ಯುಟ್ಯೂಬ್ ವ್ಲಾಗ್ ಮಾಡುವ ಧನುಶ್ರೀ ಅವರು ಬಾಡಿಗೆ ಮನೆ ಹುಡುಕುತ್ತ, ರಿಲೇಶನ್‌ಶಿಪ್ ಬಗ್ಗೆಯೂ ಮಾತನಾಡಿದ್ದಾರೆ. “ನನಗೆ ಒಂದೆರಡು ಜನರು ರಿಲೇಶನ್‌ಶಿಪ್‌ನಲ್ಲಿ ಸಮಸ್ಯೆ ಆಗಿದೆ, ನನ್ನ ಮೈಮೇಲೆ ಕೈಎತ್ತಿದರು ಎಂದು ಕೆಲವರು ನನಗೆ ಕಾಮೆಂಟ್ ಮಾಡಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡುವ ಹಕ್ಕು ಯಾರಿಗೂ ಇಲ್ಲ. ಹೀಗಾಗಿ ಪೊಲೀಸರ ಬಳಿ ಹೋದರೆ ಒಳ್ಳೆಯದು” ಎಂದು ಧನುಶ್ರೀ ಹೇಳಿದ್ದಾರೆ.
25
ಲೈನ್ ಕ್ರಾಸ್ ಮಾಡೋಕೆ ಬಿಡಬೇಡಿ!
“ಯಾರೋ ನಮಗೆ ಏನೋ ಒಂದು ವಿಷಯ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ ಅಂತ ಅಂದ್ರೆ ತಪ್ಪು. ಹೀಗಾಗಿ ಪೊಲೀಸರಿಗೆ ನೀವು ಹೇಳಬೇಕು. ನಿಮ್ಮ ಜೊತೆ ಲೈನ್ ಕ್ರಾಸ್ ಮಾಡೋಕೆ ಬಿಡಬೇಡಿ. ಅವರೇನಾದ್ರೂ ಲೈನ್ ಕ್ರಾಸ್ ಮಾಡಿದ್ರೆ ಸರಿಯಾಗಿ ಬುದ್ಧಿ ಕಲಿಸಿ” ಎಂದು ಧನುಶ್ರೀ ಹೇಳಿದ್ದಾರೆ.
35
ಮದುವೆ ಆಗೋಕೆ ಟೈಮ್ ತಗೊಳ್ಳಿ!
“ಸ್ವಲ್ಪ ಟೈಮ್ ತಗೊಂಡು ಮದುವೆ ಆಗಿ, ಏನೂ ವಿಚಾರಿಸದೆ ಮದುವೆ ಆಗೋದು ತಪ್ಪು. ಒಂದಷ್ಟು ಸಮಯ ಕಳೆದಾಗ ಅವರು ಹೇಗೆ, ಅವರ ಜೊತೆ ಬದುಕೋಕೆ ಆಗತ್ತಾ ಅಂತ ಗೊತ್ತಾಗುತ್ತದೆ. ಇದು ಗೊತ್ತಾದ್ಮೇಲೆ ಮದುವೆ ಆಗಿ. ಸುಖ ದುಃಖದಲ್ಲಿ ಅವರು ನಮ್ಮ ಜೊತೆ ಇರ್ತಾರಾ ಅಂತ ಕಾದು ನೋಡಬೇಕಾಗಿದೆ” ಎಂದು ಧನುಶ್ರೀ ಹೇಳಿದ್ದಾರೆ.
ಧನುಶ್ರೀ ಅವರು ಈ ಹಿಂದೆ ಕನ್ನಡದ ಯುಟ್ಯೂಬರ್ ಜೊತೆ ಡೇಟ್ ಮಾಡುತ್ತಿದ್ದರು ಎನ್ನಲಾಗಿತ್ತು. ಆ ನಂತರ ಇವರಿಬ್ಬರು ದೂರ ಆಗಿದ್ದಾರೆ ಎನ್ನಲಾಗಿದೆ. ಸದ್ಯ ಭರತ್ ಎನ್ನುವವರ ಜೊತೆ ಧನುಶ್ರೀ ಯುಟ್ಯೂಬ್ ವ್ಲಾಗ್ ಮಾಡುತ್ತಾರೆ. ನಾವಿಬ್ಬರು ಫ್ರೆಂಡ್ಸ್ ಎಂದು ಈ ಜೋಡಿ ಹೇಳಿಕೊಂಡಿದೆ.
55
ಸದ್ಯದ ಕೆಲಸ ಏನು?
ಬಿಗ್ ಬಾಸ್ ಕನ್ನಡ ಮನೆಗೆ ಹೋಗಿ, ಒಂದೇ ವಾರಕ್ಕೆ ಹೊರಗಡೆ ಬಂದ ಧನುಶ್ರೀ ಅವರು ಸಿನಿಮಾ ರಂಗಕ್ಕಿಳಿದು ಅದೃಷ್ಟಪರೀಕ್ಷೆ ಮಾಡಿದರು. ಆಮೇಲೆ ನೇಲ್ ಆರ್ಟ್ಸ್ ಎನ್ನುವ ಶಾಪ್ ಕೂಡ ಆರಂಭಿಸಿದ್ದಾರೆ. ಅಂದಹಾಗೆ ರೀಲ್ಸ್ ಮಾಡುತ್ತ, ಡಿಜಿಟಲ್ ಪ್ರಮೋಶನ್ಸ್ ಮಾಡುತ್ತ ಲೈಫ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.