BBK 12: ಚೆನ್ನಾಗಿ ಆಡದೇ ಇದ್ರೂ ಅವ್ರನ್ನು ಯಾಕೆ ಮನೆಯಲ್ಲಿ ಇನ್ನೂ ಇಟ್ಕೊಂಡಿದ್ದಾರೋ ಗೊತ್ತಿಲ್ಲ: ಎಲಿಮಿನೇಷನ್​ ಬಗ್ಗೆ ಮಾಳು ಬೇಸರ

Published : Dec 29, 2025, 01:16 PM IST

ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್ ಆಗಿರುವ ಮಾಳು ನಿಪನಾಳ್, ತಮ್ಮ ಎಲಿಮಿನೇಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಪಂದನಾ ಸೋಮಣ್ಣ ಅವರು ಸರಿಯಾಗಿ ಆಡದಿದ್ದರೂ ಮನೆಯಲ್ಲಿ ಉಳಿದುಕೊಂಡಿದ್ದು, ತಮ್ಮನ್ನು ಮತ್ತು ಸೂರಜ್ ಅವರನ್ನು ಹೊರಹಾಕಿದ್ದು ವಿಚಿತ್ರ ಎನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

PREV
16
ಸೂರಜ್​-ಮಾಳು ಔಟ್​

ಬಿಗ್​ಬಾಸ್​ (Bigg Boss 12) ಮನೆಯಿಂದ ಸೂರಜ್​ ಸಿಂಗ್​ ಮತ್ತು ಮಾಳು ನಿಪನಾಳ್​ (Suraj Singh and Malu Nipanal) ಎಮಿಲಿನೇಟ್​ ಆಗಿ ಹೊರಕ್ಕೆ ಬಂದಿದ್ದಾರೆ. ಇದೀಗ ಅವರ ವಿವಿಧ ಮಾಧ್ಯಮಗಳ ಜೊತೆ ಅನಿಸಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ.

26
ಬಿಗ್​ಬಾಸ್​ ದೇವರ ಮನೆ

ಈ ಪೈಕಿ ಮಾಳು ನಿಪನಾಳ ಅವರು ಸೈಲೆಂಟ್​ ಆಗಿಯೇ ಇದ್ದು, ಹೆಚ್ಚು ಗಲಾಟೆ ಮಾಡಿಕೊಳ್ಳದ ವ್ಯಕ್ತಿಯಾಗಿದ್ದರು. ಈ ಬಗ್ಗೆ ಮಾತನಾಡಿರುವ ಅವರು ಬಿಗ್​ಬಾಸ್​​ ಎನ್ನುವುದು ದೇವರ ಮನೆ ಇದ್ದ ಹಾಗೆ. ಅಲ್ಲಿ ಕಿರುಚಾಟ, ಜಗಳ ಎಲ್ಲಾ ಮಾಡುವುದು ನನಗೆ ಇಷ್ಟವಿರಲಿಲ್ಲ. ನನ್ನ ವ್ಯಕ್ತಿತ್ವವನ್ನು ತೋರಿಸಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಅದಕ್ಕಾಗಿ ಹೆಚ್ಚಿಗೆ ಕಿರುಚಾಡಲು ಹೋಗಲಿಲ್ಲ ಎಂದಿದ್ದಾರೆ.

36
ಆ ಸ್ಪರ್ಧಿಯ ಬಗ್ಗೆ ಮಾಳು ಮಾತು

ಆದರೆ ಇದೇ ವೇಳೆ ಅವರು ಓರ್ವ ಸ್ಪರ್ಧಿ ಚೆನ್ನಾಗಿ ಆಡದಿದ್ದರೂ ಇನ್ನೂ ಬಿಗ್​ಬಾಸ್​ ಮನೆಯಲ್ಲಿಯೇ ಉಳಿದುಕೊಂಡಿರುವ ಬಗ್ಗೆ ತೀವ್ರ ಅಸಮಾಧಾನವನ್ನೂ ಮಾಧ್ಯಮದ ಮುಂದೆ ಹೊರಹಾಕಿದ್ದಾರೆ. ಇದೇ ಸ್ಪರ್ಧಿಯ ಬಗ್ಗೆ ಈ ಹಿಂದೆ ಜಾಹ್ನವಿ ಕೂಡ ಓಪನ್​ ಆಗಿಯೇ ಬಿಗ್​ಬಾಸ್​​ ಮನೆಯಲ್ಲಿ ಮಾತನಾಡಿದ್ದರು. ಅವರೇ ಸ್ಪಂದನಾ ಸೋಮಣ್ಣ (Bigg Boss Spanda Somanna)

46
ಜಾಹ್ನವಿ ಹೇಳಿದ್ದೂ ಇದೇ ಮಾತು

ಇವರು ವಾಹಿನಿ ಕಡೆಯವರಾಗಿದ್ದರಿಂದ ಅವರನ್ನು ಎಲಿಮಿನೇಟ್​ ಮಾಡುತ್ತಿಲ್ಲ ಎಂದು ಜಾಹ್ನವಿ ನೇರಾನೇರವಾಗಿ ಬಿಗ್​ಬಾಸ್​​ ಮನೆಯೊಳಕ್ಕೇ ಆರೋಪಿಸಿ ಭಾರಿ ಟೀಕೆಗೂ ಗುರಿಯಾಗಿದ್ದರು. ಇದೀಗ ಅವರದ್ದೇ ಹೆಸರನ್ನು ತೆಗೆದುಕೊಂಡಿದ್ದಾರೆ ಮಾಳು.

56
ಫಿಸಿಕಲ್​ ಆಟವಾಡಲ್ಲ

ಸ್ಪಂದನಾ ಅವರು ಫಿಸಿಕಲ್​ ಆಗಿ ಯಾವ ಆಟವನ್ನೂ ಆಡುವುದಿಲ್ಲ. ಮೆಂಟಲ್​ ಆಗಿ ಒಂದಷ್ಟು ಆಟವಾಡಬಹುದು. ಆದರೆ ಅವರನ್ನು ಉಳಿಸಿಕೊಂಡು ನನ್ನನ್ನು ಮತ್ತು ಸೂರಜ್​ ಅವರನ್ನು ಹೊರಕ್ಕೆ ಹಾಕಿರುವುದು ಆಶ್ಚರ್ಯವಾಗುತ್ತದೆ ಎಂದಿದ್ದಾರೆ.

66
ತುಂಬಾ ವಿಚಿತ್ರ

ನನಗೆ ಇನ್ನೂ ಅರ್ಥವಾಗದ ವಿಷಯ ಇದೇ ಆಗಿದೆ. ನನ್ನನ್ನು ಅಥವಾ ಸೂರಜ್​ ಇಬ್ಬರಲ್ಲಿ ಒಬ್ಬರನ್ನಾದರೂ ಉಳಿಸಿಕೊಂಡು ಸ್ಪಂದನಾ ಅವರನ್ನು ಹೊರಕ್ಕೆ ಹಾಕಬೇಕಿತ್ತು. ಆದರೆ ಇದು ನನಗೆ ವಿಚಿತ್ರ ಎನ್ನಿಸುತ್ತಿದೆ ಎಂದಿದ್ದಾರೆ ಮಾಳು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories