Bigg Boss Kannada Season 12 Update ಧಾರಾವಾಹಿ ತಂಡ ಬಿಗ್‌ಬಾಸ್ ಮನೆಗೆ ಆಗಮಿಸಿ ಸ್ಪರ್ಧಿಗಳಿಗೆ ಆಮಂತ್ರಣ ಪತ್ರಿಕೆ ನೀಡಿದೆ. ಈ ವೇಳೆ, ಸ್ಪರ್ಧಿ ರಕ್ಷಿತಾ ಶೆಟ್ಟಿ ತಮಗೆ ಗಿಲ್ಲಿ ನಟನಂತಹ ಹುಡುಗ ಬೇಕೆಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳೆಲ್ಲರಿಗೂ ಮದುವೆಯ ಆಮಂತ್ರಣ ಪತ್ರಿಕೆ ಸಿಕ್ಕಿದೆ. ಮದುವೆ ಆಮಂತ್ರಣ ಪಡೆದ ಅವಿವಾಹಿತ ಸ್ಪರ್ಧಿಗಳು ತಮ್ಮ ಸಂಗಾತಿ ಹೇಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಬಿಗ್‌ಬಾಸ್ ಸ್ಪರ್ಧಿಗಳಿಗೆ ಆಮಂತ್ರಣ ಪತ್ರಿಕೆ ನೀಡಿದ್ಯಾರು ಎಂಬುದರ ಮಾಹಿತಿ ಇಲ್ಲಿದೆ.
25
ನಂದಗೋಕುಲ
ಕಲರ್ಸ್ ಕನ್ನಡ ವಾಹಿನಿಯ ಕೌಟುಂಬಿಕ ಕಥಾ ಹಂದರವುಳ್ಳ ಸೀರಿಯಲ್ ನಂದಗೋಕುಲ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದೆ. ಸದ್ಯ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಮಾಧವ್ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾಗಿದ್ದಾನೆ. ಮಾಧವನ ಪೋಷಕರು ಬಿಗ್‌ಬಾಸ್ ಮನೆಗೆ ಆಗಮಿಸಿ ಸ್ಪರ್ಧಿಗಳನ್ನು ಪುತ್ರನ ಕಲ್ಯಾಣಕ್ಕೆ ಆಹ್ವಾನಿಸಿದ್ದಾರೆ.
35
ನಂದಕುಮಾರ್ ದಂಪತಿ
ಬಿಗ್‌ಬಾಸ್ ಮನೆಗೆ ಕುಟುಂಬ ಸಮೇತರಾಗಿ ನಂದಕುಮಾರ್ ದಂಪತಿ ಆಗಮಿಸಿದ್ದಾರೆ. ಆಹ್ವಾನ ಪತ್ರಿಕೆ ನೀಡಿದ ಬಳಿಕ ಗಿಲ್ಲಿಗೆ ನಿಮಗೆ ಅರೇಂಜ್ ಅಥವಾ ಲವ್ ಮ್ಯಾರೇಜ್ ಇಷ್ಟನಾ ಎಂದು ನಂದಕುಮಾರ್ ಹೇಳುತ್ತಾರೆ. ಇದಕ್ಕೆ ಗಿಲ್ಲಿ ನಟ ತಮಗೆ ಮದುವೆಯೇ ಇಷ್ಟವಿಲ್ಲ ಎಂದು ಹೇಳುತ್ತಾರೆ.
ಇದೇ ಪ್ರಶ್ನೆಗೆ ಉತ್ತರಿಸುವ ಕಾವ್ಯಾ ಶೈವ, ಯಾರಾದ್ರು ಇಷ್ಟವಾದ್ರೆ ಲವ್ ಮ್ಯಾರೇಜ್ ಆಗುತ್ತೇನೆ ಅಂತಾರೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಗಿಲ್ಲಿ ನಟ, ಇಷ್ಟಪಟ್ಟವರು ಮತ್ತು ಮನೆಯವರು ತೋರಿಸದವರನ್ನು ಮದುವೆಯಾಗು ಅಂತಾರೆ. ಇದಕ್ಕೆ ತಿರುಗೇಟು ನೀಡಿದ ನಂದಕುಮಾರ್, ನಿನಗೆ ಮದುವೆಯೇ ಇಷ್ಟವಿಲ್ಲ ಅಲ್ಲವಾ? ಯಾಕೆ ಮಾತಾಡ್ತೀಯಾ ಎಂದು ಟಾಂಗ್ ಕೊಡುತ್ತಾರೆ.
ಇನ್ನು ನಂದಕುಮಾರ್ ಪ್ರಶ್ನೆಗೆ ಉತ್ತರಿಸಿದ ರಕ್ಷಿತಾ ಶೆಟ್ಟಿ, ನನಗೆ ಕಾಮಿಡಿ ಕಾಮಿಡಿ ಮಾಡುವ ಹುಡುಗ ಬೇಕು ಎಂದು ಗಿಲ್ಲಿಯನ್ನು ತೋರಿಸುತ್ತಾರೆ. ರಕ್ಷಿತಾ ಮಾತುಗಳನ್ನು ಕೇಳುತ್ತಿದ್ದಂತೆ ಮನೆ ಮಂದಿಯೆಲ್ಲಾ ಶಾಕ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.