ಮೊದಲೇ ಮೂವರು ಮಕ್ಕಳನ್ನು ಕಳ್ಕೊಂಡ್ರು, ಗಂಡನನ್ನು ಕಳ್ಕೊಂಡ್ರು: ಮಲ್ಲಮ್ಮ ಬಗ್ಗೆ ಪುತ್ರರು ಏನಂದ್ರು?

Published : Oct 13, 2025, 10:50 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮಲ್ಲಮ್ಮ ಈ ಸೀಸನ್‌ನ ಹಿರಿಯ ಸ್ಪರ್ಧಿ. ಕೆಲ ವಿಷಯಗಳು ಅರ್ಥ ಆಗೋದಿಲ್ಲ ಎಂದು ಮುಗ್ಧವಾಗಿ ಕಾಣಿಸಿಕೊಳ್ಳುವ ಮಲ್ಲಮ್ಮ ಆಗಾಗ ಕೂಗಿದ್ದು ಉಂಟು. ಇವರ ಮಕ್ಕಳು ಯಾರು? ಏನು ಮಾಡುತ್ತಿದ್ದಾರೆ ಎಂದು ಅನೇಕರಿಗೆ ಕುತೂಹಲ ಇದೆ. 

PREV
15
ಇಬ್ಬರು ಗಂಡು ಮಕ್ಕಳು

ಮಲ್ಲಮ್ಮ ಅವರಿಗೆ ಇಬ್ಬರು ಗಂಡು ಮಕ್ಕಳು. ಓರ್ವ ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಮತ್ತೊಂದು ಮಗ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ.

25
ಸಿದ್ದಾರೂಢ ಏನಂತಾರೆ?

ಎರಡನೇ ಮಗ ಸಿದ್ದಾರೂಢ. ಸಿದ್ದಾರೂಢ ಕೂಡ ಮಲ್ಲಮ್ಮಳ ಜೊತೆಗೆ ಬ್ಯೂಟಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ದಾರೂಢ ಅವರು ಬೆಂಗಳೂರಿಗೆ ಬಂದು 13 ವರ್ಷಗಳಾಗಿವೆ. “ನನ್ನ ತಾಯಿ ಮಾತಾಡೋದರ ಬಗ್ಗೆ ಅನೇಕರಿಗೆ ಇಷ್ಟವಿಲ್ಲದೆ ಇರಬಹುದು. ಆದರೆ ನನ್ನ ತಾಯಿಗೆ ಖುಷಿ ಆಯ್ತು ಅಂದ್ರೆ ಆಯ್ತು” ಎಂದು ಹೇಳಿದ್ದಾರೆ.

35
ಕಿಡಿಗೇಡಿಗಳಿಗೆ ಏನಂತಾರೆ?

ಮಲ್ಲಮ್ಮನನ್ನು ಇಟ್ಕೊಂಡು ದುಡ್ಡು ಮಾಡ್ತಾರೆ, ನಿಮ್ಮ ತಾಯಿಗೆ ಏನೂ ಗೊತ್ತಾಗೋದಿಲ್ಲ ಎಂದು ಕೆಲವರು ಕೇಳಿದ್ದುಂಟು. ಆದರೆ ನಾನು ಅವರಿಗೆ ವಿಡಿಯೋ ಇಷ್ಟ ಆದರೆ ನೋಡಿ, ಇಲ್ಲ ಅಂದ್ರೆ ಬಿಟ್ಟು ಬಿಡಿ ಎಂದು ಹೇಳಿದ್ದೇನೆ ಎಂದಿದ್ದಾರೆ ಸಿದ್ದಾರೂಢ.

45
ಮೊದಲ ಮಗ ಕೂಡ ಟೇಲರ್‌

ಮಲ್ಲಮ್ಮ ಅವರ ಮೊದಲ ಮಗ ಯಮನೂರ್.‌ ಇವರು ಕೂಡ ಟೇಲರಿಂಗ್‌ ಕೆಲಸ ಮಾಡುತ್ತಿದ್ದಾರೆ. ಹಳ್ಳಿ ಹಾಗೂ ಸಿಟಿಯಲ್ಲಿ ಕೂಡ ಅವರು ಟೇಲರಿಂಗ್‌ ಕೆಲಸ ಮಾಡುತ್ತಿದ್ದಾರೆ.

55
ಮೂವರು ಮಕ್ಕಳು ತೀರಿಕೊಂಡ್ರು

ಮೊದಲ ಮಗು ಹುಟ್ಟಿದ ಬಳಿಕ ಮಲ್ಲಮ್ಮ ಅವರು ಯಮನೂರ್‌ಗೆ ಜನ್ಮ ನೀಡಿದ್ದರು. ಆಮೇಲೆ ಹುಟ್ಟಿದ ಇಬ್ಬರು ಹೆಣ್ಣು ಮಕ್ಕಳು ತೀರಿಕೊಂಡಿದ್ದವು. ಮಲ್ಲಮ್ಮ ಕೂಡ ಗಂಡನನ್ನು ಕಳೆದುಕೊಂಡು, ಮಕ್ಕಳನ್ನು ಸಾಕಿದ್ದು, ಮನೆ ಕೂಡ ಕಟ್ಟಿದ್ದಾರಂತೆ.

Read more Photos on
click me!

Recommended Stories