Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರೇ ದೊಡ್ಡ ತಲೆನೋವಾಗಿದ್ದಾರೆ. ಅದರಲ್ಲಿಯೂ ಯಾವಾಗಲೂ ಗಿಲ್ಲಿ ನಟ ಅವರು ರಘು ಮೈಮೇಲೆ ಬಿದ್ದು ಹೊರಳಾಡುತ್ತಿರುತ್ತಾರೆ. ಈಗ ಇವರಿಗೆ ಅಶ್ವಿನಿಯಿಂದ ಇನ್ನೊಂದು ಸಮಸ್ಯೆ ಎದುರಾಗುತ್ತಿದೆ. ಹಾಗಾದರೆ ಏನದು? ಏನಾಯ್ತು?
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ, ಗಿಲ್ಲಿ ನಟನ ಬಳಿ ಕೆಲಸ ಮಾಡಿಸೋದು ದೊಡ್ಡ ಟಾಸ್ಕ್ ಆಗಿದೆಯಂತೆ. ಈ ಮನೆಯಲ್ಲಿ ಇವರದ್ದೇ ಕಿರಿಕಿರಿ, ತೊಂದರೆ ಎಂದು ಕ್ಯಾಪ್ಟನ್ ರಘು ಅವರು ಹೇಳಿದ್ದರು.
26
ಕೆಲಸ ಮಾಡದ ಗಿಲ್ಲಿ ನಟ
ಬಿಗ್ ಬಾಸ್ ಮನೆಯಲ್ಲಿ ಈ ವಾರ ಅಶ್ವಿನಿ ಗೌಡ ಅವರು ಪೌಡರ್ ರೂಮ್ ಕ್ಲೀನ್ ಮಾಡಬೇಕಿತ್ತು. ಆದರೆ ಅವರು ಮಾಡಿರಲಿಲ್ಲ. ಕಿಚ್ಚ ಸುದೀಪ್ ಎಷ್ಟೇ ಸಲ ಹೇಳಿದರೂ ಕೂಡ ಗಿಲ್ಲಿ ಕೂಡ ಸರಿಯಾಗಿ ಕೆಲಸ ಮಾಡಿಲ್ಲ.
36
ಬೆನ್ನು ನೋವು ತಂದಿಟ್ಟ ಸಮಸ್ಯೆ
ಈ ವಾರ ಪೌಡರ್ ರೂಮ್ ಕ್ಲೀನ್ ಮಾಡಿ ಎಂದು ರಘು ಅವರು ಅಶ್ವಿನಿ ಗೌಡಗೆ ಹೇಳಿದ್ದರು. ಆದರೆ ಅವರು ಕೇಳಲಿಲ್ಲ. ಗಾರ್ಡನ್ ಏರಿಯಾದಲ್ಲಿ ಕೂತಿದ್ದ ಅಶ್ವಿನಿ ಅವರು, “ಹತ್ತು ನಿಮಿಷ, ಬೆನ್ನು ನೋವಿದೆ, ಮಾಡ್ತೀನಿ” ಎಂದರು. ಆಮೇಲೆ ರಘು ಅವರು, “ಹತ್ತು ನಿಮಿಷದಲ್ಲಿ ಬೆನ್ನು ನೋವು ಹೋಗತ್ತಾ?” ಎಂದು ಪ್ರಶ್ನೆ ಮಾಡಿದ್ದಾರೆ.
ಇದು ಅಶ್ವಿನಿ ಗೌಡ ಪಿತ್ತವನ್ನು ನೆತ್ತಿಗೇರಿಸಿದೆ. ಇದೇ ವಿಚಾರಕ್ಕೆ ಅಶ್ವಿನಿ ಅವರು ಸಡನ್ ಆಗಿ ಎದ್ದು ನಿಂತು ಜಗಳ ಆಡಿದ್ದಾರೆ, ರಘು ಜೊತೆ ದೊಡ್ಡ ಮಾತಿನ ಚಕಮಕಿ ನಡೆದಿದೆ. ಇನ್ನು ಮನೆಯ ನಿಯಮಗಳನ್ನು ಉಲ್ಲಂಘನೆ ಮಾಡೋದರಲ್ಲಿ ಅಶ್ವಿನಿ ಅವರು ಎತ್ತಿದ ಕೈ ಎನ್ನಬಹುದು.
56
ಕಾಫಿ ಕಪ್ ತೊಳೆದಿಲ್ಲ
ಕಾಫಿ ಕಪ್ ತೊಳೆದಿಲ್ಲ ಎಂದು ಕೂಡ ಜಗಳ ಆಗಿದೆ. ನಿಮ್ಮ ಕಾಫಿ ಕಪ್ ತೊಳೆದುಕೊಳ್ಳಿ ಎಂದು ರಘು ಹೇಳಿದಾಗಲೂ ಕೂಡ ಅಶ್ವಿನಿ ಕೇಳಿರಲಿಲ್ಲ. ಅಶ್ವಿನಿ ಅವರು ಕೆಲಸ ಮಾಡೋದಿಲ್ಲ, ಬಾತ್‌ರೂಮ್ ಕ್ಲೀನ್ ಮಾಡೋಕೆ ತುಂಬ ಒದ್ದಾಡಿದ್ದಾರೆ, ಅವರಿಗೆ ಕೇವಲ ಪೌಡರ್ ರೂಮ್ ಮಾತ್ರ ಕ್ಲೀನ್ ಮಾಡೋ ಕೆಲಸ ಕೊಟ್ಟಿದ್ದಾರೆ ಎಂಬ ಆರೋಪ ಕೂಡ ಇದೆ.
66
ನೆಗೆಟಿವ್ ಪ್ರತಿಕ್ರಿಯೆ ಸಿಗ್ತಿದೆ
ದೊಡ್ಮನೆಯಲ್ಲಿ ಅಶ್ವಿನಿ ಗೌಡ ಅವರು ಒಂದಲ್ಲ ಒಂದು ವಿಚಾರಕ್ಕೆ ಸೌಂಡ್ ಮಾಡಿದ್ದರು. ಕಿಚ್ಚ ಸುದೀಪ್ ಅವರು ಕೂಡ ತಿಳಿ ಹೇಳಿದ್ದಿದೆ. ಇನ್ನು ಇವರ ಆಟಕ್ಕೆ ಸಿಕ್ಕಾಪಟ್ಟೆ ನೆಗೆಟಿವ್ ಪ್ರತಿಕ್ರಿಯೆ ಕೂಡ ಸಿಗುತ್ತಿದೆ.