BBK 12: ಕಾವ್ಯ ಶೈವ PR ಟೀಂಗೆ ಎಷ್ಟು ಭಯ ಹುಟ್ಟಿಸಿರಬಹುದು, ಹೀಗೆ ಆಗತ್ತೆ ಬರ್ಕೊಳ್ಳಿ: ಸಹೋದರ ಕಾರ್ತಿಕ್

Published : Nov 26, 2025, 11:14 AM IST

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಗಿಲ್ಲಿ ನಟ ಇಲ್ಲ ಅಂದ್ರೆ ಕಾವ್ಯ ಜೀರೋ ಎಂದು ಸ್ಪರ್ಧಿ ರಿಷಾ ಗೌಡ ಹೇಳಿದ್ದಿದೆ. ಅಶ್ವಿನಿ ಗೌಡ ಕೂಡ ಕಾವ್ಯರನ್ನು ಪ್ರಿ ಪ್ರೊಡಕ್ಟ್‌ ಎಂದು ಹೇಳಿದ್ದುಂಟು. ಕಾವ್ಯ ಬಗ್ಗೆ ನೆಗೆಟಿವಿಟಿ ಹರಡುತ್ತಿದ್ದು, ಈ ಬಗ್ಗೆ ಸಹೋದರ ಕಾರ್ತಿಕ್‌ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

PREV
15
PR Team ಬಗ್ಗೆ ಸುದೀಪ್‌ ಮಾತಾಡಿದ್ರು

ಬಿಗ್‌ ಬಾಸ್‌ ಎಂದಕೂಡಲೇ ಸ್ಪರ್ಧಿಗಳ ಪಿಆರ್‌ ಟೀಂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುವುದು. ಈ ಪಿಆರ್‌ ಟೀಂಗಳ ಬಗ್ಗೆ ಕಿಚ್ಚ ಸುದೀಪ್‌ ಕೂಡ ಈ ಬಾರಿ ಇದೇ ವೇದಿಕೆಯಲ್ಲಿ ಮಾತನಾಡಿದ್ದೂ ಇದೆ. ಸ್ಪರ್ಧಿಗಳ ಪ್ರಚಾರ ಮಾಡೋದು ಸರಿ, ಆದರೆ ಬೇರೆ ಸ್ಪರ್ಧಿಗಳ ತೇಜೋವಧೆ ಮಾಡೋದು ಸರಿ ಅಲ್ಲ ಎಂದು ಈ ಹಿಂದಿನ ಸೀಸನ್‌ಗಳಲ್ಲಿ ಸ್ಪರ್ಧಿಗಳು ಹೇಳಿದ್ದುಂಟು.

25
ಕಾವ್ಯ ಅಕೌಂಟ್‌ ಆಕ್ಟಿವ್‌ ಇಲ್ಲ

ಈ ಸೀಸನ್‌ ಸ್ಪರ್ಧಿಗಳ ಕೆಲ ಅಕೌಂಟ್‌ಗಳಲ್ಲಿ ಮಾತ್ರ ಪೋಸ್ಟ್‌ಗಳು ಕಾಣುತ್ತಿವೆ. ಈ ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ, ಈ ಬಾರಿ ಅಷ್ಟಾಗಿ ಪಿಆರ್‌ ಟೀಂ ವರ್ಕ್‌ ಮಾಡುತ್ತಿಲ್ಲ ಎಂದು ಕಾಣುತ್ತಿದೆ. ಎಷ್ಟೋ ಸ್ಪರ್ಧಿಗಳ ಅಕೌಂಟ್‌ನಲ್ಲಿ ಏನೂ ಪೋಸ್ಟ್‌ ಕೂಡ ಆಗುತ್ತಿಲ್ಲ. ಆದರೆ ಕಾವ್ಯ ಅಕೌಂಟ್‌ ಮಾತ್ರ ಆಕ್ಟಿವ್‌ ಆಗಿತ್ತು.

35
ಕ್ಷಮೆ ಕೇಳ್ತೀನಿ ಅನ್ಕೊಂಡಿದ್ದೀರಾ?

ಕಾವ್ಯ ಶೈವ ಅಕೌಂಟ್‌ನಲ್ಲಿ ಏನೂ ಪೋಸ್ಟ್‌ ಮಾಡ್ತಿಲ್ಲ? ಯಾಕೆ ಏನಾಯ್ತು ಎಂದು ಕೆಲವರು ಹೇಳಿದ್ದಿದೆ. ಕಾವ್ಯನಿಗೆ ತುಂಬ ನೆಗೆಟಿವಿಟಿ ಹರಡುತ್ತಿದ್ದಾರೆ. ಪ್ಲೀಸ್, ಕಾವ್ಯನ ಬಗ್ಗೆ ನೆಗೆಟಿವಿಟಿ ಹರಡಬೇಡಿ ಎಂದು ನಿಮ್ಮ ಬಳಿ ಕೇಳಿಕೊಳ್ತಿದೀನಿ, ಅವಳ ಕಡೆಯಿಂದ ನಿಮ್ಮ ಬಳಿ ಕ್ಷಮೆ ಕೇಳ್ತೀನಿ ಎಂದು ಅಂದುಕೊಂಡಿದ್ದೀರಾ?” ಎಂದು ಕಾರ್ತಿಕ್‌ ಪ್ರಶ್ನೆ ಮಾಡಿದ್ದಾರೆ.

45
ಇನ್ನೂ ಆಟ ಬಾಕಿ ಇದೆ

“ಬಿಗ್‌ ಬಾಸ್‌ ಶೋ ಶುರುವಾಗಿ ಐವತ್ತು ದಿನ ಇದೆ. ಇನ್ನೂ ಆಟ ಬಾಕಿ ಇದೆ. ಇನ್ನೂ ನೋಡೋಕೆ ತುಂಬ ಇದೆ, ಏನೂ ಇಲ್ಲದೆ, ಕಾರಣವಿಲ್ಲದೆ, ನೀವು ನೆಗೆಟಿವಿಟಿ ಶುರು ಮಾಡಿದ್ದೀರಾ ಅಂತ ಅಂದ್ರೆ ಕಾವ್ಯ ಯಾವ ರೇಂಜ್‌ಗೆ ಪಿಆರ್‌ ಟೀಂಗೆ ಭಯ ಹುಟ್ಟಿಸಿರಬಹುದು?” ಎಂದು ಕಾವ್ಯ ಸಹೋದರ ಹೇಳಿದ್ದಾರೆ.

55
ಕಾವ್ಯಳನ್ನು ತುಳಿದು ಹಾಕಬೇಕು ಅನ್ಕೊಂಡ್ರಾ?

“ಕಾವ್ಯಳನ್ನು ತುಳಿದು ಹಾಕಬೇಕು ಎಂದುಕೊಂಡಿದ್ದೀರಾ? ಅವೆಲ್ಲ ನಡೆಯಲ್ಲ. ಇನ್ನೂ ನೋಡೋಕೆ ತುಂಬ ಇದೆ. ಫಿನಾಲೆ ದಿನ ಕಿಚ್ಚ ಸುದೀಪ್‌ ಅವರ ಒಂದು ಕೈನಲ್ಲಿ ಕಾವ್ಯ ಶೈವ ಇದ್ದೇ ಇರುತ್ತಾಳೆ, ಬರೆದಿಟ್ಕೋಳಿ” ಎಂದು ಕಾರ್ತಿಕ್‌ ಚಾಲೆಂಜ್‌ ಮಾಡಿದ್ದಾರೆ.

Read more Photos on
click me!

Recommended Stories