ವಿಡಿಯೋ ಹಾಕಿ ಮೂರೇ ಗಂಟೆಗಳಲ್ಲಿ Bigg Boss ರಘುಗೆ ಬಂದೇ ಬಿಟ್ಟು ಯುಟ್ಯೂಬ್​ ದುಡ್ಡು! ಸಿಕ್ಕಿತು ಬೆಳ್ಳಿ ಬಟನ್​

Published : Mar 10, 2026, 07:51 PM IST

ಬಿಗ್​ಬಾಸ್​ ಖ್ಯಾತಿಯ ಮ್ಯೂಟಂಟ್​ ರಘು ತಮ್ಮ ದಶಕಗಳ ಕನಸಾಗಿದ್ದ 'ಮ್ಯೂಟೆಂಟ್​ ಶೆಫ್'​ ಯುಟ್ಯೂಬ್​ ಚಾನೆಲ್ ಆರಂಭಿಸಿದ್ದಾರೆ. ಈ ಚಾನೆಲ್, ವಿಡಿಯೋ ಹಾಕಿದ ಮೂರೇ ಗಂಟೆಗಳಲ್ಲಿ ಮಾನಿಟೈಸ್​ ಆಗಿದ್ದು, ಕೆಲವೇ ವಾರಗಳಲ್ಲಿ ಒಂದು ಲಕ್ಷ ಸಬ್​ಸ್ಕ್ರೈಬರ್​ಗಳನ್ನು ಪಡೆದು ಸಿಲ್ವರ್​ ಬಟನ್​ ಗಳಿಸಿದೆ.

PREV
16
ಅದೃಷ್ಟ ಅಂದ್ರೆ ಹಾಗೆನೇ

ಕೆಲವೊಮ್ಮೆ ಅದೃಷ್ಟ ಅಂದರೆ ಹಾಗೆನೇ. ಬಂದರೆ ಒಂದರ ಹಿಂದೆ ಒಂದರಂತೆ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ. ಇದಕ್ಕೀಗ ತಾಜಾ ಉದಾಹರಣೆ ಬಿಗ್​ಬಾಸ್​ ಖ್ಯಾತಿಯ ಮ್ಯೂಟಂಟ್​ ರಘು (Bigg Boss Mutant Raghu)

26
ರಕ್ಷಿತಾ ಸಾಥ್​

ಬಿಗ್​ಬಾಸ್​ನಲ್ಲಿ ಕೊನೆಯ ವಾರದವರೆಗೆ ಉಳಿಯುವ ಅವಕಾಶ ಸಿಗದಿದ್ದರೂ ಅಲ್ಲಿಂದ ಬಂದ ಮೇಲೆ ಸೆಲೆಬ್ರಿಟಿಯಾಗಿದ್ದಾರೆ. ದಶಕಗಳ ಕನಸನ್ನು ನನಸು ಮಾಡಿಕೊಂಡು  ಕಿಚನ್​ ಯುಟ್ಯೂಬ್​ ಚಾನೆಲ್​ ಓಪನ್​ ಮಾಡಿದ್ದರು. ಮಂಗಳೂರು ಪುಟ್ಟಿ ರಕ್ಷಿತಾ ಶೆಟ್ಟಿ ಕೂಡ ಇದಕ್ಕೆ ಸಾಥ್​ ಕೊಟ್ಟಿದ್ದರು.

36
ಮೂರೇ ಗಂಟೆಗಳಲ್ಲಿ ಹಣ

ಇದೀಗ ಚಾನೆಲ್​ ಆರಂಭಿಸಿ ಕೆಲವೇ ವಾರವಾಗಿದೆ. ಆದರೆ ವಾರ ದೂರದ ಮಾತು. ವಿಡಿಯೋ ಹಾಕಿ ಮೂರೇ ಗಂಟೆಗಳಲ್ಲಿ ಮಾನಿಟೈಸ್​ ಆಗಿದೆ ಅರ್ಥಾತ್​ ದುಡ್ಡು ಬರಲು ಆರಂಭವಾಗಿದೆ ಎಂದು ರಘು ಅವರು ಸೋಷಿಯಲ್​​ ಮೀಡಿಯಾದಲ್ಲಿ ಹೇಳಿದ್ದಾರೆ.

46
ನಂಬಲು ಆಗ್ತಿಲ್ಲ

4-5 1 ಲಕ್ಷ ಸಬ್​ಸ್ಕೈಬ್​ ಆಗಿದ್ದಾರೆ. ಇನ್ನೂ ನಂಬಲು ಆಗ್ತಿಲ್ಲ. ಇಷ್ಟೊಂದು ಪ್ರೀತಿ ನನಗೆ ಸಿಗತ್ತೆ ಎಂದು ಅಂದುಕೊಂಡಿರಲಿಲ್ಲ. ಯುಟ್ಯೂಬ್​ ಚಾನೆಲ್​ ಆರಂಭಿಸಬೇಕು ಎನ್ನುವುದು 10 ವರ್ಷಗಳ ಕನಸಾಗಿತ್ತು. ಅದು ಈಡೇರಿ ಇಷ್ಟು ಬೇಗ ಇವೆಲ್ಲಾ ಆಗಿ ಹೋಗಿದೆ ಎಂದು ರಘು ಹೇಳಿಕೊಂಡಿದ್ದಾರೆ.

56
ಸಿಲ್ವರ್​ ಬಟನ್​

ಒಂದು ಲಕ್ಷ ಸಬ್​ಸ್ಕ್ರೈಬರ್​ ಆಗಿರುವ ಕಾರಣಕ್ಕೆ ಯುಟ್ಯೂಬ್​ನವರು ಸಿಲ್ವರ್​ ಬಟನ್​ ಕೊಟ್ಟಿದ್ದಾರೆ ಎಂದಿರುವ ರಘು ಅದನ್ನು ಓಪನ್​ ಮಾಡಿ ತೋರಿಸಿದರು. ಮ್ಯೂಟೆಂಟ್​ ಶೆಫ್​ ಎಂದು ಬರೆದಿದ್ದಾರೆ. ಇದು ನನ್ನ ದೊಡ್ಡ ಅಚೀವ್​ಮೆಂಟ್​ ಎಂದಿದ್ದಾರೆ ರಘು.

66
ಮುಂದಿನ ಗುರಿ

ನನ್ನ ಮುಂದಿನ ಗೋಲ್​ ಬಂದು 10 ಲಕ್ಷ ಸಬ್​ಸ್ಕ್ರೈಬರ್​ ಮಾಡುವುದು. ಖಂಡಿತ ನಾನು ಅದನ್ನು ಅಚೀವ್​ ಮಾಡುತ್ತೇನೆ ಎಂದು ಗೊತ್ತಿದೆ. ನಿಮ್ಮ ಪ್ರೀತಿ, ಸಪೋರ್ಟ್​ ಹೀಗೆಯೇ ಇರಲಿ ಎಂದಿದ್ದಾರೆ. ​

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories