ಕಾವ್ಯ ಶೈವ, ಗಿಲ್ಲಿ ನಟನಿಗೆ ಧರ್ಮಸಂಕಟದಲ್ಲಿ ಸಿಲುಕಿಸಿದ Bigg Boss; ಈಗ ಮಿಸ್‌ ಆದ್ರೆ ಲೈಫ್‌ ಟೈಮ್‌ ಸ್ನೇಹ ಇರಲ್ಲ

Published : Nov 05, 2025, 03:00 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ವಾರ ವ್ಯಕ್ತಿತ್ವದ ಆಟ. ಸ್ಪರ್ಧಿಗಳಿಗೆ ಮಾತ್ರ ಈ ಬಾರಿ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಂತೆ ಮಾಡಲಾಗುತ್ತಿದೆ. ಅದರಲ್ಲೂ ಮನೆಯವರಿಂದ ಬಂದ ಪತ್ರಗಳು ಸ್ಪರ್ಧಿಗಳ ಕಣ್ಣಲ್ಲಿ ನೀರು ಹಾಕಿಸುತ್ತಿವೆ. 

PREV
15
ಧರ್ಮಸಂಕಟದಲ್ಲಿ ಕೂರಿಸಿದ ಬಿಗ್‌ ಬಾಸ್‌

ಕಾವ್ಯ ಶೈವ ಹಾಗೂ ಗಿಲ್ಲಿ ನಟ ಮೊದಲೇ ಸ್ನೇಹಿತರು, ಪರಿಚಯಸ್ಥರು. ಈ ಮನೆಯಲ್ಲಿ ಗಿಲ್ಲಿ, ಕಾವ್ಯ ನಡುವೆ ಒಳ್ಳೆಯ ಸ್ನೇಹ ಇದೆ. ಯಾವಾಗಲೂ ಗಿಲ್ಲಿ ಮಾತ್ರ ಕಾವು, ಕಾವು ಅಂತ ಹೇಳೋದುಂಟು. ಈಗ ಇವರಿಬ್ಬರಿಗೂ ಬಿಗ್‌ ಬಾಸ್‌ ಧರ್ಮಸಂಕಟದಲ್ಲಿ ಕೂರಿಸಿದ್ದಾರೆ. 

25
ಮನೆಯವರಿಂದ ಪತ್ರ ಬಂತು

ಕಾವ್ಯ ಅವರ ಮುಂದೆ ಗಿಲ್ಲಿ ಮನೆಯವರಿಂದ ಬಂದ ಪತ್ರವಿದೆ. ಗಿಲ್ಲಿ ನಟ ಅವರ ಮುಂದೆ ಕಾವ್ಯ ಶೈವ ಅವರ ಮನೆಯಿಂದ ಪತ್ರವಿತ್ತು. ಇದು ಬಿಗ್‌ ಬಾಸ್‌ ನೀಡಿದ ಟಾಸ್ಕ್‌ ಆಗಿತ್ತು.

35
ಆ ಪತ್ರವನ್ನು ಏನು ಮಾಡಬಹುದು?

ನೀವು ನಿಮ್ಮ ಮುಂದೆ ಇರುವ ಪತ್ರವನ್ನು ತಗೊಂಡು ಹೊರಗಡೆ ಬರಬಹುದು ಅಥವಾ ಅಲ್ಲೇ ಇಡಬಹುದು ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಗಿಲ್ಲಿ ಅವರು ಕಾವ್ಯ ಮನೆಯವರ ಪತ್ರವನ್ನು ತಗೊಂಡು ಬಂದರೆ, ಅವರಿಗೆ ಅವರ ಮನೆಯ ಪತ್ರ ಸಿಗೋದಿಲ್ಲ.

45
ಹೆಣ್ಣಿಗೆ ಹಠ ಇರಬಾರದು

ಯಾವಾಗಲೂ ನಾನು ಕಾವ್ಯಳ ನಂಬಿಕೆಯನ್ನು ಉಳಿಸಿಕೊಳ್ತೀನಿ ಎಂದು ಗಿಲ್ಲಿ ಹೇಳುತ್ತಿದ್ದರು. ಗಂಡಿಗೆ ಚಟ ಇರಬಾರದು, ಹೆಣ್ಣಿಗೆ ಹಠ ಇರಬಾರದು ಎಂದು ಗಿಲ್ಲಿ ಹೇಳಿದಾಗ, ಕಾವ್ಯ ಮಾತ್ರ, ನಿನಗೆ ಚಟ ಇದೆ, ನನಗೆ ಹಠ ಇದೆ ಎಂದಿದ್ದರು.

55
ಇವರಿಬ್ಬರು ಏನು ಮಾಡ್ತಾರೆ?

ಈಗ ಇವರಿಬ್ಬರು ಏನು ಮಾಡ್ತಾರೆ ಎನ್ನೋದು ಕುತೂಹಲಕಾರಿಯಾಗಿದೆ. ಇನ್ನೊಂದು ಕಡೆ ಗಿಲ್ಲಿ ಅಥವಾ ಕಾವ್ಯ ನಡುವೆ ಯಾರು ಸ್ವಾರ್ಥ ನೋಡ್ತಾರೆ ಎಂದು ಕೂಡ ಕಾದು ನೋಡಬೇಕಿದೆ. ವೀಕ್ಷಕರಿಗೆ ಎಷ್ಟು ಕುತೂಹಲ ಇದೆಯೋ ಹಾಗೆ, ಕಾವ್ಯ, ಗಿಲ್ಲಿಗೂ ಕೂಡ ನಾವು ಏನು ಮಾಡಬೇಕು ಎಂಬ ಗೊಂದಲದ ಜೊತೆ ಪರಸ್ಪರ ಏನು ಮಾಡಬಹುದು ಎಂಬ ಕುತೂಹಲ ಇರುವುದು.

Read more Photos on
click me!

Recommended Stories