ಬಿಗ್ ಬಾಸ್ ಮನೆಯಿಂದ ಹೊರನಡೆಯಲು ನಿರ್ಧರಿಸಿದ್ರಾ ಸ್ಪರ್ಧಿ? ತಂದೆ ನೀಡಿದ್ರು ಸುಳಿವು

Published : Oct 24, 2025, 10:06 PM IST

ಬಿಗ್ ಬಾಸ್ ಮನೆಯಿಂದ ಹೊರನಡೆಯಲು ನಿರ್ಧರಿಸಿದ್ರಾ ಸ್ಪರ್ಧಿ? ತಂದೆ ನೀಡಿದ್ರು ಸುಳಿವು, ಅಕ್ಟೋಬರ್ 28ಕ್ಕೆ ಸ್ಪರ್ಧಿ ಮನೆಯಿಂದ ಹೊರಬರುತ್ತಾರಾ? ಸ್ಪರ್ಧಿಯ ತಂದೆ ಮಾಡಿದ ಟ್ವೀಟ್ ಇದೀಗ ಕೋಲಾಹಲ ಸೃಷ್ಟಿಸಿದೆ.

PREV
16
ಬಿಗ್ ಬಾಸ್ ಮನೆಯಿಂದ ಹೊರನಡೆಯುತಿದ್ದಾರಾ ಸ್ಪರ್ಧಿ?

ಬಿಗ್ ಬಾಸ್ ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ರಿಯಾಲಿಟಿ ಶೋ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸ್ಪರ್ಧಿಗಳ ವರಸೆ ಬದಲಾಗುತ್ತಿದೆ, ಆಟ ಜೋರಾಗುತ್ತಿದೆ.ಇದರ ನಡುವೆ ಬಿಗ್ ಬಾಸ್ 19ರ ಸ್ಪರ್ಧಿ ಇದೀಗ ಮನೆಯಿಂದ ಹೊರನಡೆಯಲು ನಿರ್ಧರಿಸಿದ್ದಾರಾ ಅನ್ನೋ ಚರ್ಚೆ ಜೋರಾಗುತ್ತಿದೆ. ಇದಕ್ಕೆ ಕಾರಣ ಸ್ಪರ್ಧಿಯ ತಂದೆ ಮಾಡಿ ಪೋಸ್ಟ್. ಹೌದು ಹಿಂದಿ ಬಿಗ್ ಬಾಸ್ ಶೋ ಸ್ಪರ್ಧಿ ಅಮಾಲ್ ಮಲಿಕ್ ಮನೆಯಿಂದ ಎಕ್ಸಿಟ್ ಆಗುತ್ತಿದ್ದಾರಾ ಅನ್ನೋ ಚರ್ಚೆಗೆ ಪೋಸ್ಟ್ ಪುಷ್ಠಿ ನೀಡುತ್ತಿದೆ.

26
ಸ್ಪರ್ಧಿ ತಂದೆ ಮಾಡಿದ ಪೋಸ್ಟ್ ಏನು?

ಅಮಾಲ್ ಮಲಿಕ್ ಅಕ್ಟೋಬರ್ 28 ರಂದು ಸ್ಪರ್ಧೆಯಿಂದ ಹೊರನಡೆಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಕಾರಣ ಅಮಾಲ್ ಮಲಿಕ್ ತಂದೆ ದಾಬೂ ಮಲಿಕ್ ಮಾಡಿದ ಟ್ವೀಟ್. ಸಾಕು, ಇದು ಹೆಚ್ಚಾಯಿತು. ಅಕ್ಟೋಬರ್ 28ಕ್ಕೆ ಭೇಟಿಯಾಗೋಣ. ನಮ್ಮ ದಾರಿ ಮ್ಯೂಸಿಕ್ ಎಂದು ಟ್ವೀಟ್ ಮಾಡಿದ್ದಾರೆ.

36
ಅನಾರೋಗ್ಯ ಕಾರಣ ನೀಡಿದ ನೆಟ್ಟಿಗಗರು

ಅಮಾಲ್ ಮಲಿಕ್ ತಂದೆ ದಾಬು ಮಲಿಕ್ ಮಾಡಿದ ಈ ಟ್ವೀಟ್‌ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ದಾಬು ಮಲಿಕ್ ಅಮಾಲ್ ಮಲಿಕ್ ಸೇರಿದಂತೆ ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಇಷ್ಟೇ ಅಲ್ಲ ಯಾವುದರ ಕುರಿತು ಹೇಳುತ್ತಿದ್ದಾರೆ ಅನ್ನೋ ಕುರಿತು ಸ್ಪಷ್ಟಪಡಿಸಿಲ್ಲು. ಆದರೆ ಅಭಿಮಾನಿಗಳು ಅಮಾಲ್ ಮಲಿಕ್ ಆರೋಗ್ಯದ ಕಾರಣದಿಂದ ಬಿಗ್ ಬಾಸ್ ಮನೆಯಿಂದ ಹೊರನಡೆಯುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

46
ಮ್ಯೂಸಿಕ್ ಆಲ್ಬಂನಲ್ಲಿ ಭಾಗಿ ಎಂದ ನೆಟ್ಟಿಗರು

ಮ್ಯೂಸಿಕ್ ಆಲ್ಬಂನಲ್ಲಿ ಭಾಗಿ ಎಂದ ನೆಟ್ಟಿಗರು

ಅಮಾಲ್ ಮಲಿಕ್ ಬಿಗ್ ಬಾಸ್ ಮನೆಯಿಂದ ಹೊರಬಂದು ಮ್ಯೂಸಿಕ್ ಆಲ್ಬಮ್‌ನಲ್ಲಿ ಪಾಲ್ಗೊಳಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿಬಬರುತ್ತಿದೆ. ಇದೇ ವೇಳೆ ಬಿಬಿಕೆ ತಕ್ ಸೇರಿದಂತೆ ಕೆಲ ಬಿಗ್ ಬಾಸ್ ಸುದ್ದಿ ನೀಡುವ ಮಾಧ್ಯಮಗಳು ಅಮಾಲ್ ಮಲಿಕ್ ಮನೆಯಿಂದ ಹೊರನಡೆಯುತ್ತಿಲ್ಲ ಎಂದು ವರದಿ ಪ್ರಕಟಿಸಿದೆ.

56
ತೀವ್ರ ಜಿದ್ದಾಜಿದ್ದಿಯಲ್ಲಿ ಬಿಗ್ ಬಾಸ್

ಹಿಂದಿ ಬಿಗ್ ಬಾಸ್ ಶೋ ಪ್ರತಿ ದಿನ ತೀವ್ರ ಬಿರುಸಿನಿಂದ ಕೂಡಿದೆ. ಸ್ಪರ್ಧಿಗಳ ಜಟಾಪಟಿ, ವಾದ ವಿವಾದಗಳು ತಾರಕಕ್ಕೇರುತ್ತಿದೆ. ತಾನ್ಯ ಮಿತ್ತಲ್, ಬಸೀರ್ ಆಲಿ ಸೇರಿದಂತೆ ಹಲವು ಸ್ಪರ್ಧಿಗಳ ವಾದ ವಿವಾದಗಳು ಸದ್ದು ಮಾಡುತ್ತಿದೆ. ಇತ್ತ ಅಮಾಲ್ ಮಲಿಕ್ ಸೇರಿದಂತೆ ಇತರ ಸ್ಪರ್ಧಿಗಳು ಪೈಪೋಟಿ ತೀವ್ರಗೊಂಡಿದೆ.

ತೀವ್ರ ಜಿದ್ದಾಜಿದ್ದಿಯಲ್ಲಿ ಬಿಗ್ ಬಾಸ್

66
ಯಾರು ಈ ಅಮಾಲ್ ಮಲಿಕ್?

ಯಾರು ಈ ಅಮಾಲ್ ಮಲಿಕ್?

ಅಮಾಲ್ ಮಲಿಕ್ ಸಂಗೀತ ನಿರ್ದೇಶ, ಸಾಹಿತಿ ಹಾಗೂ ಗಾಯಕ. 2014ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ಅಭಿನಯದ ಜೈ ಹೋ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ಎಂಎಸ್ ಧೋನಿ ಅನ್‌ಟೋಲ್ಡ್ ಸ್ಟೋರಿ, ಭಾಗಿ, ಭೂಲ್ ಬೂಲಯ್ಯ3 ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಮಾಲ್ ಮಲಿಕ್ ತಂದೆ ದಾಬೂ ಮಲಿಕ್ ಕೂಡ ಸಂಗೀತ ನಿರ್ದೇಶಕರಾಗಿದ್ದಾರೆ. ಇತ್ತ ಸಹೋದರ ಅರ್ಮಾನ್ ಮಲಿಕ್ ಖ್ಯಾತ ಗಾಯಕರಾಗಿ್ದ್ದಾರೆ.

Read more Photos on
click me!

Recommended Stories