ನೇಹಾ ಗೌಡ ಮತ್ತು ಅನುಪಮಾ ಗೌಡ ಕನ್ನಡ ಕಿರುತೆರೆಯ ಜನಪ್ರಿಯ ನಟಿಯರು. ನಟಿಯರಿಬ್ಬರು ಸ್ನೇಹಿತರಾಗಿರೋದಕ್ಕೆ ಸಾಧ್ಯನೇ ಇಲ್ಲ, ಎನ್ನುವುದರ ಮಧ್ಯೆ ಕಳೆದ 16 ವರ್ಷಗಳಿಂದ ಬೆಸ್ಟ್ ಫ್ರೆಂಡ್ಸ್ ಆಗಿ ಉಳಿದಿದ್ದಾರೆ ಈ ಜೋಡಿ. ತಮ್ಮ ಸ್ನೇಹದ ಕುರಿತು ನೇಹಾ ಗೌಡ ಹೇಳಿದ್ದೇನು ನೋಡಿ.
ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡವರು ನೇಹಾ ಗೌಡ ಮತ್ತು ಅನುಪಮಾ ಗೌಡ. ಇಬಬ್ರು ಜೊತೆಯಾಗಿ ನಟಿಸದೇ ಇದ್ದರೂ, ಇಬ್ಬರ ಸ್ನೇಹಾ ಮಾತ್ರ, ಅಂದಿನಿಂದ ಇಂದಿನವರೆಗೂ ಹಾಗೆಯೇ ಇದೆ. ಇಬ್ಬರ ಸ್ನೇಹವನ್ನು ಈವಾಗ ಯಾವ ಹಂತ ತಲುಪಿದೆ ಅನ್ನೋದನ್ನು ನೇಹಾ ಗೌಡ ತಿಳಿಸಿದ್ದಾರೆ.
26
ನೇಹಾ ಗೌಡ
ಕನ್ನಡ ಸೇರಿ, ತಮಿಳು ಮತ್ತು ತೆಲುಗು ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ ನೇಹಾ ಗೌಡ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದರು. ಇಂದಿಗೂ ಕೂಡ ಜನ ಇವರನ್ನು ಗುರುತಿಸೋದು ಗೊಂಬೆ ಅಂತಾನೆ. ಜೊತೆಗೆ ನಮ್ಮ ಲಚ್ಚಿ ಧಾರಾವಾಹಿಯಲ್ಲೂ ನಟಿಸಿದ್ದರು ನೇಹಾ ಗೌಡ.
36
ಅನುಪಮಾ ಗೌಡ
ಅನುಪಮಾ ಗೌಡ ಅಕ್ಕ ಧಾರಾವಾಹಿಯಲ್ಲಿ ನಟಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರೂ ಸಹ, ಬಳಿಕ ಇವರು ಜನಪ್ರಿಯತೆ ಪಡೆದವರು. ಬಳಿಕ ಕಿರುತೆರೆಯ ಜನಪ್ರಿಯ ನಿರೂಪಕಿಯಾಗಿ ಮನೆಮಾತಾದವರು. ನೇಹಾ ಮತ್ತು ಅನುಪಮಾ ಅವರದ್ದು ಬರೋಬ್ಬರಿ ಹದಿನಾರು ವರ್ಷಗಳ ಸ್ನೇಹ.
ಹಿಂದೆ ಅಂದರೆ ಎರಡು ವರ್ಷಗಳ ಹಿಂದೆ ನೇಹಾ ಗೌಡ ಹುಟ್ಟುಹಬ್ಬಕ್ಕೆ ಅನುಪಮಾ ಗೌಡ ಸುಂದರವಾದ ಫೋಟೊಸ್ ಪೋಸ್ಟ್ ಮಾಡಿ ಆತ್ಮೀಯ ಬೆಸ್ಟ್ ಫ್ರೆಂಡ್, 14 ವರ್ಷಗಳಿಂದ ನಿನ್ನನ್ನು ಅರಿತಿದ್ದೇನೆ. ನನ್ನ ಜೀವನದಲ್ಲಿ ನಿನ್ನನ್ನು ಪಡೆದಿದ್ದಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ. ನಿನ್ನ ದಯೆ, ಪ್ರಾಮಾಣಿಕತೆ, ಪ್ರೀತಿ, ಕಾಳಜಿಗೆ ಧನ್ಯವಾದಗಳು. ನೀನು ಅದ್ಭುತ ವ್ಯಕ್ತಿ ಮತ್ತು ನನ್ನ ಮೆಚ್ಚಿನ ವ್ಯಕ್ತಿ , ಯಾವಾಗಲೂ ನೀನು ನನ್ನ ಬೆಸ್ಟ್ ಫ್ರೆಂಡ್, ಐ ಲವ್ ಯೂ ಎಂದು ಪೋಸ್ಟ್ ಮಾಡಿದ್ದರು.
56
ಫ್ರೆಂಡ್’ಶಿಪ್ ನ ಯಾವ ಹಂತಕ್ಕೆ ತಲುಪಿದ್ದೇವೆ ಎಂದ ನೇಹಾ ಗೌಡ
ಇದಿಗ ನೇಹಾ ಗೌಡ ಅನುಪಮಾ ಗೌಡ ಜೊತೆಗಿನ ಸುಂದರವಾದ ಫೋಟೊಗಳನ್ನು ಹಂಚಿಕೊಂಡು ‘’ ಈ ಫೋಟೋದಲ್ಲಿ ಬ್ಯಾಕ್ ಗ್ರೌಂಡ್ ಚೆನ್ನಾಗಿಲ್ಲದಿರಬಹುದು, ಆದರೆ ನಿಜವಾಗಿಯೂ ಮುಖ್ಯವಾದ ವಿಷಯವೆಂದರೆ ಅವಳಿಗೆ ನನ್ನ ಬೆನ್ನಿದೆ ಮತ್ತು ನನಗೆ ಅವಳ ಬೆನ್ನಿದೆ. ಇತ್ತೀಚೆಗೆ, ನಮ್ಮ ಸ್ನೇಹ ಯಾವ ಹಂತಕ್ಕೆ ತಲುಪಿದೆ ಎಂದರೆ, ನಾವು ಭೇಟಿಯಾದಾಗ, ನಮ್ಮ ಫೋನ್‌ಗಳನ್ನು ದೂರವಿಡುತ್ತೇವೆ, ಫೋಟೋ ಕ್ಲಿಕ್ ಮಾಡೋದು ಕೂಡ ಕಡಿಮೆ, ಮಾತನಾಡುವುದು, ಹಂಚಿಕೊಳ್ಳುವ, ಆರಾಮದಾಯಕ ಮೌನ, ಮತ್ತೆ ಹೊಸದಾದ ಸಂಭಾಷಣೆ. ಆದರೆ ಇವತ್ತು ನಾವಿಬ್ಬರು ಚೆನ್ನಾಗಿ ರೆಡಿಯಾಗಿರೋದರಿಂದ ಫೋಟೊ ಕ್ಲಿಕ್ ಮಾಡಲೇಬೇಕೆಂದು ನಿರ್ಧರಿಸಿ ತೆಗೆದಂತಹ ಫೋಟೊಗಳು ಎಂದು ಬರೆದುಕೊಂಡಿದ್ದಾರೆ ನೇಹಾ ಗೌಡ.
66
ಏನು ಮಾಡ್ತಿದ್ದಾರೆ ಈಗ ಈ ನಟಿಯರು?
ಸದ್ಯ ನೇಹಾ ಗೌಡ, ಮಗುವಾದ ಬಳಿಕ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡಿದ್ದು, ಮಗುವಿನ ಲಾಲನೆ -ಪಾಲನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಇನ್ನು ಅನುಪಮಾ ಗೌಡ ಕಲರ್ಸ್ ಕನ್ನಡದ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ. ಇಬ್ಬರೂ ಬ್ಯುಸಿಯಾಗಿದ್ದರೂ ಸಹ, ತಮ್ಮ ಸ್ನೇಹಕ್ಕಾಗಿ ಸಮಯ ಮೀಸಲಿಟ್ಟಿದ್ದಾರೆ ಈ ನಟಿಯರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.