ಹಳ್ಳಿಯ ಈ ಪದ್ಧತಿ ವಿರುದ್ಧ ಸಿಡಿದೆದ್ದ Bigg Boss ಸ್ಪರ್ಧಿಗಳು; ಬದಲಾಯಿಸಿಕೊಳ್ರೀ ಎಂದ ಕಿಚ್ಚ ಸುದೀಪ್

Published : Oct 05, 2025, 10:42 PM IST

Bigg Boss Kannada 12: ಹಳ್ಳಿ ಪದ್ಧತಿ ಬಗೆ ಚರ್ಚೆ ಆಗಿತ್ತು. ಈ ಹಿಂದೆ ಎಪಿಸೋಡ್‌ವೊಂದರಲ್ಲಿ ನಮ್ಮ ಹಳ್ಳಿಯಲ್ಲಿ ಪುರುಷರು ಅಡುಗೆ ಕೆಲಸ ಮಾಡೋದಿಲ್ಲ, ಅಡುಗೆ ಕೆಲಸ ಮಾಡಿದರೆ ಹೆಂಡ್ತಿ ಗುಲಾಮ ಅಂತ ಕರೆಯುತ್ತಾರೆ ಎಂದು ಹೇಳುತ್ತಾರೆ ಎಂದಿದ್ದರು. ಈಗ ಸಂಡೇ ವಿಥ್‌ ಸುದೀಪ ಶೋನಲ್ಲಿ ಚರ್ಚೆಯಾಗಿತ್ತು.  

PREV
15
ಹೆಂಡ್ತಿ ಗುಲಾಮ ಯಾರು?

ಮಾಳು ನಿಪನಾಳ ಅವರು ಉತ್ತರ ಕರ್ನಾಟಕದವರು, ಅಲ್ಲಿಯ ಪದ್ಧತಿಗೂ, ಸಿಟಿಗೂ ತುಂಬ ವ್ಯತ್ಯಾಸವಿದೆ. ಹೀಗೊಮ್ಮೆ ಮಾಳು ಅವರು, ನಮ್ಮ ಕಡೆ ಪುರುಷರು ಅಡುಗೆ ಮಾಡಿದರೆ ಹೆಂಡ್ತಿ ಗುಲಾಮ ಅಂತ ಹೇಳ್ತಾರೆ, ಪುರುಷರು ಅಡುಗೆ ಮಾಡೋದಿಲ್ಲ ಎಂದು ಹೇಳಿದ್ದರು. ಇದನ್ನು ಅನೇಕರು ತಿರಸ್ಕಾರ ಮಾಡಿದ್ದರು.

25
ಮತ್ತೊಮ್ಮೆ ಚರ್ಚೆ

ಈಗ ಮತ್ತೆ ಸಂಡೇ ವಿಥ್‌ ಸುದೀಪ ಶೋನಲ್ಲಿ ಕೂಡ ಈ ಬಗ್ಗೆ ಚರ್ಚೆಯಾಗಿದೆ. ಮಾಳು ನಿಪನಾಳ ಹಾಗೂ ಮಲ್ಲಮ್ಮ ಬಿಟ್ಟು ಉಳಿದವರು ಈ ಪದ್ಧತಿಯನ್ನು ವಿರೋಧಿಸಿದ್ದಾರೆ. 

35
ಮಂಜುಭಾಷಿಣಿ ಏನಂದ್ರು?

ಮಂಜುಭಾಷಿಣಿ ಅವರು, “ನಾವು ನಗರದಲ್ಲಿ ಬೆಳೆದಿದ್ದೇವೆ, ನಮಗೆ ಈ ಪದ್ಧತಿ ಸರಿ ಅನಿಸಿಲ್ಲ. ನಾವು ಇದನ್ನು ವಿರೋಧಿಸುತ್ತೇವೆ. ಗಂಡಿಗಿಂತ ಹೆಣ್ಣು ದೈಹಿಕವಾಗಿ ಅಷ್ಟು ಸ್ಟ್ರಾಂಗ್‌ ಅಲ್ಲ ಎಂದು ಹೇಳುತ್ತಾರೆ, ಹೀಗಾಗಿ ಗಂಡು ಹೊರಗಡೆ ದುಡಿಯೋಕೆ ಹೋಗ್ತಾರೆ, ಹೆಣ್ಣು ಮನೆಯಲ್ಲಿ ಇರ್ತಾರೆ” ಎಂದು ಹೇಳಿದ್ದರು.

45
ಮಾಳು ನಿಪನಾಳ ಏನಂದ್ರು?

ಮಾಳು ನಿಪನಾಳ ಅವರು, “ನಮ್ಮ ಹಳ್ಳಿಯಲ್ಲಿ ಇದೇ ಪದ್ಧತಿ ಇದೆ, ಇದನ್ನೇ ನಾವು ಅನುಸರಿಸಿಕೊಂಡು ಬರುತ್ತಿದ್ದೇವೆ” ಎಂದು ಹೇಳಿದ್ದರು.

55
ಕಿಚ್ಚ ಸುದೀಪ್‌ ನೀಡಿದ ಸಲಹೆ ಏನು?

ಕಿಚ್ಚ ಸುದೀಪ್‌ ಅವರು, “ನಾನು ನಿಮ್ಮ ಪದ್ಧತಿ ತಪ್ಪು ಅಂತ ಹೇಳುತ್ತಿಲ್ಲ. ಈಗ ಹಳ್ಳಿಗಳು ಕೂಡ ಸುಧಾರಿಸಿಕೊಂಡಿವೆ, ಕರೆಂಟ್‌ ಅಥವಾ ಇನ್ನಿತರ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ನಮಗೆ ಬದಲಾಗಬೇಕು ಎನ್ನೋ ಮನಸ್ಥಿತಿಯಿದ್ದರೆ ಮಾತ್ರ ಬದಲಾವಣೆ ಆಗುವುದು. ಈಗ ಈ ವಿಚಾರದಲ್ಲಿ ಕೂಡ ಬದಲಾವಣೆ ಮಾಡಿಕೊಳ್ಳಿ” ಎಂದು ಹೇಳಿದ್ದರು.

Read more Photos on
click me!

Recommended Stories