ಮೀಟರ್‌ ಇದೆ, ಮೀಟರ್; ಅನುಮತಿ ಕೇಳದೆ ಗಿಲ್ಲಿ ನಟ ಇದ್ದಲ್ಲಿಗೆ ಹೋಗ್ತೀನಿ: Rakshita Shetty Open Talk

Published : Feb 03, 2026, 05:11 PM IST

Bigg Boss Rakshita: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ರನ್ನರ್‌ ಅಪ್‌ ಆಗಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಈಗ ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಕರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 

PREV
16
ಹೊಡಿತಾರಾ ಅಂತ ಭಯ ಬಿದ್ದಿದ್ದೆ

ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ಹೊರಗಡೆ ಜಗತ್ತು ಹೇಗಿದೆ ಎನ್ನೋದು ಮರೆತು ಹೋಗುತ್ತದೆ. ಹೀಗಾಗಿ ನನ್ನ ನೋಡಿ ವೀಕ್ಷಕರು ಏನು ಹೇಳುತ್ತಾರೋ ಎನ್ನುವ ಭಯ ಇತ್ತು. ಅದರಂತೆ ನನ್ನ ತಾಯಿ ಬಂದಾಗ, ಜನರು ಹೊಡೆಯೋದಿಲ್ಲ ಅಲ್ವಾ ಎಂದು ಪ್ರಶ್ನೆ ಮಾಡಿದ್ದೆ.

26
ಬೈತಾರೆ ಅಂದುಕೊಳ್ಳುವಾಗ ಮುದ್ದು ಮಾಡ್ತಿದ್ರು

ಮನೆಯಲ್ಲಿ ಅಪ್ಪ ಬೈಯ್ಯುತ್ತಾರೆ, ಮುದ್ದು ಮಾಡುತ್ತಾರೆ ಅಲ್ವಾ? ಹಾಗೆಯೇ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಬಂದು ಬೈತಾರೆ ಅಂದುಕೊಳ್ಳುವಾಗ ಮುದ್ದು ಮಾಡುತ್ತಿದ್ದರು, ಮುದ್ದು ಮಾಡ್ತಾರೆ ಎಂದುಕೊಂಡಾಗ ಬೈತಿದ್ದರು. ನಾನು ಯೋಚನೆ ಮಾಡಿದ್ದು ಉಲ್ಟಾ ಆಗುತ್ತಿತ್ತು. ಬಿಗ್‌ ಬಾಸ್‌ ಕೂಡ ನನಗೆ ಅಪ್ಪ ಇದ್ದ ಹಾಗೆ.

36
ಮುಂಬೈನಲ್ಲಿ ಸುದೀಪ್‌ ಅವರನ್ನು ಭೇಟಿ ಮಾಡಿದ್ದೆ

ಮುಂಬೈ ಬಂಟರ ಸಂಘದ ಇವೆಂಟ್‌ನಲ್ಲಿ ಕಿಚ್ಚ ಸುದೀಪ್‌ ಅವರನ್ನು ದೂರದಿಂದಲೇ ನೋಡಿದ್ದೆ. ಆಮೇಲೆ ಬಿಗ್‌ ಬಾಸ್‌ನಲ್ಲಿ ಪ್ರತಿವಾರ ಕಿಚ್ಚ ಸುದೀಪ್‌ ಅವರನ್ನು ಭೇಟಿ ಮಾಡಿದ್ದೆ. ಬಂಟರ ಸಂಘದ ಇವೆಂಟ್‌ ನನಗೆ ನೆನಪಿರಲಿಲ್ಲ. ಹೊರಗಡೆ ಬಂದ್ಮೇಲೆ ಇದೆಲ್ಲ ಗೊತ್ತಾಗಿ, ಖುಷಿಯಾಗಿದೆ.

46
ಕಿಚ್ಚ ಸುದೀಪ್‌ ಮನೆಗೆ ಹೋಗೋದು ಯಾವಾಗ?

ಕಿಚ್ಚ ಸುದೀಪ್‌ ಅವರ ಮನೆಗೆ ಯಾವಾಗ ಹೋಗ್ತೀನಿ ಎಂದು ಗೊತ್ತಿಲ್ಲ. ದೇವರು ಟೈಮ್‌ ಕೊಟ್ಟಾಗ ಕಿಚ್ಚ ಸುದೀಪ್‌ ಮನೆಗೆ ಹೋಗ್ತೀನಿ. ಯಾವಾಗ ಬೇಕೋ ಆಗ ಅವರ ಮನೆಗೆ ಹೋಗ್ತೀನಿ.

56
ಗಿಲ್ಲಿ ನಟನನ್ನು ಭೇಟಿಯಾಗೋದು ಯಾವಾಗ?

ಗಿಲ್ಲಿ ನಟ ಅಂದರೆ ನನಗೆ ಇಷ್ಟ. ಗಿಲ್ಲಿ ಅವರನ್ನು ಯಾವಾಗ ಮೀಟ್‌ ಮಾಡ್ತೀನಿ ಎಂದು ಗೊತ್ತಿಲ್ಲ. ಗಿಲ್ಲಿಯನ್ನು ಮೀಟ್‌ ಮಾಡಲು ಕೇಳೋಕೆ ನನಗೆ ಧೈರ್ಯ ಇಲ್ಲ. ಗಿಲ್ಲಿ ಅವರಿಗೆ ಬ್ಯುಸಿ ಇದ್ದೀರಾ ಎಂದು ನಾನು ಪ್ರಶ್ನೆ ಮಾಡಲ್ಲ, ಹಾಗೆ ಅವರ ಮನೆಗೆ ಹೋಗ್ತೀನಿ. ಗಿಲ್ಲಿ ಬಳಿ ನನಗೆ ಮೀಟರ್‌ ಇದೆ ಎಂದು ತಮಾಷೆ ಮಾಡಿದ್ದಾರೆ.

66
ರಿಯಾಲಿಟಿ ಶೋ ಮಾಡ್ತೀನಿ

ರಿಯಾಲಿಟಿ ಶೋ ಆಫರ್‌ ಬಂದರೆ ನಾನು ಮಾಡ್ತೀನಿ, ಆದರೆ ಧಾರಾವಾಹಿಯಲ್ಲಿ ನಟಿಸಲು ಇಷ್ಟ ಇಲ್ಲ. ನನ್ನ ಥರದ ಪಾತ್ರ ಇದ್ದರೆ, ಹೀರೋ ಇಲ್ಲ ಎಂದರೆ ಪರವಾಗಿಲ್ಲ, ಆ ಸಿನಿಮಾದಲ್ಲಿ ನಾನು ನಟಿಸುವೆ ಎಂದು ರಕ್ಷಿತಾ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories