Bigg Bossಗೆ ವೈಲ್ಡ್​ ಕಾರ್ಡ್​ ಮೂಲಕ ಹಾಟ್​ ಬ್ಯೂಟಿ ಎಂಟ್ರಿ ಫಿಕ್ಸ್​! ದೊಡ್ಮನೆಯಲ್ಲಿ ಹಲ್​ಚಲ್​ ಪಕ್ಕಾ, ಯಾರೀಕೆ?

Published : Oct 05, 2025, 06:29 PM IST

 ಬಿಗ್ ಬಾಸ್ ಗೆ ಕ್ರಿಕೆಟಿಗ ದೀಪಕ್ ಚಾಹರ್ ಅವರ ಸಹೋದರಿ, ನಟಿ ಮಾಲ್ತಿ ಚಾಹರ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮಾಡೆಲ್ ಹಾಗೂ ನಟಿಯಾಗಿ ಗುರುತಿಸಿಕೊಂಡಿರುವ ಮಾಲ್ತಿಯ ಕುರಿತು ಒಂದಿಷ್ಟು ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ… 

PREV
17
ವೈಲ್ಡ್​ ಕಾರ್ಡ್​ ಸದ್ದು

ಕನ್ನಡದ ಬಿಗ್​ಬಾಸ್​ನಲ್ಲಿ (Bigg Boss 12) ಮಾಸ್​ ಎಲಿಮಿನೇಷನ್​ ನಡೆಯಲಿದ್ದು, ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿಯ ಸುದ್ದಿ ಸದ್ದು ಮಾಡುತ್ತಿರುವ ನಡುವೆಯೇ, ಹಾಟ್​ ಬ್ಯೂಟಿಯೊಬ್ಬರು Wild Card ಮೂಲಕ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಇವರು ದೊಡ್ಮನೆಗೆ ಕಾಲಿಟ್ಟರೆ ಅಲ್ಲಿ ಹಲ್​ಚಲ್​ ಖಂಡಿತ. ಈ ನಟಿಯನ್ನು ನೋಡಿದರೆ ಒಳಗೆ ಇರುವ ಸ್ಪರ್ಧಿಗಳು ಶಾಕ್​ ಆಗೋದಂತೂ ನಿಜ.

27
ನಟಿ ಮಾಲ್ತಿ ಚಾಹರ್ ಎಂಟ್ರಿ?

ಈಕೆಯ ಹೆಸರು ಮಾಲ್ತಿ ಚಾಹರ್. ಕ್ರಿಕೆಟಿಗ ದೀಪಕ್ ಚಾಹರ್ ಅವರ ಸಹೋದರಿ ಇವರು. ಇವರು ವೈಲ್ಡ್​ಕಾರ್ಡ್​ ಮೂಲಕ ಎಂಟ್ರಿ ಕೊಡಲು ಸಿದ್ಧ ಆಗಿರುವುದು ಬಿಗ್​ಬಾಸ್​-19ಕ್ಕೆ. ಅಂದರೆ ಸಲ್ಮಾನ್​ ಖಾನ್​ (Salman Khan) ನಡೆಸಿಕೊಡ್ತಿರೋ ಹಿಂದಿಯ ಬಿಗ್​ಬಾಸ್​ಗೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಮಾಲ್ತಿ ಈ ಸೀಸನ್‌ನ ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಲಿದ್ದಾರೆ. ನಟಿ ಶೆಹನಾಜ್ ಗಿಲ್ ಅವರ ಸಹೋದರ ಶೆಹಬಾಜ್ ಬಡೇಶ, ಈ ಹಿಂದೆ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಈ ಕಾರ್ಯಕ್ರಮವನ್ನು ಪ್ರವೇಶಿಸಿದ್ದರು.

37
ಯಾರು ಈ ಮಾಲ್ತಿ?

ಇನ್ನು ನಟಿಯ ಕುರಿತು ಹೇಳುವುದಾದರೆ, ನವೆಂಬರ್ 15, 1990 ರಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಜನಿಸಿದ ಮಾಲ್ತಿ, ಬಲವಾದ ಕ್ರೀಡಾ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದವರು. ಅವರು ಕ್ರಿಕೆಟಿಗ ದೀಪಕ್ ಚಾಹರ್ ಅವರ ಸಹೋದರಿ. ಅವರ ಸೋದರಸಂಬಂಧಿ ರಾಹುಲ್ ಚಾಹರ್ ಕೂಡ ಕ್ರಿಕೆಟಿಗ.

47
ಮಾಡೆಲ್​ ಹಾಗೂ ನಟಿ

ನಟನೆಗೆ ಕಾಲಿಡುವ ಮೊದಲು ಮಾಲ್ತಿ ಸೌಂದರ್ಯ ಸ್ಪರ್ಧೆಗಳ ಜಗತ್ತಿನಲ್ಲಿ ಗುರುತಿಸಿಕೊಂಡವರು. ಅವರು ಫೆಮಿನಾ ಮಿಸ್ ಇಂಡಿಯಾ 2014 ರಲ್ಲಿ ಫೈನಲಿಸ್ಟ್ ಆಗಿದ್ದರು ಮತ್ತು ಫೆಮಿನಾ ಮಿಸ್ ಇಂಡಿಯಾ ದೆಹಲಿ 2014 ರಲ್ಲಿ ಮಿಸ್ ಫೋಟೋಜೆನಿಕ್ ಪ್ರಶಸ್ತಿಯನ್ನು ಪಡೆದಿದ್ದಾರೆ.

57
2018ರಲ್ಲಿ ಸಿನಿಮಾಕ್ಕೆ ಎಂಟ್ರಿ

2018 ರಲ್ಲಿ ಬಾಲಿವುಡ್ ಚಿತ್ರ 'ಜೀನಿಯಸ್' ನಲ್ಲಿ ರುಬಿನಾ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ, ಅವರು 2022 ರ ರೊಮಾಂಟಿಕ್​ ಸಿನಿಮಾ 'ಇಷ್ಕ್ ಪಶ್ಮಿನಾ'ದಲ್ಲಿ ಒಮಿಶಾ ಪಾತ್ರವನ್ನು ವಹಿಸಿಕೊಂಡರು.

67
ಸೋಷಿಯಲ್​ ಮೀಡಿಯಾದಲ್ಲಿ ಫೇಮಸ್​

ಸಾಮಾಜಿಕ ಮಾಧ್ಯಮದಲ್ಲಿ, ಮಾಲ್ತಿ ಹೆಚ್ಚು ಸಕ್ರಿಯರಾಗಿದ್ದಾರೆ ಮತ್ತು ನಿಯಮಿತವಾಗಿ ತಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದ ಬಗ್ಗೆ ನವೀಕರಣಗಳನ್ನು ಹಂಚಿಕೊಳ್ಳುತ್ತಾರೆ. ಅವರು Instagram ನಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಊಹಾಪೋಹಗಳ ಹೊರತಾಗಿಯೂ, ಅವರು 'ಬಿಗ್ ಬಾಸ್ 19' ಗೆ ತಮ್ಮ ಪ್ರಸ್ತಾವಿತ ಪ್ರವೇಶದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

77
ಬಿಗ್​ಬಾಸ್​-19ರ ಸೆಲೆಬ್ರಿಟಿಗಳು

ಪ್ರಸ್ತುತ ಬಿಗ್​ಬಾಸ್​ ಮನೆಯೊಳಕ್ಕೆ ಸೆಲೆಬ್ರಿಟಿಗಳಲ್ಲಿ ಅಶ್ನೂರ್ ಕೌರ್, ಅಭಿಷೇಕ್ ಬಜಾಜ್, ಗೌರವ್ ಖನ್ನಾ, ಪ್ರಣೀತ್ ಮೋರ್, ತಾನ್ಯಾ ಮಿತ್ತಲ್, ನೀಲಮ್ ಗಿರಿ, ಬಸೀರ್ ಅಲಿ, ಕುನಿಕಾ ಸದಾನಂದ್, ಜೈಶನ್ ಕ್ವಾದ್ರಿ, ನೆಹಾಲ್ ಚುಡಾಸಮಾ, ಫರ್ಹಾನಾ ಭಟ್, ಅಮಲ್ ಮಲ್ಲಿಕ್, ಮೃದುಲ್ ತಿವಾರಿ ಸೇರಿದ್ದಾರೆ.

Read more Photos on
click me!

Recommended Stories