ಸತ್ಯ ಅಮೂಲ್ ಬೇಬಿಗೆ ಹೆಣ್ಣು ಮಗು, ಸೋಷಿಯಲ್ ಮೀಡಿಯಾ ಪೋಸ್ಟ್ ಹೇಗಿದೆ ನೋಡಿ

Published : Apr 09, 2024, 12:26 PM IST

ಸತ್ಯ ಸೀರಿಯಲ್ ಖ್ಯಾತಿಯ ಸಾಗರ್ ಬಿಳಿ ಗೌಡ ಪತ್ನಿ ಸಿರಿ ರಾಜು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸಂಭ್ರಮದ ವಿಷಯವನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.   

PREV
17
ಸತ್ಯ ಅಮೂಲ್ ಬೇಬಿಗೆ ಹೆಣ್ಣು ಮಗು, ಸೋಷಿಯಲ್ ಮೀಡಿಯಾ ಪೋಸ್ಟ್ ಹೇಗಿದೆ ನೋಡಿ

ಝೀ ಕನ್ನಡದಲ್ಲಿ (Zee Kaannada) ಪ್ರಸಾರವಾಗುತ್ತಿರುವ ಸತ್ಯ ಸೀರಿಯಲ್ ನಾಯಕ ಅಮೂಲ್ ಬೇಬಿ ಕಾರ್ತಿಕ್ ಪಾತ್ರದಲ್ಲಿ ನಟಿಸುತ್ತಿರುವ ನಟ ಸಾಗರ್ ಬಿಳಿ ಗೌಡ (Sagar BiliGowda) ಮತ್ತು ಪತ್ನಿ ಸಿರಿ ರಾಜು ಪೋಷಕರಾದ ಸಂಭ್ರಮದಲ್ಲಿದ್ದಾರೆ. 
 

27

ಸಾಗರ್ ಬಿಳಿಗೌಡ ಪತ್ನಿ ಸಿರಿ ರಾಜು (Siri Raaju) ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸಂಭ್ರಮದ ವಿಷಯವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. 
 

37

ಕಳೆದ ತಿಂಗಳು ಅಂದರೆ ಮಾರ್ಚ್‌ನಲ್ಲಿ ಸಿರಿ ರಾಜು ಅವರ ಅದ್ಧೂರಿ ಸೀಮಂತ ಸಮಾರಂಭ ಮಾಡಿಕೊಂಡಿದ್ದರು. ಸೀಮಂತ ಮತ್ತು ಬೇಬಿ ಬಂಪ್ ಫೋಟೋ ಶೂಟ್ ಭಾರಿ ವೈರಲ್ ಆಗಿತ್ತು. 
 

47

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಗರ್ ಮತ್ತು ಸಿರಿ ಜೊತೆಯಾಗಿರುವ ಫೋಟೋ ಶೇರ್ ಮಾಡಿ, ಒಂದು ಕೈಯಲ್ಲಿ ಭ್ರೂಣದ ಸ್ಕ್ಯಾನಿಂಗ್ ಚಿತ್ರ, ಮತ್ತೊಂದು ಕೈಯಲ್ಲಿ ಇಟ್ಸ್ ಎ ಗರ್ಲ್ (Its a Girl) ಎಂದು ಬರೆದುಕೊಂಡಿರುವ ಬೋರ್ಡ್ ಹಿಡಿದುಕೊಂಡಿದ್ದಾರೆ. 
 

57

ಜೊತೆಗೆ ಸಿರಿಯವರು ನಮ್ಮ ಜೀವನಕ್ಕೆ ಪುಟ್ಟ ಕಿನ್ನರಿಯ ಆಗಮನವಾಗಿದೆ ಎಂದು ಬರೆದುಕೊಂಡಿದ್ದಾರೆ (We are blessed to announce the arrival of our little angel )
 

67

ಸಿರಿ -ಸಾಗರ್ ದಂಪತಿಗೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ವಿಶ್ ಮಾಡಿ ಶುಭಕೋರಿದ್ದಾರೆ. ಮಗುವಿನ ಜನನ ಇವತ್ತೆ ಆಗಿದೆಯೇ ಅಥವಾ ಯಾವತ್ತು ಆಗಿದೆ ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

77

ಸಾಗರ್ ಬಿಳಿ ಗೌಡ ಸದ್ಯ ಸತ್ಯ ಸೀರಿಯಲ್‌ನಲ್ಲಿ ಕಾರ್ತಿಕ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಪ್ರೆಗ್ನೆನ್ಸಿ ಬಳಿಕ ನಟನೆಯಿಂದ ಸಿರಿ ದೂರ ಉಳಿದಿದ್ದಾರೆ. ಅವರು ಇದಕ್ಕೂ ಮುನ್ನ ತೆಲುಗು ಸೀರಿಯಲ್, ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories