ಬಿಗ್‌ಬಾಸ್ ಕನ್ನಡ ಸೀಸನ್ 12ರ ಅಂತಿಮ ಹಂತದಲ್ಲಿ ಸೂರಜ್ ಮನೆಯಿಂದ ಹೊರಬಂದಿದ್ದಾರೆ. ಸ್ಪಂದನಾ ಎಲಿಮಿನೇಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದರೂ , ಈ ಹೊಸ ಸುದ್ದಿ ಕೇಳಿ ರಕ್ಷಿತಾ ಶೆಟ್ಟಿ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 12 ಅಂತಿಮ ಹಂತಕ್ಕೆ ತಲುಪಿದ್ದು, ಈ ವಾರ ಹೊರಗೆ ಹೋಗುವ ಸ್ಪರ್ಧಿಗಳ ಪೈಕಿ ಸೂರಜ್ ಮನೆಯಿಂದ ಹೊರಗೆ ಬಂದಿದ್ದಾರೆ. ಶುಕ್ರವಾರದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸೂರಜ್ ಮತ್ತು ಸ್ಪಂದನಾ ಮನೆಯಿಂದ ಹೊರಬರುವ ಸ್ಪರ್ಧಿಗಳು ಎಂಬ ಸುದ್ದಿ ವೈರಲ್ ಆಗಿತ್ತು. ಈ ವೈರಲ್ ನ್ಯೂಸ್‌ನಂತೆ ಸೂರಜ್ ಶನಿವಾರ ಮನೆಯಿಂದ ಹೊರಗೆ ಬಂದಿದ್ದಾರೆ.
25
ಸ್ಪಂದನಾ ಸೋಮಣ್ಣ ಹೆಸರು
ಇದೀಗ ಇನ್ನೋರ್ವ ಸ್ಪರ್ಧಿ ಯಾರು ಎಂಬ ಕುತೂಹಲಕ್ಕೆ ಸಣ್ಣದಾದ ಹೊಸ ತಿರುವು ಸಿಕ್ಕಿದೆ. ಕಳೆದ ಎರಡು ದಿನಗಳಿಂದ ಸ್ಪಂದನಾ ಸೋಮಣ್ಣ ಹೆಸರು ಕೇಳಿ ಬಂದಿತ್ತು. ಶನಿವಾರ ಸಹ ಮನೆಯ ಬಹುತೇಕ ಸದಸ್ಯರು ಸ್ಪಂದನಾ ಹೆಸರು ಹೇಳಿದ್ದರು. ಕಳೆದ 14 ವಾರಗಳಿಂದ ಸ್ಪಂದನಾ ಒಂದೇ ರೀತಿಯಲ್ಲಿದ್ದು, ಯಾವುದರಲ್ಲಿಯೂ ಸಕ್ರಿಯರಾಗಿರಲ್ಲ ಎಂಬ ಕಾರಣವನ್ನು ನೀಡಿದ್ದರು.
35
ಸ್ಪಂದನಾ ಅಲ್ಲ, ಗಾಯಕ ಮಾಳು
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ, ಸ್ಪಂದನಾ ಅಲ್ಲ, ಗಾಯಕ ಮಾಳು ಮನೆಯಿಂದ ಹೊರ ಹೋಗುತ್ತಿದ್ದಾರಂತೆ. ಆದ್ರೆ ಈ ಬಗ್ಗೆ ಕಲರ್ಸ್ ಕನ್ನಡ ಅಥವಾ ಬಿಗ್‌ಬಾಸ್ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ
ಉತ್ತರ ಕರ್ನಾಟಕ ಭಾಗದ ಜನಪದ ಗಾಯಕ ಮಾಳು ನಿಪನಾಳ ಬಿಗ್‌ಬಾಸ್ ಮನೆಯಲ್ಲಿ ಅಷ್ಟೊಂದು ಆಕ್ಟಿವ್ ಆಗಿಲ್ಲ. ಬಿಗ್‌ಬಾಸ್ ನೀಡುವ ಆಟಗಳು ಅರ್ಥವಾಗಲ್ಲ. ಮಾಳು ಅವರಿಗೆ ಕಾರಣ ನೀಡಲು ಬರಲ್ಲ ಎಂದು ಸ್ಪರ್ಧಿಗಳು ಹೇಳಿದ್ದರು. ಇದೀಗ ಮಾಳು ನಿಪನಾಳ ಹೊರ ಹೋಗ್ತಿರೋದಕ್ಕೆ ರಕ್ಷಿತಾ ಶಟ್ಟಿ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಸೀಸನ್‌ನಲ್ಲಿ ಮಾಳು ಮತ್ತು ರಕ್ಷಿತಾ ಶೆಟ್ಟಿ ಅಣ್ಣ-ತಂಗಿಯಂತಿದ್ದು, ಇಬ್ಬರು ಜೊತೆಯಾಗಿಯೇ ಹೆಚ್ಚು ಸಮಯ ಕಳೆಯುತ್ತಿದ್ದರು. ಫ್ಯಾಮಿಲಿ ವೀಕ್ ಸಂದರ್ಭದಲ್ಲಿ ಮಾಳು ಮಡದಿ ಮೇಘಾ ಅವರನ್ನು ಅಪ್ಪಿಕೊಂಡು ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಿದ್ದರು. ಈ ಹಿಂದೆಯೂ ನಾಮಿನೇಷನ್‌ನ ಕೊನೆಯ ಹಂತಕ್ಕೆ ಮಾಳು ತಲುಪಿದ್ದಾಗಲೂ ರಕ್ಷಿತಾ ಶೆಟ್ಟಿ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಒಂದು ವೇಳೆ ಮಾಳು ಎಲಿಮಿನೇಟ್ ಆದ್ರೆ, ರಕ್ಷಿತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.