BBK 12: ಕಿಚ್ಚ ಸುದೀಪ್‌ಗೆ ಸುಸ್ತು ಮಾಡಿ‌ Bigg Boss ಮನೆಯಿಂದ ಹೊರಬಿದ್ದ ಕರಿಬಸಪ್ಪ-ಆರ್‌ಜೆ ಅಮಿತ್!

Published : Oct 05, 2025, 11:01 PM IST

Bigg Boss Kannada 12 First Week Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಮೊದಲ ವಾರ ಒಂದು ಜಂಟಿ ಜೋಡಿ ಎಲಿಮಿನೇಟ್‌ ಆಗಿದೆ. ಒಂದು ವಾರಕ್ಕೆ ಇಬ್ಬರು ಬಿಗ್‌ ಬಾಸ್‌ ಪ್ರಯಾಣವನ್ನು ಮುಗಿಸಿದ್ದಾರೆ. 

PREV
15
ಎಲಿಮಿನೇಟ್‌ ಆಗಿದ್ದು ಯಾರು?

ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್‌ ಅವರು ಎಲಿಮಿನೇಟ್‌ ಆಗಿದ್ದಾರೆ. ಜಂಟಿ ಹಾಗೂ ಒಂಟಿಗಳ ನಡುವೆ ಕೊನೆಗೂ ಕರಿಬಸಪ್ಪ, ಆರ್‌ಜೆ ಅಮಿತ್‌ ಅವರ ಬಿಗ್‌ ಬಾಸ್‌ ಜರ್ನಿ ಮುಗಿದಿದೆ.

25
ಆರ್‌ಜೆ ಅಮಿತ್‌ ಏನಂದ್ರು?

ಎಲಿಮಿನೇಟ್‌ ಆದಬಳಿಕ ಆರ್‌ಜೆ ಅಮಿತ್‌ ಅವರು ಈ ಬಗ್ಗೆ ಮಾತನಾಡಿ, “ನನಗೆ ಒಪನ್‌ ಆಗೋಕೆ ಎರಡು- ಮೂರು ದಿನ ಟೈಮ್‌ ತಗೊಳ್ತೀನಿ, ಈಗಷ್ಟೇ ಒಪನ್‌ ಆಗ್ತಿದ್ದೆ, ಆಗಲೇ ಎಲಿಮಿನೇಶನ್‌ ಆದೆ, ಈ ಮಿಂಚಿನ ಓಟಕ್ಕೆ ನಾನು ರೆಡಿ ಆಗಿರಲಿಲ್ಲ ಅಂತ ಕಾಣುತ್ತೆ” ಎಂದು ಹೇಳಿದ್ದರು.

35
ಕರಿಬಸಪ್ಪ ಏನಂದ್ರು?

ಕರಿಬಸಪ್ಪ ಅವರು, “ನಾನು ಬಿಗ್‌ ಬಾಸ್‌ ಕರಿಬಸಪ್ಪ ಅಂತ ಹೇಳಿಸಿಕೊಳ್ಳೋಕೆ ಹೆಮ್ಮೆಪಡ್ತೀನಿ. ಕಿಚ್ಚ ಸುದೀಪ್‌ ಅವರ ಪೈಲ್ವಾನ್‌ ಸಿನಿಮಾ ನಮಗೆ ಸ್ಪೂರ್ತಿ. ಬಿಗ್‌ ಬಾಸ್‌ ಅಂದರೆ ನಾನು ದೈಹಿಕ ಆಟ ಅಂತ ಅಂದುಕೊಂಡಿದ್ದೆ. ಆದರೆ ಅದಲ್ಲ, ಮಾನಸಿಕ ಕೂಡ ಬೇಕು ಎಂದು ಗೊತ್ತಾಗಿದೆ” ಎಂದು ಹೇಳಿದ್ದಾರೆ. ಕರಿಬಸಪ್ಪ ಅವರು ಒಂದೇ ಸಮನೆ ಮಾತನಾಡಿದಾಗ ಕಿಚ್ಚ ಸುದೀಪ್‌ ಅವರು ಸುಸ್ತಾಗಿ, ಒಮ್ಮೆ ಅವರು ಬಾಯಿ ಮುಚ್ಚಿದರು, ಆಮೇಲೆ ನೆಲದ ಮೇಲೆ ಕೂಡ ಕುಳಿತರು. ಅದಾದ ಬಳಿಕ ಮತ್ತೆ ಮಾತನಾಡಲು ಅವಕಾಶ ಕೊಟ್ಟರು. ಇದನ್ನೇ ಬಿಗ್‌ ಬಾಸ್‌ ಮನೆಯೊಳಗಡೆ ಮಾತನಾಡಿದ್ರೆ ಎಲ್ಲರೂ ಓಡಿಹೋಗಿದ್ರು ಎಂದು ಹೇಳಿದ್ದಾರೆ. 

45
ಸಂಭಾವನೆ ಎಷ್ಟು?

ಅಂದಹಾಗೆ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್‌ ಜೋಡಿಗೆ 150000 ಲಕ್ಷ ರೂಪಾಯಿ ವೋಚರ್‌ ಸಿಕ್ಕಿದೆ. ಇದನ್ನು ಇವರಿಬ್ಬರು ಹಂಚಿಕೊಳ್ಳಬೇಕು. ಇದರ ಜೊತೆಗೆ ವಾರಕ್ಕೆ ಇಂತಿಷ್ಟು ಎಂದು ಸಂಭಾವನೆ ಕೂಡ ಕೊಡಲಾಗುವುದು. ಆ ಹಣ ಕೂಡ ಸಿಗುವುದು.

55
ನಾಮಿನೇಟ್‌ ಆಗಿದ್ದವರು ಯಾರು?

ಈ ವಾರ ಆರ್‌ಜೆ ಅಮಿತ್‌-ಕರಿಬಸಪ್ಪ, ಗಿಲ್ಲಿ ನಟ- ಕಾವ್ಯ ಶೈವ, ಧನುಷ್‌ ಗೌಡ, ಮಲ್ಲಮ್ಮ, ಅಭಿಷೇಕ್‌ ಶ್ರೀಕಾಂತ್‌-ಅಶ್ವಿನಿ ಎಲಿಮಿನೇಶನ್‌ಗೆ ನಾಮಿನೇಟ್‌ ಆಗಿದ್ದರು. ಅವರಲ್ಲಿ ಕರಿಬಸಪ್ಪ ಹಾಗೂ ಆರ್‌ಜೆ ಅಮಿತ್‌ ಎಲಿಮಿನೇಟ್‌ ಆಗಿದ್ದಾರೆ.

Read more Photos on
click me!

Recommended Stories