ಕೇಂದ್ರ ಸರ್ಕಾರಿ ನೌಕರಿಗೆ ಗುಡ್​ಬೈ ಹೇಳಿದ Bigg Boss ಕಾವ್ಯಾ ಶೈವ! ಈ ಹೆಸರು ಬಂದಿದ್ದು ಹೇಗೆ

Published : Jun 20, 2026, 01:05 PM IST

ಬಿಗ್‌ಬಾಸ್ ಖ್ಯಾತಿಯ ನಟಿ ಕಾವ್ಯಾ ಶೈವ, ಬಣ್ಣದ ಲೋಕದ ಆಸೆಗಾಗಿ  ಕೇಂದ್ರ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ್ದರು. ನಟನೆಯಲ್ಲಿ ಸಾಧಿಸಲು ಪೋಷಕರಿಂದ ಎರಡು ವರ್ಷಗಳ ಕಾಲಾವಕಾಶ ಪಡೆದಿದ್ದ ಅವರು, ತಮ್ಮ ಹೆಸರಿನ ಜೊತೆ 'ಶೈವ' ಎಂದು ಸೇರಿಸಿಕೊಂಡಿದ್ದರ ಹಿಂದಿನ ಕುತೂಹಲಕಾರಿ ಕಥೆ ಇದೆ.

PREV
16
ಬಿಗ್​ಬಾಸ್​ ಕಾವ್ಯಾ ಶೈವ

ಬಿಗ್​ಬಾಸ್​​ ಮೂಲಕ (Bigg Boss Kannada) ಫೇಮಸ್​ ಆದೋರು ನಟಿ ಕಾವ್ಯಾ ಶೈವ. ಅದರಲ್ಲಿಯೂ ಗಿಲ್ಲಿ ನಟನ ಜೊತೆಗಿನ ಸ್ನೇಹದಿಂದಾಗಿ ಮತ್ತಷ್ಟು ಸದ್ದು ಮಾಡಿದವರು ಕಾವ್ಯಾ. ಅಷ್ಟಕ್ಕೂ ಕಾವ್ಯಾ ಶೈವ ಬಿಗ್​ಬಾಸ್​ಗೂ ಬರುವ ಮುನ್ನ ಕೆಂಡಸಂಪಿಗೆ, ಅಗ್ನಿಸಾಕ್ಷಿ ಸೇರಿದಂತೆ ಕೆಲವು ಸೀರಿಯಲ್​ ಮೂಲಕ ಮನೆಮಾತಾಗಿದ್ದರು.

26
ಕೇಂದ್ರ ಸರ್ಕಾರಿ ನೌಕರಿ

ಆದರೆ, ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಸರ್ಕಾರಿ ಉದ್ಯೋಗದಲ್ಲಿ ಇದ್ದವರು ಕಾವ್ಯಾ ಶೈವ. ಆದರೆ ಬಣ್ಣದ ಲೋಕದ ಆಸೆಯಲ್ಲಿ ಸರ್ಕಾರಿ ಉದ್ಯೋಗವನ್ನು ತೊರೆದು ಬಂದಿರುವ ಕಾವ್ಯಾ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ.

36
ನಟನೆ ಮೇಲೆ ಆಸಕ್ತಿ

ಕಾವ್ಯಾ ಶೈವ ಅವರು ಡಿಪ್ಲೋಮಾ ಮಾಡಿದ್ದರು. ಅವರಿಗೆ ಕೇಂದ್ರ ಸರ್ಕಾರದ ಉದ್ಯೋಗವೂ ಸಿಕ್ಕಿತ್ತು. ಕೈತುಂಬ ಸಂಬಳವೂ ಸಿಕ್ಕಿತ್ತು. ಆದರೆ ಮೊದಲಿನಿಂದಲೂ ನಟನೆ ಮೇಲೆ ಆಸೆ ಇದ್ದ ಕಾವ್ಯಾಗೆ ಅದರಲ್ಲಿಯೇ ಮುಂದುವರೆಯುವ ಆಸೆ ಇತ್ತು. ಆದರೆ ಮನೆಯವರಿಗೆ ನಟನೆ ಬೇಡ, ಸರ್ಕಾರಿ ಉದ್ಯೋಗದಲ್ಲಿ ಮುಂದುವರೆಯುವ ಆಸೆ ಇತ್ತು.

46
ಬುದ್ಧಿ ಹೇಳಿದ್ದ ಅಪ್ಪ-ಅಮ್ಮ

ಅದಕ್ಕಾಗಿ ಸಾಕಷ್ಟು ಬುದ್ಧಿ ಹೇಳಿದ್ದರು ಅಪ್ಪ ಅಮ್ಮ. ಆದರೆ ಪಟ್ಟು ಬಿಡದ ಕಾವ್ಯಾ, ಎರಡು ವರ್ಷ ಸಮಯ ಕೊಡುವಂತೆ ಪಾಲಕರನ್ನು ಒಲಿಸಿ, ಏನಾದರೂ ಸಾಧಿಸುತ್ತೀನಿ. ಆಗದೆ ಇದ್ದರೆ ನೀವೂ ಹೇಳಿದಂತೆ ಕೇಳುತ್ತೇನೆ ಎಂದು ಪ್ರಾಮಿಸ್​ ಮಾಡಿದ್ದರು. ಹೀಗೆ ಅಪ್ಪ-ಅಮ್ಮನನ್ನು ಒಲಿಸಿದ್ದರೂ ಸಾಧಿಸಲು ಆಗತ್ತೋ ಇಲ್ಲವೋ ಎನ್ನುವ ಭಯವಿತ್ತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಕಾವ್ಯಾ.

56
ಶೈವ ಎಂದು ಬಂದದ್ದು ಏಕೆ?

ಕಾವ್ಯಾ ಅವರ ಹೆಸರಿನ ಮುಂದೆ ಶೈವ ಎನ್ನುವ ಹೆಸರು ಸೇರಲೂ ಒಂದು ಕುತೂಹಲದ ಕಾರಣವಿದೆ. ಆ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಮೊದಲು ಬರೀ ಕಾವ್ಯಾ ಎನ್ನುವ ಹೆಸರು ಇತ್ತು. ಆದರೆ ಕಾಲೇಜಿಗೆ ಹೋಗುವಾಗ ಸೋಷಿಯಲ್​ ಮೀಡಿಯಾದಲ್ಲಿ ಪ್ರೊಫೈಟ್​ ಕ್ರಿಯೇಟ್​ ಮಾಡುವಾಗ ಬರೀ ಕಾವ್ಯಾ ಎಂದರೆ ಚೆನ್ನಾಗಿಲ್ಲ ಎಂದು ಎನ್ನಿಸಿತು ಎಂದಿದ್ದಾರೆ ನಟಿ.

66
ಕಾವ್ಯಾ ಶೈವ ಎಂದೇ ಫೇಮಸ್​

ನಮ್ಮದು ವೀರಶೈವ ಕಮ್ಯುನಿಟಿ ಆದ್ದರಿಂದ ಕಾವ್ಯಾ ಎದುರು ಶೈವ ಎಂದು ಹೆಸರು ಇಟ್ಟುಕೊಂಡರೆ ಚೆನ್ನಾಗಿರತ್ತೆ ಎಂದುಕೊಂಡು ಕಾವ್ಯಾ ಶೈವ ಎಂದು ಇಟ್ಟುಕೊಂಡಿದ್ದ ಕಾವ್ಯಾ ಅವರಿಗೆ ಅದೇ ಈಗ ಹೆಸರು ತಂದುಕೊಟ್ಟಿದೆ. ಆರಂಭದಲ್ಲಿ ಬರೀ ಸೈಡ್​ ರೋಲ್​ ಸಿಗ್ತಾ ಇರೋದಕ್ಕೆ ಬೇಸರ ಆಗಿತ್ತು ಎಂದಿರೋ ನಟಿಗೆ ಕೊನೆಗೆ ಆಸೆ ಈಡೇರಿ ಲೀಡ್​ ರೋಲ್​ ಸಿಕ್ಕಿದೆ. ಬಿಗ್​ಬಾಸ್​ ಮೂಲಕ ಫೇಮಸ್​ ಆದ ಮೇಲೆ ಇನ್ನಷ್ಟು ಆಪಾರ್ಚುನಿಟೀಸ್​ ಬರುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories