“ಈ ರೂಮ್‌ನಲ್ಲಿ ಮೂರು ಬಾಗಿಲು ಇದೆ, ಒಳ್ಳೆಯದಲ್ಲ ಎಂದು ಗಿಲ್ಲಿಯೇ ಹೇಳಿದ್ದನು” ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಆಮೇಲೆ ಜಾಹ್ನವಿ ಅವರಿಗೆ ದೃಷ್ಟಿ ತೆಗೆಯಿರಿ ಎಂದು ಕಿಚ್ಚ ಸುದೀಪ್ ಹೇಳಿದ್ದಲ್ಲದೆ ಕುಂಬಳಕಾಯಿ, ನಿಂಬೆಹಣ್ಣು ಕೂಡ ಇಟ್ಟಿದ್ದರು. ಜಾಹ್ನವಿ ಅವರು ಗಿಲ್ಲಿ ನಟ, ರಘು, ರಕ್ಷಿತಾಗೆ ದೃಷ್ಟಿ ತೆಗೆಯಲು ಮುಂದಾಗಿದ್ದಾರೆ. ಆಗ ರಕ್ಷಿತಾ, “ಹಾಗಲ್ಲ, ಹೀಗೆ ಮಾಡಿ” ಎಂದಿದ್ದಾರೆ. ಇದನ್ನು ಕೇಳಿ ಕಿಚ್ಚ ಸುದೀಪ್ ಅವರಂತೂ ನಕ್ಕಿದ್ದಾರೆ.