BBK 12: ನನ್ನ ಮದುವೆ ಆಗ್ತೀಯಾ? Trivikram ಸೀರಿಯಸ್‌ ಪ್ರಶ್ನೆಗೆ Rakshita Shetty ಕೊಟ್ಟ ಉತ್ತರ ಮಾತ್ರ ಬೆಂಕಿ..

Published : Nov 26, 2025, 10:37 AM IST

Bigg Boss Kannada Season 12 Updates: ಬಿಗ್‌ ಬಾಸ್ ಕನ್ನಡ ಸೀಸನ್‌ 11 ಶೋನಲ್ಲಿ ಭಾಗವಹಿಸಿದ್ದ ತ್ರಿವಿಕ್ರಮ್‌ ಅವರು ಸೀಸನ್‌ 12ಗೆ ಅತಿಥಿಯಾಗಿ ಬಂದಿದ್ದಾರೆ. ಆ ವೇಳೆ ಅವರು ರಕ್ಷಿತಾ ಬಳಿ ನನ್ನ ಮದುವೆ ಆಗ್ತೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ರಕ್ಷಿತಾ ಕೊಟ್ಟ ಉತ್ತರ ಏನು?

PREV
15
ಭವ್ಯಾ, ತ್ರಿವಿಕ್ರಮ್‌ ಸ್ನೇಹ

ಬಿಗ್‌ ಬಾಸ್‌ ಮನೆಯಲ್ಲಿ ತ್ರಿವಿಕ್ರಮ್‌ ಅವರು ಭವ್ಯಾ ಗೌಡ ಜೊತೆ ಸ್ನೇಹದಿಂದ ಇದ್ದರು. ಇವರಿಬ್ಬರ ಬಗ್ಗೆ ಕೆಲವರು ಗಾಸಿಪ್‌ ಮಾಡಿದ್ದೂ ಇದೆ. ಇವರು ಒಟ್ಟಿಗೆ ಸೀರಿಯಲ್‌ ಮಾಡಬೇಕು ಎಂದು ವೀಕ್ಷಕರು ಬಯಸಿದ್ದುಂಟು. ಆದರೆ ಈಗ ಇವರಿಬ್ಬರು ಬೇರೆ ಬೇರೆ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ.

25
ತ್ರಿಮೋಕ್ಷಿ ಫ್ಯಾನ್ಸ್

ಅಂದಹಾಗೆ ಬಿಗ್‌ ಬಾಸ್‌ ಮನೆಯಲ್ಲಿ ತ್ರಿವಿಕ್ರಮ್‌ ಹಾಗೂ ಮೋಕ್ಷಿತಾ ಪೈ ನಡುವೆ ಮನಸ್ತಾಪ ಇತ್ತು. ಆದರೆ ಅಭಿಮಾನಿಗಳು ಮಾತ್ರ, ಇವರಿಬ್ಬರನ್ನು ಒಟ್ಟಿಗೆ ನೋಡಲು ಬಯಸಿದ್ದರು. ಇದು ಈ ಜೋಡಿಗೆ ಅರ್ಥ ಆದಾಗ ಅಚ್ಚರಿಪಟ್ಟಿದ್ದರು.

35
ಸಂಭಾಷಣೆ ಏನು?

ತ್ರಿವಿಕ್ರಮ್: ರಕ್ಷಿತಾ, ನಾನು ರೈತನಾಗ್ತೀನಿ, ಯುಟ್ಯೂಬ್‌ ವ್ಲಾಗ್‌ ಮಾಡೋಕೆ ಬಿಡ್ತೀನಿ. ನನ್ನ ಮದುವೆ ಆಗ್ತೀಯಾ?

ರಕ್ಷಿತಾ: ಮದುವೆ ಆಗೋದು ಏನು ಟ್ರೈ ಮಾಡೋದು

ತ್ರಿವಿಕ್ರಮ್:‌ ಆಗ್ತೀಯಾ

ರಕ್ಷಿತಾ: ಜೋರಾಗಿ ಮಾತಾಡಿ

ತ್ರಿವಿಕ್ರಮ್:‌ ಮದುವೆ ಆಗೋದು ಏನು ಟ್ರೈ ಮಾಡ್ತೀಯಾ? ಒಂದೇ ಸಲ ಆಗೋಣ

ರಕ್ಷಿತಾ: ನನ್ನ ಮದುವೆಗೆ ಬರಬೇಕು

45
ಎಲ್ಲರೂ ನಕ್ಕಿದರು

ತ್ರಿವಿಕ್ರಮ್‌ ಹಾಗೂ ರಕ್ಷಿತಾ ಮಾತುಕತೆ ನೋಡಿ ರಜತ್‌, ಮೋಕ್ಷಿತಾ ಪೈ ಸೇರಿ ಎಲ್ಲರೂ ನಕ್ಕಿದ್ದಾರೆ. ನನ್ನ ಮದುವೆ ಆಗು ಎನ್ನೋದು ರಕ್ಷಿತಾಗೆ ಕೇಳಿಸಿಲ್ಲ, ಅರ್ಥವೂ ಆಗಿಲ್ಲ. ಹೀಗಾಗಿ ರಕ್ಷಿತಾ ನಕ್ಕಿದ್ದಾರೆ.

55
ರಕ್ಷಿತಾ ಕಿರಿಯ ಸ್ಪರ್ಧಿ

ಬಿಗ್‌ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ರಕ್ಷಿತಾ ಅವರು ಚಿಕ್ಕ ವಯಸ್ಸಿನವರು. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡೋದಿಲ್ಲ ಎಂದು ಟ್ರೋಲ್‌ ಆಗಿದ್ದೂ ಇದೆ. ಆದರೆ ಇವರು ಕನ್ನಡ ಬಂದರೂ ಫೇಕ್‌ ಎಂದು ಕೆಲವರು ಹೇಳಿದ್ದೂ ಇದೆ.

Read more Photos on
click me!

Recommended Stories