Bigg Boss ಹೋಗೋ ಮುಂಚೆ 'ಮದುವೆ ಆಗ್ತಿದ್ದೀನಿ' ಎಂದ Bhavya Gowda ಅಕ್ಕ ದಿವ್ಯಾ ಗೌಡ; ಹುಡುಗ ತುಂಬ ಫೇಮಸ್

Published : Jun 20, 2026, 01:03 PM IST

Karna Serial Actress Bhavya Gowda Sister Divya Gowda: ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರು ಮದುವೆ ಆಗಲಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
15
ಬಿಗ್‌ ಬಾಸ್‌ ಶೋನಲ್ಲಿ ದಿವ್ಯಾ ಗೌಡ

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶೋನಲ್ಲಿ ಭವ್ಯಾ ಗೌಡ ಅವರು ಭಾಗವಹಿಸಿದ್ದರು. ಫ್ಯಾಮಿಲಿ ವೀಕ್‌ ಇದ್ದ ಕಾರಣ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಕೂಡ ಭಾಗವಹಿಸಿದ್ದರು. ಆಗ ಹನುಮಂತು ಜೊತೆ ದಿವ್ಯಾ ಗೌಡ ಮಾತುಕತೆ ವೈರಲ್‌ ಆಗಿತ್ತು.

25
ಹನುಮಂತ ಅವರ ಜೊತೆ ದಿವ್ಯಾ ಗೌಡ ಮಾತುಕತೆ

ಹನುಮಂತು ಅವರು ದಿವ್ಯಾ ಗೌಡಗೆ ಹೇಳು ಬೇ ಎಂದು ಹೇಳಿದ್ದರು. ಆಗ ದಿವ್ಯಾ ಕೂಡ ಇಲ್ಲಿ ಕೇಳಬೇ ಎಂದು ಹೇಳಿದ್ದರು. ಈ ಮಾತು ಕೇಳಿ ಎಲ್ಲರೂ ನಕ್ಕಿದ್ದರು. ದಿವ್ಯಾ ಗೌಡ ಅವರು ಭವ್ಯಾ ಬಗ್ಗೆ ಖಡಕ್‌ ಆಗಿ ಇದ್ದದ್ದು ಇದ್ದ ಹಾಗ ಮಾತನಾಡಿದ್ದರು. ಒಟ್ಟಿನಲ್ಲಿ ಬಿಗ್‌ ಬಾಸ್‌ ಶೋಗೆ ಬಂದ ಒಂದೇ ದಿನಕ್ಕೆ ಫೇಮಸ್‌ ಆಗಿದ್ದರು.

35
ಮದುವೆ ಆಗುವ ಸೂಚನೆ

ಈ ಬಾರಿ ದಿವ್ಯಾ ಗೌಡ ಅವರು ಬಿಗ್‌ ಬಾಸ್‌ ಶೋಗೆ ಬರಲಿದ್ದಾರೆ ಎನ್ನಲಾಗಿತ್ತು. ದಿವ್ಯಾ ಗೌಡ ಅವರು ಶೋಗೆ ಬರಲಿ ಎಂದು ಅನೇಕರು ಹಾರೈಸಿದ್ದರು. ಆದರೆ ಈಗ ಅವರು ಮದುವೆ ಆಗುವ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ದಿವ್ಯಾ ಗೌಡ ಅವರು ಎಂಗೇಜ್‌ ಆಗಲಿದ್ದಾರಾ? ಮದುವೆ ಆಗಲಿದ್ದಾರಅ ಎಂದು ಕಾದು ನೋಡಬೇಕಿದೆ.

45
ಹುಡುಗ ಯಾರು?

ಪ್ರತಿಷ್ಠಿತ ಎಂಡಮೋಲ್‌ ಕಂಪೆನಿಯಲ್ಲಿ ಹೇಮಂತ್‌ ಕುಮಾರ್‌ ಎನ್ನುವವರು ಕಾಸ್ಟಿಂಗ್‌ ಡೈರೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನೇ ದಿವ್ಯಾ ಗೌಡ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ. ದಿವ್ಯಾ ಗೌಡ ಅವರು ವಿಡಿಯೋ ಹಂಚಿಕೊಂಡರೂ ಕೂಡ ಮುಖವನ್ನು ರಿವೀಲ್‌ ಮಾಡಿಲ್ಲ. ಆದರೆ ದಿವ್ಯಾ ಗೌಡ ಪೋಸ್ಟ್‌ಗೆ ಬಂದಂತಹ ಕಾಮೆಂಟ್‌ಗಳು ಮಾತ್ರ ಹುಡುಗ ಹೇಮಂತ್‌ ಕುಮಾರ್‌ ಎಂದು ಅವರ ಅಕೌಂಟ್‌ನ್ನು ಟ್ಯಾಗ್‌ ಮಾಡಿ ಹೇಳುತ್ತಿದ್ದಾರೆ.

55
ಹೇಮಂತ್‌ ಕುಮಾರ್‌ ಪೋಸ್ಟ್‌

ಅತ್ತ ಹೇಮಂತ್‌ ಕೂಡ ಮದುವೆ ಆಗುವ ಸೂಚನೆ ಕೊಟ್ಟಿದ್ದಾರೆ. "ಇವಳೇ... ಅವಳು...ಕನಸಲಿ ಬಂದವಳು.. ಹೇ ಹೃದಯ, ನನ್ನ ಕನಸುಗಳ ಕಥೆ ಹೇಳಿದೆಯ?! ..ಎಂದು ಕೂಡ ಹೇಮಂತ್‌ ಕುಮಾರ್‌ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಕಾರ್ತಿಕ್‌ ಮಹೇಶ್‌ ಅವರು, “ಅಬ್ಬಬ್ಬಾ …ಹುಟ್ಟಿದ್ದಾರೆ ಹುಟ್ಟಿದ್ದಾರೆ … ನಿಮಗೋಸ್ಕರ ರೆಡಿ ಇದ್ದಾರೆ” ಎಂದು ಕಾಮೆಂಟ್‌ ಮಾಡಿದ್ದಾರೆ.

ಹೇಮಂತ್‌ ಅವರು ಬಿಗ್‌ ಬಾಸ್‌ ಶೋನಲ್ಲಿ ಕೆಲಸ ಮಾಡಿದ್ದರು. ಭವ್ಯಾ ಗೌಡ ಬಿಗ್‌ ಬಾಸ್‌ ಶೋಗೆ ಹೋಗಿದ್ದು, ಆಗ ದಿವ್ಯಾ ಗೌಡ ಅವರು ಫ್ಯಾಮಿಲಿ ಪರವಾಗಿ ಬಿಗ್‌ ಬಾಸ್‌ ಟೀಂ ಜೊತೆ ಕಾಂಟ್ಯಾಕ್ಟ್‌ನಲ್ಲಿದ್ದರು. ಆಗ ಇವರಿಬ್ಬರ ಪರಿಚಯ ಆಗಿದೆಯಾ ಎಂಬ ಅನುಮಾನ ಶುರು ಆಗಿದೆ. ಈ ಬಗ್ಗೆ ಅವರೇ ಮಾಹಿತ ಕೊಡಬೇಕಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories