Women Card ಪ್ಲೇ ಮಾಡಬೇಡಿ, ಈ ಬಾರಿಯಂತೂ Bigg Boss ರಾಜಮಾತೆ ಅಶ್ವಿನಿ ಗೌಡ ಬೆಂಡೆತ್ತಿದ ಕಿಚ್ಚ ಸುದೀಪ್

Published : Nov 22, 2025, 08:35 AM IST

Bigg Boss ಮನೆಯಲ್ಲಿ ರಘು ಅವರು ಅಶ್ವಿನಿ ಎಂದು ಕರೆದಿದ್ದು ಅಶ್ವಿನಿಗೆ ಸಿಟ್ಟು ಬಂದಿತ್ತು. ನನಗೆ ಅಶ್ವಿನಿ ಗೌಡ ಅವರೇ ಎಂದು ಕರೆಯಬೇಕು, ಅಶ್ವಿನಿ ಎಂದು ಕರೆಯೋ ಹಾಗಿಲ್ಲ ಎಂದು ದೊಡ್ಡ ಸೀನ್‌ ಮಾಡಿದ್ದರು. ಎರಡು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದು ಮನೆಯಲ್ಲಿದ್ದವರಿಗೆ ಫೇಕ್‌ ಎಂದು ಅನಿಸಿತ್ತು.

PREV
15
ರಘು ಮರ್ಯಾದೆ ಕೊಡ್ತಿಲ್ಲ

ರಘು ಅವರು ನನಗೆ ಮರ್ಯಾದೆ ಕೊಡುತ್ತಿಲ್ಲ. ಹೆಣ್ಣು ಮಕ್ಕಳಿಗೆ ಟಾರ್ಗೆಟ್‌ ಮಾಡುತ್ತಾರೆ, ನಿಂದಿಸುತ್ತಾರೆ ಎನ್ನುವ ಅರ್ಥದಲ್ಲಿ ಸಾಕಷ್ಟು ಬಾರಿ ಅಶ್ವಿನಿ ಗೌಡ ಅವರು ಮಾತನಾಡಿದ್ದರು.

25
ರಘು, ಅಶ್ವಿನಿ ಗೌಡ ಮಧ್ಯೆ ಏನು ನಡೆಯಿತು?

ರಘು ಅವರು ಆರಂಭದಲ್ಲಿ ಪೌಡರ್‌ ರೂಮ್‌ ಕ್ಲೀನ್‌ ಮಾಡಬೇಕು, ಬನ್ನಿ ಅಶ್ವಿನಿ ಅಂತ ಹೇಳಿದರು. ಬೇರೆಯವರ ಬಳಿ ಮಾತನಾಡುವಾಗಲೂ ಕೂಡ ಅಶ್ವಿನಿ ಅವರೇ ಎಂದಿದ್ದಾರೆ. ನನಗೆ ಬೆನ್ನು ನೋವಿದೆ, ಹತ್ತು ನಿಮಿಷ ಬಿಟ್ಟು ಬರುವೆ ಎಂದು ಅಶ್ವಿನಿ ಹೇಳಿದ್ದಾರೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಆಗಿದೆ. ಆಮೇಲೆ ಅಶ್ವಿನಿ ಆಮೇಲೆ ಕೂಗಾಡಿದ್ದು ನೋಡಿ ರಘು ಅವರು ಹೋಗೆ, ಬಾರೆ ಎಂದಿದ್ದಾರೆ.

35
ಅಶ್ವಿನಿ ಗೌಡ ವಾದ ಏನು?

ರಘು ಅವರು ಏಕವಚನದಲ್ಲಿ ಮಾತನಾಡಿದರು. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಆಗ್ತಿದೆ. ನನ್ನ ವಯಸ್ಸಿಗೆ, ನನ್ನ ವ್ಯಕ್ತಿತ್ವಕ್ಕೆ ನಾನು ಏಕವಚನದಲ್ಲಿ ಕರೆಸಿಕೊಳ್ಳೋಕೆ ಆಗೋದಿಲ್ಲ ಎಂದು ಅಶ್ವಿನಿ ಗೌಡ ಅವರು ಕೂಗಾಡಿದ್ದಾರೆ.

45
ಕಿಚ್ಚ ಸುದೀಪ್‌ ಮುಂದೆ ಹೇಳಿದ್ದೇನು?

“ಒಬ್ಬ ವ್ಯಕ್ತಿಯಾಗಿ ಎಷ್ಟು ತೇಜೋವಧೆ ಮಾಡಬೇಕು ಅಷ್ಟು ತೇಜೋವಧೆ ಮಾಡುತ್ತಿದ್ದರು” ಎಂದು ಅಶ್ವಿನಿ ಗೌಡ ಅವರು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದಾರೆ.

55
ಯಾರು ಏನು ಮಾತಾಡ್ತಿದ್ದಾರೆ?

“ಏಕವಚನ, ಏಕವಚನ ಅಂತ ಹೇಳಿದ್ರಿ. ನಿಮಗೆ ಎಲ್ಲರೂ ಹೋಗಿ, ಬನ್ನಿ ಅಂತ ಕರೆಸಿಕೊಳ್ಳಬೇಕು ಎಂದಿದ್ದರೆ ನೀವು ಪ್ರತಿ ಮಗುಗೆ ಕೂಡ ಹೋಗಿ ಬನ್ನಿ ಅಂತ ಕರೆಯಿರಿ. ಮಾತು ಎತ್ತಿದರೆ ಯಾವ ಹುಡುಗಿಗೆ ಹೀಗೆ ಮಾತಾಡಬೇಡಿ ಅಂತ ಹೇಳುತ್ತೀರಿ. ಯಾರು ಏನು ಮಾತಾಡುತ್ತಿದ್ದೀರಿ? ಯಾವ ಹೆಣ್ಣು ಮಕ್ಕಳು ನಿಮ್ಮ ಮರ್ಯಾದೆಯನ್ನು ಅಶ್ವಿನಿ ಗೌಡ ಅವರ ಕೈಗೆ ಕೊಟ್ಟು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories