Brahmagantu: ಮತ್ತೆ ಖಾಕಿ ತೊಟ್ಟು ಖಡಕ್ ಆಗಿ ಎಂಟ್ರಿ ಕೊಟ್ಟ 'ಲೇಡಿ ರಾಮಾಚಾರಿ' ಸತ್ಯ

Published : Jun 20, 2026, 10:21 AM IST

Brahmagantu: ಕನ್ನಡ ಕಿರುತೆರೆಯ ಲೇಡಿ ರಾಮಾಚಾರಿ ಎಂದೇ ಪ್ರಸಿದ್ಧಿ ಪಡೆದಿರುವ ಸತ್ಯ ಇದೀಗ ಮತ್ತೆ ಖಾಕಿತೊಟ್ಟು ಖಡಕ್ ಆಗಿ ಆಕ್ಷನ್ ಕ್ವೀನ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಹೊಸ ಧಾರಾವಾಹಿ ಮೂಲಕ ಅಲ್ಲ, ಬದಲಾಗಿ ಬ್ರಹ್ಮಗಂಟು ಧಾರಾವಾಹಿಗೆ ದೊಡ್ಡ ಟ್ವಿಸ್ಟ್ ಕೊಡುವ ಮೂಲಕ ಎಂಟ್ರಿ ಕೊಡ್ತಿದ್ದಾರೆ.

PREV
16
ಲೇಡಿ ರಾಮಾಚಾರಿ ಸತ್ಯ ಖಡಕ್ ಎಂಟ್ರಿ

ಕನ್ನಡ ಕಿರುತೆರೆಯಲ್ಲಿ ಲೇಡಿ ರಾಮಾಚಾರಿ ಎಂದೇ ಹೆಸರು ಪಡೆದಿರುವ ಸತ್ಯ ಸೀರಿಯಲ್ ಖ್ಯಾತಿಯ ನಟಿ ಗೌತಮಿ ಜಾಧವ್, ಇದೀಗ ಮತ್ತೆ ಸತ್ಯ ಸೀರಿಯಲ್ ಸತ್ಯ ಆಗಿ, ಖಾಕಿ ತೊಟ್ಟು ಆಕ್ಷನ್ ಕ್ವೀನ್ ರೀತಿ, ‘ಬ್ರಹ್ಮಗಂಟು’ ಧಾರಾವಾಹಿಗೆ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಟ್ವಿಸ್ಟ್ ಕೂಡ ತಂದಿದ್ದಾರೆ.

26
ಸತ್ಯ ಸೀರಿಯಲ್ ನಟಿ

ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ‘ಸತ್ಯ’. ಈ ಧಾರಾವಾಹಿಯಲ್ಲಿ ಆರಂಭದಲ್ಲಿ ಟಾಮ್ ಬಾಯ್, ಮಿನಿ ರೌಡಿಯಾಗಿ, ಕೊನೆಗೆ ಮದುವೆಯಾಗಿ ಚೆನ್ನಾಗಿ ಓದಿ, ಪೊಲೀಸ್ ಅಧಿಕಾರಿಯಾಗಿದ್ದಳು ಸತ್ಯ. ಸತ್ಯ ಸೀರಿಯಲ್ ಮುಗಿದು ವರ್ಷ ಕಳೆಯುತ್ತಾ ಬಂದರೂ, ಸತ್ಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇದೀಗ ‘ಬ್ರಹ್ಮಗಂಟು’ ಧಾರಾವಾಹಿಗೆ ಸತ್ಯ ಆಗಿ ಎಂಟ್ರಿ ಕೊಡುವ ಮೂಲಕ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿದ್ದಾರೆ.

36
ಬ್ರಹ್ಮಗಂಟು ಧಾರಾವಾಹಿ

ಇದೀಗ ಬ್ರಹ್ಮಗಂಟು ಧಾರಾವಾಹಿಯಲ್ಲಿ ಖಡಕ್ ಫೈಟಿಂಗ್ ಸೀನ್ ಗೆ ಎಂಟ್ರಿ ಕೊಟ್ಟಿದ್ದಾರೆ. ಖಾಕಿ ತೊಟ್ಟು ಪೊಲೀಸ್ ಖದರ್ ನಲ್ಲಿ ತಮ್ಮ ಫೇಮಸ್ ಡೈಲಾಗ್ ‘ಯಾವನೋ ಅಲ್ಲ ಕಣೋ, ಯಾವಳೋ’ ಎನ್ನುವ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ನರಸಿಂಹನ ಜೊತೆ ಸೇರಿ, ರೌಡಿಗಳ ಜೊತೆ ಫೈಟ್ ಮಾಡುತ್ತಾಳೆ ಇನ್ಸ್ಪೆಕ್ಟರ್ ಸತ್ಯ.

46
ರೋಚಕ ತಿರುವಿನಲ್ಲಿ ಬ್ರಹ್ಮಗಂಟು

ನರಸಿಂಹ ಸಹ ಇದೀಗ ಪೊಲೀಸ್ ಆಗಿದ್ದು, ಇಬ್ಬರು ಜೊತೆಯಾಗಿ ಸೇರಿ ರೌಡಿಗಳ ವಿರುದ್ಧ ಹೋರಾಟ ನಡೆಸಿದ್ದು ಆಗಿದೆ. ಆದರೆ ಇದೀಗ ಸತ್ಯ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಕೊಡುತ್ತಿದ್ದಾಳೆ. ವೇದಿಕೆಯ ಮೇಲೆ ನಿಂತು ಮಾತನಾಡುವ ಸತ್ಯ, ಫೇಕ್ ಸರ್ಟಿಫಿಕೇಟ್ ಮೂಲಕ ಪೊಲೀಸ್ ಹುದ್ದೆ ಪಡೆದ ನರಸಿಂಹನನ್ನು ಅರೆಸ್ಟ್ ಮಾಡಲು ಬಂದಿರುವುದಾಗಿ ತಿಳಿಸಿದ್ದಾಳೆ.

56
ಸತ್ಯ ಎಂಟ್ರಿಗೆ ಫ್ಯಾನ್ಸ್ ಖುಷ್

ಧಾರಾವಾಹಿಯಲ್ಲಿ ನರಸಿಂಹ ಅರೆಸ್ಟ್ ಆಗ್ತಾನೋ ಇಲ್ವೋ ಅನ್ನೋದನ್ನು ಕಾದು ನೋಡಬೇಕು. ಆದರೆ ಸತ್ಯ ಎಂಟ್ರಿಯಿಂದ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ. ಸತ್ಯ ಆಕ್ಷನ್ ಸೂಪರ್, ಸಿನಿಮಾ ನೋಡಿದಂತೆ ಅನಿಸ್ತಿದೆ, TRP ಮೋಡ್ ON , ಸೋಮವಾರದ ಎಪಿಸೋಡ್ ನೋಡೋದಕ್ಕೆ ಕಾಯ್ತಿದ್ದೀವಿ ಎಂದಿದ್ದಾರೆ ಜನ.

66
ಏನು ಮಾಡ್ತಿದ್ದಾರೆ ಗೌತಮಿ ಜಾಧವ್

ಗೌತಮಿ ‘ಸತ್ಯ’ ಸೀರಿಯಲ್ ಬಳಿಕ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟರು. ಅಲ್ಲಿ ತಮ್ಮ ಪಾಸಿಟಿವಿಟಿಯಿಂದಲೇ ಜನಮನ ಗೆದ್ದರು. ಸದ್ಯ ಸಿನಿಮಾ ಶೂಟಿಂಗ್ ನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ನಟ ರಿಷಿ ಜೊತೆ ‘ಮಂಗಳಾಪುರಂ’ ಸಿನಿಮಾದಲ್ಲಿ ಗೌತಮಿ ಜಾಧವ್ ನಟಿಸುತ್ತಿದ್ದಾರೆ. ಇದರ ಜೊತೆಗೆ ನಟಿ ತಮ್ಮದೇ ಆದ ಬ್ಯುಸಿನೆಸ್ ಕೂಡ ನಡೆಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories