ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಎರಡು ಟೀಂ ಮಾಡಲಾಗಿತ್ತು. ಮನೆ ಕೆಲಸ ಮಾಡದ ಅಶ್ವಿನಿ ಗೌಡ, ಗಿಲ್ಲಿ ನಟ ಅವರನ್ನು ಉಸ್ತುವಾರಿಗಳನ್ನಾಗಿ ಮಾಡಲಾಗಿತ್ತು. ಅಶ್ವಿನಿ ಗೌಡ ಅವರ ಟೀಂನಲ್ಲಿ ಧ್ರುವಂತ್ ಇದ್ದರು. ತನಗೆ ಆಟ ಆಡಲು ಕೊಟ್ಟಿಲ್ಲ ಎಂದು ಧ್ರುವಂತ್ ವಾದ ಮಾಡಿದ್ದರು.
ನನಗೆ ಆಟ ಆಡುವ ಆಸೆ ಇದೆ, ಆಟ ಆಡಿ ನಾನು ಸಾಬೀತುಪಡಿಸಿಕೊಳ್ಳಬೇಕು, ನಾನು ಇಲ್ಲಿ ಮನೆ ಕೆಲಸ ಮಾಡಿಕೊಂಡು ಇರೋಕೆ ಬಂದಿಲ್ಲ, ನಾನು ಗೊಂಬೆಯಾಗಿ ಇರೋಕೆ ಇಷ್ಟವಿಲ್ಲ ಎಂದು ಧ್ರುವಂತ್ ಅವರು ಅಶ್ವಿನಿ ಗೌಡ ಬಳಿ ಹೇಳಿಕೊಂಡಿದ್ದರು.
25
ನಮಗೆ ಯಾಕೆ ಅವಕಾಶ ಕೊಡ್ತಿಲ್ಲ?
ಧನುಷ್ ಗೌಡ ಚೆನ್ನಾಗಿ ಆಡ್ತಾರೆ, ಆ ಟಾಸ್ಕ್ ನೋಡಿದ್ರೆ ಧನುಷ್ ಆಡ್ತಾರೆ ಅಂತ ನನಗೆ ಅನಿಸುತ್ತಿದೆ, ನಮ್ಮ ಟೀಂ ಗೆಲ್ಲಬೇಕು ಎಂದು ಅಶ್ವಿನಿ ಗೌಡ ಅವರು ವಾದ ಮಾಡಿದ್ದರು. ಧನುಷ್‌ಗೆ ಪದೇ ಪದೇ ಆಟ ಆಡೋಕೆ ಅವಕಾಶ ಕೊಡ್ತಿದೀರಾ. ನಮಗೆ ಯಾಕೆ ಅವಕಾಶ ಕೊಡ್ತಿಲ್ಲ? ಎಂದು ಧ್ರುವಂತ್ ವಾದ ಮಾಡಿದ್ದರು.
35
ಆಟ ಆಡಿ ಟಾಸ್ಕ್ ಗೆದ್ದ ಧ್ರುವಂತ್
ಅಶ್ವಿನಿ ಗೌಡ ಹಾಗೂ ಧ್ರುವಂತ್ ನಡುವೆ ಇದೇ ವಿಚಾರಕ್ಕೆ ಜಗಳ ಆಗಿದೆ. ಸಾಕಷ್ಟು ಮಾತುಕತೆ ಕೂಡ ನಡೆದಿದೆ. ಆಮೇಲೆ ಧ್ರುವಂತ್ ಅವರಿಗೆ ಆಟ ಆಡೋಕೆ ಅವಕಾಶ ಕೊಟ್ಟರು. ಆಮೇಲೆ ಧ್ರುವಂತ್ ಆಟ ಆಡಿ ಟಾಸ್ಕ್ ಗೆದ್ದರು.
ಈಗ ರಘು ಹಾಗೂ ಅಶ್ವಿನಿ ಗೌಡ ಮಧ್ಯೆ ಜಗಳ ಆಯ್ತು. ಅದಾದ ಬಳಿಕ ಕಿಚನ್ ಏರಿಯಾದಲ್ಲಿ ರಘು, ಧ್ರುವಂತ್ ಮಾತನಾಡಿಕೊಂಡಿದ್ದಾರೆ. “ನೀವು ಟಾಸ್ಕ್ ಆಡೋಕೆ ಅವಕಾಶ ಕೇಳಿ ಪಡೆದುಕೊಂಡಿದ್ದೀರಾ, ಅದು ಖುಷಿ ಆಯ್ತು ನಂಗೆ” ಎಂದು ರಘು ಹೇಳಿದ್ದಾರೆ. ಆಗ ಧ್ರುವಂತ್ ಅವರು, “ಹೌದು, ನನಗೆ ಅವಕಾಶ ಕೊಡ್ತಿರಲಿಲ್ಲ, ಅಶ್ವಿನಿ ಮೇಡಂ ತಾನು ಹೇಳಿದ್ದೇ ಆಗಬೇಕು ಅಂತ ಅಂತಾರೆ” ಎಂದಿದ್ದಾರೆ.
55
ಡಬಲ್ ಗೇಮ್ ಆಡಿದ ಧ್ರುವಂತ್
ಒಟ್ಟಿನಲ್ಲಿ ಅಶ್ವಿನಿ ಗೌಡ ಮುಂದೆ ಹೋಗಿ ತಾನು ಅವರ ಟೀಂ ಎಂದು ಮಾತನಾಡುವ ಧ್ರುವಂತ್, ಹಿಂದಿನಿಂದ ಅವರ ಬಗ್ಗೆ ಮಾತನಾಡುತ್ತಾರೆ. ಆ ಬಳಿಕ ಅಶ್ವಿನಿ ಗೌಡ ಮುಂದೆ ಹೋಗಿ “ಏನು ನಡೆಯಿತು ಅಂತ ಗೊತ್ತಿಲ್ಲ” ಎಂದಿದ್ದಾರೆ. ಧ್ರುವಂತ್ ಡಬಲ್ ಗೇಮ್ ಅಶ್ವಿನಿಗೆ ಅರ್ಥ ಆಗಿದೆ.