Bigg Boss Kannada 12 Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ವ್ಯಕ್ತಿತ್ವ ಹೇಗೆ ಎಂದು ವೀಕ್ಷಕರಿಗೆ ಗೊತ್ತಾಗುತ್ತಲಿದೆ. ಬೇರೆಯವರಿಗೆ ಕೆಟ್ಟದ್ದು ಬಯಸಿದ್ದರೆ ಕೆಟ್ಟದ್ದೇ ಆಗುವುದು ಎನ್ನೋದು ಮತ್ತೆ ಸಾಬೀತಾಗಿದೆ. ಹಾಗಾದರೆ ಏನಾಯ್ತು?
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕ್ಯಾಪ್ಟನ್ ಆಗಬೇಕು ಎಂದು ಎಲ್ಲ ಸ್ಪರ್ಧಿಗಳು ಬಯಸುತ್ತಾರೆ. ಈ ಬಾರಿ ಜೋಡಿಯಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡಬೇಕಿತ್ತು. ಯಾರು? ಯಾರು ಆಡಬೇಕು ಎಂದು ಸೀಕ್ರೆಟ್ ರೂಮ್‌ನಲ್ಲಿದ್ದ ರಕ್ಷಿತಾ ಶೆಟ್ಟಿ, ಧ್ರುವಂತ್ ನಿರ್ಧಾರ ಮಾಡಬೇಕಿತ್ತು.
26
ರಕ್ಷಿತಾ ಶೆಟ್ಟಿ ಫೇವರಿಸಂ
ಬಿಗ್ ಬಾಸ್ ಮನೆಯಲ್ಲಿ ರಘು, ಗಿಲ್ಲಿ ನಟ, ಸೂರಜ್ ಸಿಂಗ್, ಕಾವ್ಯ ಶೈವ ನಡುವೆ ಕ್ಯಾಪ್ಟನ್ಸಿ ಟಾಸ್ಕ್ ನಡೆಯಬೇಕಿತ್ತು. ಈ ನಾಲ್ವರಲ್ಲಿ ಇಬ್ಬರನ್ನು ಜೋಡಿ ಮಾಡಬೇಕಿತ್ತು. ರಕ್ಷಿತಾ ಶೆಟ್ಟಿಗೆ ಗಿಲ್ಲಿ ನಟ, ರಘು ಅಂದರೆ ಫೇವರಿಟ್. ರಕ್ಷಿತಾ ಶೆಟ್ಟಿ ಹೊರಗಡೆ ಬಂದಾಗ ರಘು, ಗಿಲ್ಲಿ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದರು. ಇದನ್ನು ಸೀಕ್ರೆಟ್ ರೂಮ್‌ನೊಳಗಡೆ ಕೂತ್ಕೊಂಡು ನೋಡಿದ ರಕ್ಷಿತಾ ಇನ್ನಷ್ಟು ಎಮೋಶನಲ್ ಆಗಿದ್ದರು.
36
ಜೋಡಿ ಮಾಡುವಾಗ ತಾರತಮ್ಯ
ರಕ್ಷಿತಾ ಶೆಟ್ಟಿ ಪ್ರಕಾರ ಗಿಲ್ಲಿ ನಟ, ರಘು ಜೋಡಿಯಾಗಬೇಕು, ಕಾವ್ಯ ಶೈವ, ಸೂರಜ್ ಇನ್ನೊಂದು ಜೋಡಿಯಾಗಬೇಕು. ಇದಕ್ಕೆ ಧ್ರುವಂತ್ ಒಪ್ಪಿಗೆ ಇರಲಿಲ್ಲ. ಈ ಎರಡೂ ಜೋಡಿಗಳು ಸಮಾನ ಆಗೋದಿಲ್ಲ ಎನ್ನೋದು ಧ್ರುವಂತ್ ಆಲೋಚನೆ ಆಗಿತ್ತು. ಆದರೆ ರಕ್ಷಿತಾ ಪ್ರಕಾರ ರಘು, ಗಿಲ್ಲಿ ನಟ ಮಾತ್ರ ಕ್ಯಾಪ್ಟನ್ ಆಗೋಕೆ ಅರ್ಹತೆ ಇರುವವರಂತೆ. ಬಿಗ್ ಬಾಸ್ ಒಮ್ಮತದ ನಿರ್ಧಾರ ಕೇಳಿದ್ದಕ್ಕೆ ಧ್ರುವಂತ್ ಕೂಡ ರಕ್ಷಿತಾ ಮಾತನ್ನು ಒಪ್ಪಲೇಬೇಕಾಯ್ತು.
ಅಂತೂ ಆಟ ಆಡಿಸಿದರು. ಈ ಬಾರಿ ಕ್ಯಾಪ್ಟನ್ ಆಗಿರುವ ರಾಶಿಕಾ ಶೆಟ್ಟಿ ಅವರು ಉಸ್ತುವಾರಿಯಾಗಿದ್ದರು. ಆದರೆ ಅವರು ಉಸ್ತುವಾರಿಯಾಗಿ ಸರಿಯಾಗಿ ಆಡಿಸಲಿಲ್ಲ, ಒಬ್ಬರಿಗೆ ಒಂದು, ಇನ್ನೊಬ್ಬರಿಗೆ ಇನ್ನೊಂದು ಎನ್ನೋ ಥರ ರಾಶಿಕಾ ಮಾಡಿದರು. ಗಿಲ್ಲಿ ಸೋಲಬೇಕು ಎಂದು ರಾಶಿಕಾ ಬಯಸಿದ್ದರೆ, ಗಿಲ್ಲಿ ಗೆಲ್ಲಬೇಕು ಎಂದು ರಕ್ಷಿತಾ ಅಂದುಕೊಂಡಿದ್ದರು. ಕೊನೆಗೂ ಸೂರಜ್, ಕಾವ್ಯ ಶೈವ ಅವರು ಆಟದಲ್ಲಿ ಗೆದ್ದರು. ಇದು ರಕ್ಷಿತಾಗೆ ಬಹಳ ಬೇಸರ ಆಯ್ತು.
56
ರಕ್ಷಿತಾ ಶೆಟ್ಟಿ ಈಗ ಇರಿಟೇಟ್
ರಕ್ಷಿತಾ ಬಯಸಿದ್ದು ಒಂದು, ಆಗಿದ್ದು ಇನ್ನೊಂದು ಎಂದು ಧ್ರುವಂತ್ ಕೂಡ ಹಾಡು ಹಾಡಿ ತಿವಿದರು. ಸೀಕ್ರೆಟ್ ರೂಮ್‌ನೊಳಗಡೆ ಹೋದಬಳಿಕ ರಕ್ಷಿತಾ ನಿಜಕ್ಕೂ ಹೇಗೆ? ಅವರ ಮನಸ್ಸಿನಲ್ಲಿ ಏನಿದೆ? ಏನಾದರೂ ಮಾತನಾಡಿದರೆ, ಎಲ್ಲದಕ್ಕೂ ಜಗಳ ಆಡುವುದು ಯಾಕೆ? ಇಷ್ಟೆಲ್ಲ ಕೂಗಾಡೋದು ಯಾಕೆ ಎಲ್ಲವೂ ವೀಕ್ಷಕರಿಗೆ ಗೊತ್ತಾಗಿದೆ. ಒಟ್ಟಿನಲ್ಲಿ ರಕ್ಷಿತಾ ಶೆಟ್ಟಿ ಈಗ ಇರಿಟೇಟ್ ಆಗಿದ್ದಾರೆ.
66
ಯಾರಿಗೂ ಕೆಟ್ಟದ್ದು ಬಯಸಬಾರದು
ಕಾವ್ಯ ಶೈವ, ಸೂರಜ್ ತನ್ನನ್ನು ನಾಮಿನೇಟ್ ಮಾಡಿದ್ದರು, ಇವರಲ್ಲಿ ಒಬ್ಬರೂ ಕ್ಯಾಪ್ಟನ್ ಆಗಬಾರದು ಎಂದು ರಕ್ಷಿತಾ ಬಯಸಿದ್ದಳು. ಗಿಲ್ಲಿ ನಟ, ರಘು ಅವರನ್ನು ಕೂಡ ಹಿಂದೊಮ್ಮೆ ರಕ್ಷಿತಾ ನಾಮಿನೇಟ್ ಮಾಡಿದ್ದುಂಟು. ರಘು, ಗಿಲ್ಲಿ ಗೆಲುವಿಗಿಂತ ಜಾಸ್ತಿ, ಕಾವ್ಯ, ಸೂರಜ್ ಗೆಲ್ಲಬಾರದು ಎನ್ನೋದು ರಕ್ಷಿತಾ ಮನಸ್ಸಿನಲ್ಲಿದೆ. ಹೀಗಾಗಿಯೇ ಯಾರಿಗೂ ಕೆಟ್ಟದ್ದು ಬಯಸಬಾರದು ಎಂದು ಹೇಳುವುದು.