Bigg Boss Kannada: ಬಿಗ್ ಬಾಸ್ ಆರಂಭದಲ್ಲಿ ಹೇಟ್ ಮಾಡ್ತಿದ್ದೋರೆಲ್ಲಾ ಈವಾಗ ರಕ್ಷಿತಾ ಶೆಟ್ಟಿ ಫ್ಯಾನ್ಸ್ ಆಗ್ಬಿಟ್ರು!

Published : Oct 17, 2025, 04:28 PM IST

ರೀಲ್ಸ್ ಗಳ ಮೂಲಕವೇ ಜನಪ್ರಿಯತೆ ಪಡೆದ ಮಂಗಳೂರು ಮೂಲದ ಮುಂಬೈ ಹುಡುಗಿ ರಕ್ಷಿತಾ ಶೆಟ್ಟಿ ಆರಂಭದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಬೇರೆ ಯಾರೂ ಸಿಕ್ಕಿಲ್ವಾ? ಯಾಕೆ ಇವರು ಬಂದದ್ದು ಅಂದವರೆಲ್ಲಾ ಈಗ ರಕ್ಷಿತಾ ಮಾತಿಗೆ, ಮೆಚ್ಯೂರಿಟಿಗೆ, ಮುಗ್ಧತೆಗೆ ಫಿದಾ ಆಗಿದ್ದಾರೆ. 

PREV
17
ಬಿಗ್ ಬಾಸ್ ಕನ್ನಡ

ಕನ್ನಡ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಕನ್ನಡ ಚಿತ್ರರಂಗ, ಸೀರಿಯಲ್ ನಟನಟಿಯರೇ ಇರೋದು. ಇವರ ಮಧ್ಯೆ ವಿಭಿನ್ನವಾಗಿರೋದು ಅಂದ್ರೆ ಅದು ರಕ್ಷಿತಾ ಶೆಟ್ಟಿ ಮತ್ತು ಮಲ್ಲಮ್ಮ. ಹೀಗಾಗಿಯೇ ದೊಡ್ಮನೆಯ ದೊಡ್ಡವರೆಲ್ಲಾ ರಕ್ಷಿತಾ ಮತ್ತು ಮಲ್ಲಮ್ಮನ ಮೇಲೆ ಹೆಚ್ಚಾಗಿ ತಿರುಗಿ ಬೀಳುತ್ತಿರುತ್ತಾರೆ.

27
ರಕ್ಷಿತಾ ಶೆಟ್ಟಿ

ಕನ್ನಡ ಮತ್ತು ತುಳು ರೀಲ್ಸ್ ಮಾಡುವ ಮೂಲಕವೇ ಜನಪ್ರಿಯತೆ ಪಡೆದ ಮಂಗಳೂರು ಮೂಲದ ಮುಂಬೈ ಹುಡುಗಿ ರಕ್ಷಿತಾ, ಬಿಗ್ ಬಾಸ್ ಮನೆಗೆ ಮೊದಲು ಎಂಟ್ರಿ ಕೊಟ್ಟಾಗ, ಯಾಕಪ್ಪಾ ಇವರಳನ್ನು ಇಲ್ಲಿ ಕಳುಹಿಸಿದ್ದು, ಬೇರೆ ಯಾರು ಸಿಕ್ಕಿಲ್ವಾ? ಎನ್ನುತ್ತಾ ರಕ್ಷಿತಾಳನ್ನು ಹೇಟ್ ಮಾಡುತ್ತಿದ್ದವರೆಲ್ಲಾ ಇದೀಗ ರಕ್ಷಿತಾಗೆ ಫ್ಯಾನ್ ಆಗಿದ್ದಾರೆ.

37
ಹೇಟ್ ಮಾಡುತ್ತಿದ್ದವರೇ ರಕ್ಷಿತಾ ಫ್ಯಾನ್ ಆದ್ರು

ಆರಂಭದಲ್ಲಿ ರಕ್ಷಿತಾಳನ್ನು ಇಷ್ಟಪಡದಿದ್ದ, ಯಾಕೆ ಬಂದಿದ್ದು ಎಂದು ಕೇಳುತ್ತಿದ್ದ ವೀಕ್ಷಕರು ಇದೀಗ ರಕ್ಷಿತಾ ಶೆಟ್ಟಿ ಅಭಿಮಾನಿಯಾಗಿದ್ದಾರೆ. ಕಾರಣ ರಕ್ಷಿತಾ ಮೆಚ್ಯೂರಿಟಿ, ಆಕೆ ಮಾತನಾಡುವ ರೀತಿ ಮತ್ತು ಮುಗ್ಧತೆಗೆ ಜನ ಮನ ಸೋತಿದ್ದಾರೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ ರಕ್ಷಿತಾ.

47
ಟ್ರೋಲ್ ಆಗ್ತಿದ್ದವರು ಸುದ್ದಿಯಲ್ಲಿದ್ದಾರೆ

ಈ ಹಿಂದೆ ಜನ ರಕ್ಷಿತಾ ಶೆಟ್ಟಿಯ ವಿಡಿಯೋಗಳನ್ನು ಶೇರ್ ಮಾಡಿ, ಕೇವಲ ಟ್ರೋಲ್ ಮಾಡುತ್ತಿದ್ದರು, ಅದಕ್ಕಾಗಿಯೇ ಆಕೆ ಫೇಮಸ್ ಆಗಿದ್ದಳು. ಆದರೆ ಬಿಗ್ ಬಾಸ್ ಗೆ ಬಂದ ನಂತರ, ಆಕೆಯ ಮಾತು, ಬುದ್ಧಿವಂತಿಕೆಗೆ ಮೆಚ್ಚಿ ಅಭಿಮಾನಿಗಳಾದವರು ಎಷ್ಟೋ ಜನ. ಈಗ ಒಳ್ಳೆಯ ರೀತಿಯ ಸುದ್ದಿಯಲ್ಲಿದ್ದಾರೆ. ಒಟ್ಟಲ್ಲಿ ಹೇಳೋದಾದ್ರೆ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ರಕ್ಷಿತಾಳದ್ದೆ ಹವಾ.

57
ಜಾಹ್ನವಿ-ಅಶ್ವಿನಿ ಟಾರ್ಗೆಟ್ ಮಾಡ್ತಿದ್ದಾರ

ಕಳೆದ ಒಂದು ವಾರದಿಂದ ಬಿಗ್ ಬಾಸ್ ನೋಡುತ್ತಿದ್ದರೆ ಜಾಹ್ನವಿ ಮತ್ತು ಅಶ್ವಿನಿ ಇಬ್ಬರು ಸೇರಿ ರಕ್ಷಿತಾರನ್ನು ಸಿಕ್ಕಾಪಟ್ಟೆ ಟಾರ್ಗೆಟ್ ಮಾಡುತ್ತಿದ್ದಾರೆ. ಆಕೆ ಕೂತರೆ, ನಿಂತರೆ ಎಲ್ಲಾದಕ್ಕೂ ಟಾರ್ಗೆಟ್ ಮಾಡಿ, ವಿವಾದಾತ್ಮಕ ಹೇಳಿಕೆಗಳನ್ನು ಸಹ ನೀಡುತ್ತಿದ್ದಾರೆ ಈ ಜೋಡಿ.

67
ರಕ್ಷಿತಾಗೆ ಕಾರ್ಟೂನ್-ಈಡಿಯಟ್ ಎಂದು ಅಶ್ವಿನಿ

ಇದೀಗ ಹೊಸದಾಗಿ ಬಿಡುಗಡೆಯಾದ ಪ್ರೊಮೋದಲ್ಲಿ ರಕ್ಷಿತಾ ವಿರುದ್ಧ ಧನಿ ಎತ್ತಿ ಮಾತನಾಡಿದ ಅಶ್ವಿನಿ ಈಡಿಯಟ್ ಎಂದು ಹೇಳಿದ್ದರು. ಅಷ್ಟೇ ಅಲ್ಲ ಆಕೆಯ ಬ್ಯಾಗ್ ಬಿಸಾಕಿ ನೀನು ಎಲ್ಲಿಂದ ಬಂದವಳು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿ ಅವಮಾನ ಮಾಡಿದ್ದರು.

77
ಕಿಚ್ಚ ಕ್ಲಾಸ್ ತೆಗೆದುಕೊಳ್ಳುತ್ತಾರೆಯೇ?

ರಕ್ಷಿತಾಗೆ ಪದೇ ಪದೇ ಟಾರ್ಗೆಟ್ ಮಾಡಿ ಅವಮಾನ ಮಾಡುವ ಮೂಲಕ, ಆಕೆಯ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಅಶ್ವಿನಿ ಮತ್ತು ಜಾಹ್ನವಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಳ್ಳಲೇಬೇಕು ಎನ್ನುತ್ತಿದ್ದಾರೆ ಜನ. ಹಾಗೂ ಅವರಿಬ್ಬರನ್ನು ಮನೆಯಿಂದ ಹೊರ ಹಾಕಬೇಕು ಎನ್ನುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಏನಾಗುತ್ತೆ ಕಾದು ನೋಡಬೇಕು.

Read more Photos on
click me!

Recommended Stories