BBK 12: ವೀಕ್ಷಕರ ಮನಸ್ಸು ಕದ್ದಿರೋ ಸೂರಜ್‌ ಸಿಂಗ್‌ ವಯಸ್ಸೆಷ್ಟು? ಹೊರಗಡೆ ಗರ್ಲ್‌ಫ್ರೆಂಡ್‌ ಇದ್ದಾರಾ?

Published : Oct 25, 2025, 07:59 AM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿರುವ ಸೂರಜ್‌ ಸಿಂಗ್‌ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಇವರಿಗೋಸ್ಕರವೇ ಬಿಗ್‌ ಬಾಸ್‌ ನೋಡ್ತಿದ್ದೇವೆ ಎಂದು ಕೆಲ ಹುಡುಗಿಯರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದರು. ಇವರ ಅಸಲಿ ವಯಸ್ಸು ಎಷ್ಟು?

PREV
15
ಇರುವ ಪ್ರಶ್ನೆಗಳು ಏನು?

ಸೂರಜ್‌ ಸಿಂಗ್‌ ಅವರ ಅಸಲಿ ವಯಸ್ಸು ಎಷ್ಟು? ಶಿಕ್ಷಣ ಏನು? ಸಿಂಗಲ್‌ ಅಥವಾ ರಿಲೇಶನ್‌ನಲ್ಲಿ ಇದ್ದಾರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

25
ರಾಶಿಕಾ ಜೊತೆ ಸ್ನೇಹ

ಸೂರಜ್‌ ಸಿಂಗ್‌ ಅವರ ಸೌಂದರ್ಯಕ್ಕೆ ಅನೇಕರು ಫಿದಾ ಆಗಿದ್ದಾರೆ. ಇನ್ನೊಂದು ಕಡೆ ರಾಶಿಕಾ ಶೆಟ್ಟಿ ಹಾಗೂ ಸೂರಜ್‌ ನಡುವಿನ ಆತ್ಮೀಯತೆ ಜಾಸ್ತಿ ಆಗಿದೆ. ಇದಕ್ಕೆ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ.

35
ವಯಸ್ಸು ಎಷ್ಟು?

ಅಂದಹಾಗೆ ಸೂರಜ್‌ ಸಿಂಗ್‌ ಅವರಿಗೆ 29 ವರ್ಷ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. 2014ರಲ್ಲಿ ಇಂಜಿನಿಯರಿಂಗ್‌ ಶಿಕ್ಷಣ ಆರಂಭಿಸಿದ್ದಕ್ಕಾಗಿ 1996ರಲ್ಲಿ ಅವರು ಜನಿಸಿರಬಹುದು ಎನ್ನಲಾಗಿದೆ.

45
ಶಿಕ್ಷಣ ಏನು?

ಸೂರಜ್‌ ಸಿಂಗ್‌ ಅವರು EVEI ಮೈಸೂರು, ಮಹಾರಾಜ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಓದಿದ್ದಾರೆ. ಆ ಬಳಿಕ ಕೆನಡಾದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು. 2014-2018ರಲ್ಲಿ ಅವರು ಇಂಜಿನಿಯರಿಂಗ್‌ ಮುಗಿಸಿದ್ದಾರೆ.

55
ರಿಲೇಶನ್‌ಶಿಪ್‌ ಸ್ಟೇಟಸ್‌ ಏನು?

ಸೂರಜ್‌ ಸಿಂಗ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಿಂಗಲ್‌ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಹೊರಗಡೆ ನಿಜಕ್ಕೂ ಲವ್‌ ಇದೆಯಾ? ಬ್ರೇಕಪ್‌ ಆಗಿದ್ದಾರಾ ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories