BBK 12: ಮದುವೆ ಮನೆಯಿಂದ ಗಿಲ್ಲಿ ನಟನನ್ನು ಆಚೆ ಹಾಕಿ, ರಸ್ತೆಗೆ ನೂಕಿದ್ರು: ಗೊತ್ತಿಲ್ಲದ ವಿಷಯ ಬಿಚ್ಚಿಟ್ಟ ತಾಯಿ

Published : Dec 06, 2025, 04:00 PM IST

BBK 12 Gilli Nata: ಗಿಲ್ಲಿ ನಟ ಅವರು ಊರಿನಲ್ಲಿದ್ದಾಗಲೇ ಸ್ಕ್ರಿಪ್ಟ್‌ ಬರೆದು, ನಟಿಸಿ, ನಿರ್ದೇಶನ ಮಾಡಿರುವ ಸಿರೀಸ್‌ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದರು. ಈ ಕಾಮಿಡಿ ವಿಡಿಯೋಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಅದಾದ ನಂತರ ಅವರು ರಿಯಾಲಿಟಿ ಶೋಗಳಲ್ಲಿ ಭಾಗಿಯಾದರು. 

PREV
15
ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ರು

ಗಿಲ್ಲಿ ನಟ ಅವರು ಕಾಮಿಡಿ ರಿಯಾಲಿಟಿ ಶೋ, ಭರ್ಜರಿ ಬ್ಯಾಚುಲರ್ಸ್‌, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಶೋನಲ್ಲಿ ಭಾಗಿಯಾಗಿದ್ದರು. ಆ ವೇಳೆ ಅವರು ಪ್ರಾಪರ್ಟಿ ಕಾಮಿಡಿ ಮಾಡಿ ಹೆಸರು ಗಳಿಸಿದ್ದರು. ಅಂದಹಾಗೆ ಕ್ವಾಟ್ಲೆ ಕಿಚನ್‌ ಶೋನಲ್ಲಿ ಕೂಡ ಭಾಗವಹಿಸಿದ್ದರು. ಈಗ ಬಿಗ್‌ ಬಾಸ್‌ ಮನೆಯಲ್ಲಿ ಹೆಸರು ಮಾಡಿರುವ ಗಿಲ್ಲಿ ನಟ ಈ ಹಿಂದೆ ಸಾಕಷ್ಟು ಕಷ್ಟಪಟ್ಟಿದ್ದರು.

25
ಮಂಡ್ಯದ ಹೈದ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗಿಲ್ಲಿ ನಟ ಅವರು ಬೆಂಗಳೂರಿಗೆ ಬಂದಾಗ ಸಾಕಷ್ಟು ಕಷ್ಟಪಟ್ಟಿದ್ದರು. ಆರು ತಿಂಗಳುಗಳ ಕಾಲ ಅವರು ಮನೆಗೆ ಹೋಗಿರಲಿಲ್ಲ. ಅವರು ಏನೆಲ್ಲ ಕಷ್ಟಪಟ್ಟಿದ್ದರು ಎನ್ನೋದನ್ನು ಗಿಲ್ಲಿ ನಟನ ತಾಯಿ ಜೀ ಕನ್ನಡ ಶೋವೊಂದರಲ್ಲಿ ಹೇಳಿದ ಮಾತು ಈಗ ವೈರಲ್‌ ಆಗ್ತಿದೆ.

35
ರೋಡ್‌ಗೆ ತಂದು ಹಾಕಿದ್ರು

“ಬೆಂಗಳೂರಿನಲ್ಲಿ ನನ್ನ ಮಗ ಕೆಲಸ ಕೇಳಿದಾಗ ಯಾರೂ ಕೂಡ ಕೆಲಸ ಕೊಡಲಿಲ್ಲ. ಚಿಕ್ಕವನು ಎಂದು ಎಲ್ಲರೂ ಆಗೋದಿಲ್ಲ ಎಂದರು. ಇನ್ನೊಂದು ದಿನ ಒಂದು ಮದುವೆಗೆ ಹೋಗಿದ್ದಾನೆ, ಹರಕಲು ಬಟ್ಟೆ ಹಾಕಿದ್ದಾನೆ ಎಂದು ಸೆಕ್ಯುರಿಟಿ ಎಳೆದು ರೋಡ್‌ಗೆ ತಂದು ನೂಕಿದ್ದಾನೆ. ಆಮೇಲೆ ಅವನು ಅತ್ತಿದ್ದಾನೆ” ಎಂದು ಗಿಲ್ಲಿ ನಟನ ತಾಯಿ ಹೇಳಿದ್ದಾರೆ.

45
ಊಟ ಬೇಕು ಎಂದ

“ಗಣೇಶನ ಮೆರವಣಿಗೆ ದಿನ ಎಲ್ಲರೂ ಕುಣಿಯುತ್ತಲಿದ್ದರು, ಹೊಸ ಹುಡುಗ ಕುಣಿಯೋದನ್ನು ನೋಡಿದವರು ಏನು ಸಮಸ್ಯೆ? ಯಾವ ಊರು? ಎಂದು ಪ್ರಶ್ನೆ ಮಾಡಿದ್ದಾರೆ. ಆಗ ನಮ್ಮ ನಟ ಊಟ ಬೇಕು ಎಂದು ಹೇಳಿದ್ದಾನೆ, ಆಗ ಊಟ ಕೊಡಿಸಿದ್ದಾರೆ, ಇವನು ಊಟ ಮಾಡಿ ಬಂದಿದ್ದಾನೆ” ಎಂದು ಗಿಲ್ಲಿ ನಟನ ತಾಯಿ ಹೇಳಿದ್ದಾರೆ.

55
ಕೆಲಸ ಕೊಡಿ ಎಂದು ಕೇಳಿದ

“ಇನ್ಮೊಮ್ಮೆ ಸ್ಕೂಟಿ, ಬೈಕ್‌ ವಾಶ್‌ ಮಾಡುತ್ತಿರುವವರ ಬಳಿ ಹೋಗಿ 20 ರೂಪಾಯಿ ಕೊಡಿ, 50 ರೂಪಾಯಿ ಕೊಡಿ, ಕೆಲಸ ಕೊಡಿ ಎಂದು ಬೇಡಿದ್ದಾನೆ. ಆಗ ಅವರು ಕೆಲಸ ಕೊಟ್ಟಿದ್ದಾರೆ. ಅಂದು ಗಿಲ್ಲಿ ನಟನಿಗೆ ಕಣ್ಣೀರು ಹಾಕಿದ್ದೆ, ಇಂದು ನಮಗೆ ಅವನು ತುಂಬ ಖುಷಿ ಕೊಟ್ಟಿದ್ದಾನೆ. ಮೊಬೈಲ್‌ ತೋರಿಸಿ ನಿಮ್ಮ ಮಗ ಎಂದು ವಿಡಿಯೋ ತೋರಿಸಿದಾಗ ತುಂಬ ಖುಷಿ ಆಗುವುದು” ಎಂದು ಗಿಲ್ಲಿ ನಟ ಹೇಳಿದ್ದಾರೆ.

Read more Photos on
click me!

Recommended Stories