ಮತ್ತೆ ಬಂತು ಬಿಗ್ ಬಾಸ್ ಆಹ್ವಾನ, ಇನ್ಸ್ಟಾಗ್ರಾಮ್ ಪಂಟರಿಗೆ ಸಿಗುತ್ತಾ ಅವಕಾಶ ?

Published : Jun 09, 2026, 11:30 AM IST

ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ನಂಬರ್ ಒನ್ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಬರ್ತಿದೆ. ಈ ಬಾರಿ ಬಿಗ್ ಬಾಸ್ ಸಾಕಷ್ಟು ವಿಶೇಷತೆ ಹೊಂದಿದೆ. ಕಲರ್ಸ್ ಕನ್ನಡ, ಬಿಗ್ ಬಾಸ್ ಕನ್ನಡ ಸೀನಸ್ 13ರ ಇನ್ನೊಂದು ಪ್ರೋಮೋ ಬಿಡುಗಡೆ ಮಾಡಿ, ಸ್ಪರ್ಧಿಗಳನ್ನು ಮತ್ತೆ ಆಹ್ವಾನಿಸಿದೆ. 

PREV
14
ಬಿಗ್ ಬಾಸ್ ಕನ್ನಡ ಸೀಸನ್ 13

ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದು ಹೆಚ್ಚು ತಿಂಗಳಾಗಿಲ್ಲ. ಆಗ್ಲೇ 13ನೇ ಸೀಸನ್ ಗೆ ಕಲರ್ಸ್ ಕನ್ನಡ ತಯಾರಿ ನಡೆಸಿದೆ. ಈ ಸೀಸನ್ ಸಾಕಷ್ಟು ವಿಶೇಷತೆ ಹೊಂದಿದೆ. ಬರೀ ಸೆಲೆಬ್ರಿಟಿಗಳು ಮಾತ್ರವಲ್ಲ ಜನಸಾಮಾನ್ಯರಿಗೆ ಬಿಗ್ ಬಾಸ್ ಮನೆ ಪ್ರವೇಶಿಸುವ ಅವಕಾಶವನ್ನು ನೀಡಲಾಗಿದೆ. ಈಗಾಗಲೇ ಪ್ರೋಮೋ ಬಿಡುಗಡೆ ಮಾಡಿದ್ದ ಕಲರ್ಸ್ ಕನ್ನಡ ಈಗ ಮತ್ತೊಂದು ಪ್ರೋಮೋ ರಿಲೀಸ್ ಮಾಡಿದೆ.

24
ಕಲರ್ಸ್ ಕನ್ನಡ ಪ್ರೋಮೋದಲ್ಲಿ ಏನಿದೆ?

ಕಲರ್ಸ್ ಕನ್ನಡ ಬಿಗ್ ಬಾಸ್13ರ ಮೊದಲ ಪ್ರೋಮೋದಲ್ಲಿರುವ ವಿಷ್ಯವೇ ಎರಡನೇ ಪ್ರೋಮೋದಲ್ಲಿದೆ. ಈ ಬಾರಿ ಸಾಮಾನ್ಯ ಜನರ ಆಸೆಗಳಿಗೆ ರೆಕ್ಕೆ ಕಟ್ಟುವ ಅವಕಾಶವನ್ನು ಬಿಗ್ ಬಾಸ್ ನೀಡ್ತಿದೆ. ಕೈ ತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದೀರಾ? ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ ಅಂತ ಬಿಗ್ ಬಾಸ್ ಸ್ಪರ್ಧಿಗಳನ್ನು ಆಹ್ವಾನಿಸಿದೆ.

34
ಬಿಗ್ ಬಾಸ್ ಗೆ ಹೋಗೋದು ಹೇಗೆ ?

ಕಲರ್ಸ್ ಕನ್ನಡ ತನ್ನ ಪ್ರೋಮೋದಲ್ಲಿಯೇ ಬಿಗ್ ಬಾಸ್ ಮನೆಗೆ ಜನಸಾಮಾನ್ಯರು ಹೋಗೋದು ಹೇಗೆ ಎಂಬುದನ್ನು ತಿಳಿಸಿದೆ. ನೀವ್ಯಾಕೆ ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂಬುದನ್ನು 3 ನಿಮಿಷದ ವಿಡಿಯೋ ಮಾಡಿ, ನಿಮ್ಮ ವಿವರದ ಜೊತೆ colorskannada.jiostar.com ಗೆ ಅಪ್ಲೋಡ್ ಮಾಡಿದ್ರೆ ನಿಮಗೆ ಬಿಗ್ ಬಾಸ್ ಆಡಿಷನ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ.

44
ಯಾರ್ಯಾರು ಬರ್ತಾರೆ?

ಬಿಗ್ ಬಾಸ್ ಪ್ರೋಮೋ ರಿಲೀಸ್ ಆಗ್ತಿದ್ದಂತೆ ಯಾರ್ಯಾರು ಬರ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರಸಿದ್ಧಿ ಪಡೆದ ಅನೇಕ ಕಂಟೆಂಟ್ ಕ್ರಿಯೇಟರ್ ಗಳ ಆಸೆ ಚಿಗುರಿದೆ. ತಮಗೊಂದು ಅವಕಾಶ ಸಿಗ್ಬಹುದಾ ಅಂತ ಜನಸಾಮಾನ್ಯರು ಕನಸು ಕಾಣ್ತಿದ್ದಾರೆ. ಆಡಿಷನ್ ನಲ್ಲಿ ಯಾರು ಗೆಲ್ತಾರೆ ಕಾದು ನೋಡ್ಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories