ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿರುವ ರಜತ್ ಅವರು ಫಿನಾಲೆಗೆ ಎಂಟ್ರಿ ಕೊಟ್ಟರೂ ಆಶ್ಚರ್ಯವಿಲ್ಲ. ಅವರು ಸ್ಪರ್ಧಿಯೇ? ಅತಿಥಿಯೇ ಎನ್ನುವ ಗೊಂದಲ ಇನ್ನೂ ಇದೆ.
ಧನುಷ್ ಗೌಡ ಅವರು ಇನ್ನು ಎರಡು-ಮೂರು ವಾರಗಳಲ್ಲಿ ಹೊರಗಡೆ ಬರುವ ಸಾಧ್ಯತೆ ಇದೆ
ಟಾಸ್ಕ್ ಕೂಡ ಚೆನ್ನಾಗಿ ಆಡದ, ಅಡುಗೆ ಮಾಡದ, ಅಷ್ಟಾಗಿ ಕಾಣಿಸದ ಸ್ಪಂದನಾ ಸೋಮಣ್ಣ ಅದೃಷ್ಟದಿಂದಲೇ ಅಲ್ಲಿದ್ದಾರೆ ಎನ್ನುವ ಅಭಿಪ್ರಾಯ ಇದೆ. ಇವರು ಆದಷ್ಟು ಬೇಗ ಹೊರಗಡೆ ಬರೋ ಸಾಧ್ಯತೆ ಜಾಸ್ತಿ ಇದೆ.
ರಘು ಕೂಡ ಕೆಲವೇ ವಾರಗಳಲ್ಲಿ ಹೊರಬರುತ್ತಾರೆ. ಆಗಾಗ ಮಾತನಾಡುತ್ತ, ಟಾಸ್ಕ್ ಆಡುವ ರಘು ಅವರು ಬಹುತೇಕ ಸೈಲೆಂಟ್ ಆಗಿರೋದು ಜಾಸ್ತಿ ಎನ್ನಬಹುದು.
ಸೂರಜ್ ಸಿಂಗ್ ಹಾಗೂ ರಾಶಿಕಾ ಶೆಟ್ಟಿ ಮಾತ್ರ ಯಾವಾಗಲೂ ಒಟ್ಟಿಗಿರುತ್ತಾರೆ. ಅದನ್ನು ಬಿಟ್ಟರೆ ಟಿವಿಯಲ್ಲಿ ಕಾಣಿಸಿಕೊಳ್ಳುವಂತಹ ಕಂಟೆಂಟ್ ಇವರು ಕೊಡೋದು ಕಡಿಮೆ ಎನ್ನಬಹುದು. ಹೀಗಾಗಿ ಇವರು ಆದಷ್ಟು ಬೇಗ ಹೊರಗಡೆ ಬರುತ್ತಾರೆ.