BBK 12: ಕಿಚ್ಚ ಸುದೀಪ್‌ ಮುಂದೆ ತಪ್ಪೊಪ್ಪಿಕೊಂಡ ರಕ್ಷಿತಾ ಶೆಟ್ಟಿ; ಮಾನವೀಯತೆಗೆ ಸಿಗ್ತು ಚಪ್ಪಾಳೆ

Published : Nov 23, 2025, 08:39 AM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರೇ ಕಿರಿಯ ಸ್ಪರ್ಧಿ. ಕಳೆದ ಬಾರಿ ರಘು ಅವರನ್ನು ಕಾರಣವಿಲ್ಲದೆ ನಾಮಿನೇಟ್‌ ಮಾಡಿದ್ದು, ಆಟದಲ್ಲಿ ಅತಿರೇಕ ಮಾಡಿದ್ದಕ್ಕೆ ಕಿಚ್ಚ ಸುದೀಪ್‌ ಅವರು ತರಾಟೆಗೆ ತೆಗೆದುಕೊಂಡಿದ್ದರು. ಈ ಬಾರಿ ಹೊಗಳಿದ್ದಾರೆ.

PREV
16
ಬುದ್ಧಿವಾದ ಹೇಳಿದ್ದ ಪುಟ್ಟಿ

ರಘು ಹಾಗೂ ಅಶ್ವಿನಿ ಗೌಡ ನಡುವೆ ಜಗಳ ಆಗಿತ್ತು. ಅಶ್ವಿನಿ ಗೌಡಗೆ ಊಟ ಮಾಡೋಕೆ ಹೇಳಿ ಎಂದು ರಕ್ಷಿತಾ ಬುದ್ಧಿವಾದ ಹೇಳಿದ್ದರು. ಇನ್ನೊಂದು ಟಾಸ್ಕ್‌ನಲ್ಲಿ ಗಿಲ್ಲಿ ನಟ ಅವರು ಅಶ್ವಿನಿಗೆ ಪರ್ಸನಲ್‌ ಆಗಿ ಮಾತನಾಡಿದಾಗಲೂ ಕೂಡ ರಕ್ಷಿತಾ ಅದನ್ನು ವಿರೋಧಿಸಿದ್ದರು. ಅಶ್ವಿನಿ ಬಳಿ ಕ್ಷಮೆ ಕೇಳಿ ಎಂದು ಅವರು ಬುದ್ಧಿ ಹೇಳಿದ್ದರು.

26
ಸಮರ್ಥನೆ ಮಾಡಿಕೊಳ್ಳಲಿಲ್ಲ

ಕಿಚ್ಚ ಸುದೀಪ್‌ ಬೈದಾಲೂ ಕೂಡ ತನ್ನನ್ನು ಸಮರ್ಥನೆ ಮಾಡಿಕೊಳ್ಳೋಕೆ ಹೋಗದೆ, ತಪ್ಪು ಆಗಿದೆ ಅಂತ ಒಪ್ಪಿಕೊಂಡರು. ತನಗೆ ಕೊಟ್ಟ ಕೆಲಸ, ಆಟ ಎಲ್ಲವನ್ನು ಚೆನ್ನಾಗಿ ಮಾಡಿದ್ದಾರೆ. ಎಲ್ಲಿ ಎಷ್ಟು ಮಾತಾಡ್ಬೇಕು ಅಷ್ಟು ನಿಭಾಯಿಸಿಕೊಂಡು ಯಾರಿಗೂ ಬೇಜಾರಾಗೋತರ ಮಾತಾಡಿರಲಿಲ್ಲ.

36
ನಂಗೆ ನಾಮಿನೇಟ್‌ ಮಾಡಿದ್ದು ಸರಿ ಇದೆ

ರಘು ಅವರು ತನಗೆ ರಿಟರ್ನ್ ನಾಮಿನೆಟ್ ಮಾಡಿದಾಗಲೂ ಕೂಡ ಬೇಜಾರಾಯಿತಾ ಅಂತ ಕೇಳಿದ್ರೆ, ಇಲ್ಲ, ಇದು ನಂಗೆ ಆಗ್ಬೇಕು, ಸ್ವಲ್ಪ ಗೊತ್ತಾಗುತ್ತೆ ಹೇಗಿರಬೇಕು ಅಂತ ತಪ್ಪು ಮಾಡೋಲ್ಲ ನೆಕ್ಸ್ಟ್, ಹಾಗಾಗಿ ನಂಗೆ ಪರವಾಗಿಲ್ಲ ಅಂತ ರಕ್ಷಿತಾ ಒಪ್ಪಿಕೊಂಡಿದ್ದಾರೆ. ಇದು ಅನೇಕರಿಗೆ ಇಷ್ಟ ಆಗಿದೆ.

46
ಪರ್ಸನಲ್‌ ವಿಷಯ ಮಾತನಾಡಲಿಲ್ಲ

ಕ್ಯಾಪ್ಟನ್ ಸೆಲೆಕ್ಟ್ ಮಾಡುವಾಗ ಸ್ವಲ್ಪ ಕೂಡ ಅಭಿಷೇಕ್‌ ಶ್ರೀಕಾಂತ್‌ ಮುಂದೆ ಪರ್ಸನಲ್ ವಿಷಯ ಮಾತಾಡದೆ, ಅವರಿಗೆ ನೋವು ಆಗೋ ತರ ಮಾತಾಡದೆ ಕೊಟ್ಟಿದ್ದ ಜವಾಬ್ದಾರಿ ನಿಭಾಯಿಸಿಕೊಂಡಿದ್ದು ತುಂಬಾ ಚೆನ್ನಾಗಿ ಇತ್ತು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

56
ಚೆನ್ನಾಗಿ ಆಟ ಆಡ್ತಿದೀರಿ, ಹಾಳಾಗಬೇಡಿ

ಹೋದ ವಾರ ಕೆಲವರಿಗೆ ಅವರೇ ಅವರಿಗೆ ಮುಳ್ಳಾಗ್ತಿದ್ದಾರೆ, ಚೆನ್ನಾಗಿ ಆಟ ಆಡ್ತಿದೀರಿ, ಹಾಳಾಗಬೇಡಿ ಎಂದು ಬುದ್ಧುವಾದ ಹೇಳಿದ್ದೀನಿ. ಕಳೆದ ವಾರ ಆಟ ಎಲ್ಲೋ ಹೋಗ್ತಿದೆ, ಆಟ ಸರಿಯಾಗಿ ಆಡ್ತಿಲ್ಲ ಎಂದು ಬುದ್ಧಿವಾದ ಹೇಳಿದ್ದೆ, ಅದನ್ನು ತಿದ್ದಿಕೊಂಡು ನೀಟ್‌ ಆಗಿ ಆಟ ಆಡಿದ್ರಿ. ಮಾನವೀಯತೆಯನ್ನು ತೋರಿಸಿದ್ರಿ. ಯಾರ ಹತ್ರ ಬೈಸಿಕೊಳ್ತಿದ್ದರೋ ಅವರ ಬಳಿ ಉತ್ತಮ ಎಂದು ಹೇಳಿಸಿಕೊಳ್ತೀರಿ. ಅಶ್ವಿನಿ ಗೌಡ ಊಟ ಮಾಡಿಲ್ಲ ಅಂದಾಗ ಪದೇ ಪದೇ ಊಟ ಮಾಡಿ ಅಂತ ಹೇಳ್ತೀರಿ, ಅದನ್ನು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

66
ಕ್ಷಮೆ ಕೇಳಿದ ರಕ್ಷಿತಾ

“ನಾನು ಕಳೆದ ವಾರ ಅನಗತ್ಯವಾಗಿ ಅತಿರೇಕ ಅಂತ ಅನಿಸಿತು. ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ. ಈ ವಾರ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಖುಷಿ ಆಗಿದೆ” ಎಂದು ರಕ್ಷಿತಾ ಹೇಳಿದ್ದಾರೆ. ರಕ್ಷಿತಾ ಆಟ ವೀಕ್ಷಕರಿಗೆ ಇಷ್ಟ ಆಗ್ತಿದೆ. 

Read more Photos on
click me!

Recommended Stories