BBK 12: ಮೊದಲ ಫಿನಾಲೆಯಲ್ಲಿ ಇಬ್ಬರು ಘಟಾನುಘಟಿಗಳೇ ಔಟ್; ಯಾರದು?

Published : Oct 19, 2025, 06:32 AM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನ ಮೊದಲ ಫಿನಾಲೆಯಲ್ಲಿ ಎಲಿಮಿನೇಶನ್‌ ನಡೆದಿದೆ. ಮೂರನೇ ವಾರಕ್ಕೆ ಮೊದಲ ಫಿನಾಲೆ ನಡೆದಿರೋದು ವಿಶೇಷ. ಅಂದಹಾಗೆ ಇಬ್ಬರು ಔಟ್‌ ಆಗಿದ್ದಾರೆ. ಯಾರದು? 

PREV
15
ಫೈನಲಿಸ್ಟ್‌ ಯಾರು?

ಅಶ್ವಿನಿ ಗೌಡ, ಕಾಕ್ರೋಚ್‌ ಸುಧಿ, ರಾಶಿಕಾ ಶೆಟ್ಟಿ, ಮಾಳು ನಿಪನಾಳ ಅವರು ಫೈನಲಿಸ್ಟ್‌ ಆಗಿ ಆರಂಭದಲ್ಲಿಯೇ ಸೇಫ್‌ ಆಗಿದ್ದರು. ಸ್ಪಂದನಾ ಸೋಮಣ್ಣ ಅವರು ಫೈನಲಿಸ್ಟ್‌ ಆದರೂ ಕೂಡ ಅವರ ವಿರುದ್ಧ ಟಾಸ್ಕ್‌ನಲ್ಲಿ ಹೋರಾಡಿ ಗೆದ್ದು ರಾಶಿಕಾ ಶೆಟ್ಟಿ ಮಾತ್ರ ಫೈನಲಿಸ್ಟ್‌ ಆದರು. ಸ್ಪಂದನಾ ಸೋತು ನಾಮಿನೇಟ್‌ ಆದರು.

25
ನಾಮಿನೇಟ್‌ ಆದವರು ಯಾರು?

ಧ್ರುವಂತ್, ಕಾವ್ಯ ಶೈವ, ಮಂಜು ಭಾಷಿಣಿ, ಸ್ಪಂದನಾ ಸೋಮಣ್ಣ, ಗಿಲ್ಲಿ ನಟ, ಧನುಷ್‌‌ ಗೌಡ, ಅಭಿಷೇಕ್ ಶ್ರೀಕಾಂತ್‌, ಮಲ್ಲಮ್ಮ, ಚಂದ್ರಪ್ರಭ, ಅಶ್ವಿನಿ ಎಸ್‌ಎಸ್‌, ರಕ್ಷಿತಾ ಶೆಟ್ಟಿ ಅವರು ನಾಮಿನೇಟ್‌ ಆಗಿದ್ದರು.

35
ಮೊದಲು ಸೇಫ್‌ ಆದವರು ಯಾರು?

ಮೊದಲ ಹಂತದಲ್ಲೇ ಮಲ್ಲಮ್ಮ, ರಕ್ಷಿತಾ ಶೆಟ್ಟಿ, ಚಂದ್ರಪ್ರಭ, ಗಿಲ್ಲಿ ನಟ, ಕಾವ್ಯ ಶೈವ ಅವರು ಸೇಫ್‌ ಆಗಿದ್ದರು, ಉಳಿದವರು ಡೇಂಜರ್‌ ಜೋನ್‌ನಲ್ಲಿದ್ದರು.

45
ಯಾರು ಹೊರಬಂದ್ರು?

ಕೊನೆಯದಾಗಿ ಮಂಜು ಭಾಷಿಣಿ, ಅಶ್ವಿನಿ ಎಸ್‌ಎಸ್‌ ಅವರು ಔಟ್‌ ಆಗಿದ್ದಾರೆ. ಇವರಿಬ್ಬರು ಕನ್ನಡ ಕಿರುತೆರೆಗೆ ಪರಿಚಿತರು, ಮೂರನೇ ವಾರಕ್ಕೆ ಹೊರಬಂದಿರೋದು ಆಶ್ಚರ್ಯ ತರಿಸಿದೆ. 

55
ಇನ್ನೂ ಎಲಿಮಿನೇಶನ್‌ ಇದೆಯಾ?

ಭಾನುವಾರದ ಎಪಿಸೋಡ್‌ನಲ್ಲಿ ಮತ್ತೆ ಎಲಿಮಿನೇಶನ್‌ ನಡೆಯಲಿದೆಯಾ ಎಂದು ಕಾದು ನೋಡೇಕಿದೆ. ಎರಡೂವರೆ ವಾರಕ್ಕೆ ಸತೀಶ್‌ ಕ್ಯಾಡಬಮ್ಸ್‌ ಅವರು ಎಲಿಮಿನೇಟ್‌ ಆಗಿದ್ದರು. ಇಲ್ಲಿಯವರೆಗೆ ಎರಡನೇ ವಾರದ ಬಳಿಕ ಮೂರು ಸ್ಪರ್ಧಿಗಳು ಎಲಿಮಿನೇಟ್‌ ಆದಂತಾಯ್ತು.

Read more Photos on
click me!

Recommended Stories