುವ ನಮ್ರತಾ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ನೆಟ್ಟಿಗರು ಕ್ಯೂರಿಯಸ್ ಆಗಿರುತ್ತಾರೆ. ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ ಇವರಿಗೆ ಇನ್ನೂ ಮೇಕಪ್ ಸಹ ಮಾಡಿಕೊಳ್ಳಲು ಬರೋಲ್ವಂತೆ. ಪದೆ ಪದೇ ಮೂಗು ಮುಟ್ಟಿಕೊಳ್ಳೋದು ಯಾಕೆ? ಅವರೇ ಅವರ ಬಗ್ಗೆ ಏನೇನು ಹೇಳಿದ್ದಾರೆ ಕೇಳಿಸಿಕೊಳ್ಳಿ.  

PREV
19
ಪದೇ ಪದೇ ಮೂಗು ಮುಟ್ಟಿಕೊಳ್ಳುವೆ, ಇದು ಸಮಸ್ಯೆ ಅಲ್ಲ ಕಾರಣವಿದೆ; ಸತ್ಯ ಬಿಚ್ಚಿಟ್ಟ ಬಿಗ್ ಬಾಸ್ ನಮ್ರತಾ

ಕಿರುತೆರೆ ನಾಗಿಣಿ, ಸ್ಟೈಲ್ ಐಕಾನ್ ನಮ್ರತಾ ಗೌಡ ಬಿಗ್ ಬಾಸ್‌ ಕಾಲಿಟ್ಟ ಮೇಲೆ ಸಾವಿರಾರು ಮಂದಿ ಪ್ರೀತಿ ಗಳಿಸಿದ್ದಾರೆ. ಹೀಗಾಗಿ ಗೂಗಲ್‌ನಲ್ಲಿ ನಮ್ರತಾ ಬಗ್ಗೆ ಹುಡುಕುವವರೇ ಹೆಚ್ಚು. 

29

 ಬಿಗ್ ಬಾಸ್‌ಗೆ ಕಾಲಿಡುವ ಮುನ್ನ ನಮ್ರತಾ ರಿವೀಲ್ ಮಾಡಿದ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರಗಳು ಈಗ ವೈರಲ್ ಆಗುತ್ತಿದೆ. ಅಲ್ಲದೆ ಎರಡು ಹೆಸರು ಇರುವುದು ಕೇಳಿ ಶಾಕ್ ಆಗಿದ್ದಾರೆ. 

39

ಬಾಲಿವುಡ್ ನಟಿ ನಮ್ರತಾ ಶಿರೋಡ್ಕರ್‌ ಮಿಸ್ ಇಂಡಿಯಾ ಕಿರೀಟ ಗೆದ್ದಾಗ ನಮ್ರತಾ ಹುಟ್ಟಿದ್ದು. ಆಕೆಯ ದೊಡ್ಡ ಅಭಿಮಾನಿ ಆಗಿದ್ದ ಅವರ ತಂದೆ ಈ ಹೆಸರನ್ನು ಆಯ್ಕೆ ಮಾಡುತ್ತಾರೆ.

49

ಬಿಗ್ ಬಾಸ್‌ ನಮ್ರತಾಗೆ ಎರಡು ಹೆಸರಿದೆ. ತಾಯಿ ಮನೆ ಕಡೆ ಆಕೆಯನ್ನು ವರ್ಷಿತಾ ಎಂದು ಕರೆಯುತ್ತಾರೆ. ತಂದೆ ಮನೆಗೆ ಕಡೆ ನಮ್ರತಾ ಎನ್ನುತ್ತಾರಂತೆ.

59

ಸುಮಾರು 7ನೇ ವಯಸ್ಸಿಗೆ ಬಣ್ಣ ಹಚ್ಚಿದ ನಮ್ರತಾ ಈಗಲೂ ಮೇಕಪ್ ಮಾಡಿಕೊಳ್ಳಲು ಬರೋಲ್ಲ ಎನ್ನುತ್ತಾರೆ. ಕಷ್ಟ ಪಟ್ಟು ಕಣ್ಣು ಮೇಕಪ್ ಮಾಡಿಕೊಳ್ಳುತ್ತಾರಂತೆ.

69

ಕ್ಯಾಮೆರಾ ಮುಂದೆ ಪಟ ಪಟ ಅಂತ ಮಾತನಾಡುವ ನಮ್ರತಾ ಕ್ಯಾಮೆರಾ ಆಫ್‌ ಅದಾಗ ಸೈಲೆಂಟ್ ಆಗಿ ಬಿಡುತ್ತಾರಂತೆ.  ಕ್ಯಾಮೆರಾ ಮುಂದೆ ಧೈರ್ಯ ಜಾಸ್ತಿ ಅಂತಾರೆ. 

79

ಇನ್ನು ನಮ್ರತಾಗೆ ಯಾವ ಪ್ರಾಣಿ ಅಂದ್ರೆನೂ ಇಷ್ಟ ಇಲ್ಲ. ಅದರಲ್ಲೂ ಕ್ರಿಮಿ ಕೀಟಗಳು ನೋಡಿದರೆ ಭಯದಿಂದ ಓಡಿ ಹೋಗುತ್ತಾರೆ ಆಮೇಲೆ ತಂದೆ ಬಂದು ಸಾಯಿಸುವವರೆಗೂ ನೆಮ್ಮದಿ ಇಲ್ಲ. 

89

ನನ್ನ ಬಗ್ಗೆ ವಿಚಿತ್ರ ಫ್ಯಾಕ್ಟ್ ಹೇಳಬೇಕು ಅಂದ್ರೆ ನಾನು ಲಿಪ್‌ಸ್ಟಿಕ್ ವ್ಯಕ್ತಿ. ಬೆಳಗ್ಗೆ ಎದ್ದ ತಕ್ಷಣ ಲಿಪ್‌ಸ್ಟಿಕ್ ಹಾಕಿಕೊಳ್ಳಬೇಕು ಮಲಗುವಾಗಲೂ ಲಿಪ್‌ಸ್ಟಿಕ್ ಬೇಕು. 

99

ಒಬ್ಬರ ಜೊತೆ ನಾನು ಮಾತನಾಡುವಾಗ ಪದೇ ಪದೇ ಮೂಗು ಮುಟ್ಟಿಕೊಳ್ಳುತ್ತಿರುವೆ ಅಂದ್ರೆ nervous ಆಗಿರುವೆ ಎಂದು. ಟೆನ್ಶನ್ ಅಥವಾ concious  ಆಗಿರುವಾಗ ನಾನು ಮೂಗು ಮುಟ್ಟಿಕೊಳ್ಳುವುದು. ಇದು ಸಮಸ್ಯೆ ಅಂತ ಹೇಳುವುದಿಲ್ಲ ಆದರೆ ನನ್ನ ಒಂದು ಕ್ಯಾರೆಕ್ಟರ್.

Read more Photos on
click me!

Recommended Stories