BBK 12: ಎರಡು ಬಿಟ್ರೆ ಹಲ್ಲು ಸೆಟ್‌ ಉದುರಿ ಹೋಗಬೇಕು-ಅಶ್ವಿನಿ ಗೌಡಗೆ ಛಡಿಏಟು ಕೊಟ್ಟ ಗಿಲ್ಲಿ ನಟ

Published : Nov 22, 2025, 08:12 AM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ನಡುವೆ ಸಾಕಷ್ಟು ಜಗಳಗಳು ಆಗಿವೆ. ಅಶ್ವಿನಿ ಗೌಡ ಅವರನ್ನು ಹೇಟ್‌ ಮಾಡುವ ಒಂದು ಬಳಗವೇ ಇಲ್ಲಿ ಸೃಷ್ಟಿ ಆಗಿದೆ. ಈಗ ಟಾಸ್ಕ್‌ ಸಿಕ್ಕಾಗ ಗಿಲ್ಲಿ ನಟ ಅವರು ಎರ್ರಾಬಿರ್ರಿ ಮಾತಾಡಿದ್ದಾರೆ. 

PREV
16
ಕ್ಯಾಪ್ಟನ್ಸಿ ಟಾಸ್ಕ್‌ ಇತ್ತು

ಅಶ್ವಿನಿ ಗೌಡ ಹಾಗೂ ಅಭಿಷೇಕ್ ಮಧ್ಯೆ ಕ್ಯಾಪ್ಟನ್ಸಿ ಟಾಸ್ಕ್‌ ಇತ್ತು. ಈ ವೇಳೆ ಇವರಿಬ್ಬರು ಕೂರಬೇಕು, ಇವರ ಏಕಾಗ್ರತೆಯನ್ನು ಬೇರೆಯವರು ಹಾಳುಮಾಡಬೇಕಿತ್ತು. ಅಶ್ವಿನಿ, ಅಭಿಷೇಕ್‌ ಅವರು 12 ನಿಮಿಷಗಳ ಕಾಲ ಎಣಿಸುತ್ತಲೇ ಇರಬೇಕು, ಉಳಿದವರು ಇವರ ಏಕಾಗ್ರತೆಯನ್ನು ಹಾಳು ಮಾಡಬೇಕು. ಇದು ಆಟದ ನಿಯಮ ಆಗಿತ್ತು. ಅಶ್ವಿನಿ ಗೌಡ ಅವರ ಏಕಾಗ್ರತೆಯನ್ನು ಗಿಲ್ಲಿ ನಟ, ಕಾವ್ಯ ಶೈವ ಹಾಳು ಮಾಡಲು ರೆಡಿಯಾಗಿದ್ದರು. ಇನ್ನು ಅಭಿಷೇಕ್‌ ಏಕಾಗ್ರತೆಯನ್ನು ಹಾಳು ಮಾಡಲು ಜಾಹ್ನವಿ, ರಕ್ಷಿತಾ ರೆಡಿಯಾಗಿದ್ದರು. ಈ ವೇಳೆ ಗಿಲ್ಲಿ ನಟ, ರಕ್ಷಿತಾ ಹೇಳಿದ್ದೇನು?

26
ನೇರ ಯುದ್ಧದಲ್ಲಿ ಹೊಡೆದೆ

“ಅಶ್ವಿನಿ.. ಮೇಡಂ ಅಂತ ಕರೆಯೋವರೆಗೂ ನೀವು ಕಿರುಚುತ್ತೀರಾ? ನೀವು ಕಣ್ಣು ಬಿಟ್ಟರೆ, ಕಣ್ಣು ಕಿತ್ತು ಗೋಲಿ ಆಡುವೆ. ರಘು ಅಣ್ಣ ಅವರು ಅಶ್ವಿನಿ ಅಂತ ಕರೆಯದೆ, ಆಶು ಅಂತ ಕರೆಯಬೇಕಾ? ನಿಮ್ಮನ್ನು ಹೋಗಮ್ಮ ಅಂತ ಕರೆದೆ. ಅಲ್ಲಿ ಅಮ್ಮ ಅಂತ ಇದೆ. ಗುರಾಯಿಸಬೇಕಾ? ಫೋನ್‌ ನಂಬರ್‌ ಬೇಕಾ? ಹುಡುಕಿಕೊಂಡು ಬರ್ತೀರಾ ಹೊಡೆಯೋಕೆ? ಮರ್ಯಾದೆ ಕೊಡಬೇಕು ಅಂದರೆ ಯಾರಿಗೂ ಮರ್ಯಾದೆ ಕೊಡಬೇಕು ಅಂತ ಅನಿಸಲ್ಲ. ಫೇಸ್‌ ಟು ಫೇಸ್‌ ಯುದ್ಧ ಮಾಡಿದೆ, ಎರಡರಲ್ಲಿ ಗೆದ್ದೆ, ಆಮೇಲೆ ನಮಗೆ ನಿಮಗೆ ಯುದ್ಧ. ಆಗ ನಿಮ್ಮನ್ನು ಹೊಡೆದೆ” ಎಂದು ಗಿಲ್ಲಿ ನಟ ಹೇಳಿದ್ದಾರೆ.

36
ಹಲ್ಲು ಸೆಟ್‌ ಉದುರಿ ಹೋಗಬೇಕು

“ತೆಗೆದು ಎರಡು ಹೊಡೆದರೆ ಹಲ್ಲು ಸೆಟ್‌ ಉದುರಿ ಹೋಗಬೇಕು. 80-85 ವಯಸ್ಸಿನಲ್ಲಿ ಮೂಲೆಯಲ್ಲಿ ಕೂರೋದು ಬಿಟ್ಟು, ಇಲ್ಲಿಗೆ ಬಂದು ಯೂತ್‌ಗಳ ಜೊತೆ ಆಟ ಆಡ್ತಿದೀರಾ. ಹೋಗಿ. ಪೌಡರ್‌ ರೂಮ್‌ ಕ್ಲೀನ್‌ ಮಾಡಿ. ತೆಗೆದು ಎರಡು ಬಿಟ್ರೆ ತಲೆ ಚಿಪ್ಪು ಎಗರಿ ಬಿದ್ದು ಹೋಗಬೇಕು. ನೀವು ಕಿರುಚೋದು ನೋಡಿ ಜನರು ಟಿವಿಯನ್ನು ಆಫ್‌ ಮಾಡಬೇಕು. ಬರಬೇಕು ದಾರಿಗೆ. ಎರಡು ವಾರದಲ್ಲಿ ನೀವು ಹೊರಗಡೆ ಹೋಗ್ತೀರಿ, ಇಲ್ಲ ಅಂದರೆ ನಾವು ಹೋಗ್ತೀವಿ” ಎಂದು ಗಿಲ್ಲಿ ನಟ ಹೇಳಿದ್ದಾರೆ.

46
ಕಿತಾಪತಿ ಹೆಂಗಸು

“ಕಿತಾಪತಿ ಹೆಂಗಸರೇ, ಬರೀ ಕಿತಾಪತಿ ಹೆಂಗಸು. ಮ್ಯಾನಿಪ್ಯುಲೇಟ್‌ ಮಾಡೋದು. ಇವತ್ತಾದರೂ ಮೈಕ್‌ ಹಾಕಿಕೊಂಡಿದೀರಾ ಅಲ್ವಾ? ನಿನ್ನೆ ಹಾಗೆ ಹೋಗಬೇಕಿತ್ತು. ಬಿಗ್‌ ಬಾಸ್‌ ಬಳಿ ಹೋಗಿ ಮೊಸರು, ಮೂಸಂಬಿ ಜ್ಯೂಸ್‌ ಬೇಕು ಅಂತ ಕೇಳ್ತೀರಾ? ನಮಗೂ ತರಬೇಕು ತಾನೇ” ಎಂದು ಗಿಲ್ಲಿ ನಟ ಹೇಳಿದ್ದಾರೆ.

56
ರಕ್ಷಿತಾ ಶೆಟ್ಟಿಗೆ ಬೈತಿದ್ರಿ

ಕಾವ್ಯ ಶೈವ ಮಾತನಾಡಿ, “ರಕ್ಷಿತಾ ಶೆಟ್ಟಿಗೆ ಬೈತಿದ್ರಿ. ಅವರೇ ನಿಮಗೆ ಸಪೋರ್ಟ್‌ ಮಾಡೋಕೆ ಬೇಕಿತ್ತಾ? ರಘು ಅವರು ಏನು ದಬ್ಬಾಕಿದ್ದೀರಾ ಅಂತ ಕೇಳಿದ್ರಿ. ಅದಿಕ್ಕೆ ಸಿಟ್ಟಾಯ್ತು. ಪ್ರತಿ ವಾರ ನಾನು ಏನು ಮಾಡಿದೆ ಅಂತ ಹೇಳಿದ್ದಲ್ಲದೆ, ಬ್ಲಡಿ ಲೂಸರ್‌ ಅಂತ ಹೇಳಿದ್ರಿ. ಇದು ಸರಿನಾ? ನೀವು ನಿನ್ನೆಯೇ ಲೂಸರ್‌ ಅಂತ ಸಾಬೀತುಪಡಿಸಿದ್ರಿ. ನನಗೆ ನೀವೆ ಲೂಸರ್‌ ಆಗಿ ಕಾಣುತ್ತಿದ್ದೀರಾ” ಎಂದಿದ್ದಾರೆ.

66
ಬೇರೆಯವರಿಗೆ ಮರ್ಯಾದೆ ಬೇಡವಾ?

““ನಿಮಗೆ ಮಾತ್ರ ಮರ್ಯಾದೆ ಬೇಕು, ಬೇರೆಯವರಿಗೆ ಮರ್ಯಾದೆ ಬೇಡವಾ? ಎಲ್ಲರೂ ಮರ್ಯಾದೆ ಬಿಟ್ಟು ಇಲ್ಲಿಗೆ ಬಂದಿದ್ದೀರಾ. ಬೇರೆಯವರಿಗೆ ಮರ್ಯಾದೆ ಕೊಟ್ಟು ಮರ್ಯಾದೆ ತಗೋಬೇಕು. ನಾನು ನನ್ನ ವಯಸ್ಸಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಿದೆ. ಎಲ್ಲರಿಗೂ ಇಲ್ಲಿಯೇ ಐಡೆಂಟಿಟಿ ಇದೆ” ಎಂದು ಕಾವ್ಯ ಶೈವ ಹೇಳಿದ್ದಾರೆ.

Read more Photos on
click me!

Recommended Stories