Amruthadhaare: ಜೈದೇವನ​ ಮುಗಿಸಲು ದಿಯಾ ಸ್ಕೆಚ್​- ಅಪ್ಪನ ಬಳಿ ಹೋಗಲು ಭೂಮಿಕಾ ಗ್ರೀನ್​ ಸಿಗ್ನಲ್​!

Published : Nov 20, 2025, 06:05 PM IST

ಗೌತಮ್ ತನ್ನ ತಂದೆ ಎಂಬ ಸತ್ಯ ತಿಳಿದ ಆಕಾಶ್, ಶಾಲಾ ಪ್ರಾಜೆಕ್ಟ್ ನೆಪದಲ್ಲಿ ಅಪ್ಪ-ಅಮ್ಮನನ್ನು ಒಂದು ಮಾಡಲು ಯತ್ನಿಸುತ್ತಿದ್ದಾನೆ. ಮತ್ತೊಂದೆಡೆ, ಜೈದೇವ್ ಮತ್ತು ಶಕುಂತಲಾ ವಿರುದ್ಧ ಸೇಡು ತೀರಿಸಿಕೊಳ್ಳಲು ದಿಯಾ ಹೊಸ ತಂತ್ರವನ್ನು ರೂಪಿಸುತ್ತಿದ್ದಾಳೆ.

PREV
17
ಸೀರಿಯಲ್​ ಮುಗಿಯೋ ಸೂಚನೆ

ಅಮೃತಧಾರೆ (Amruthadhaare) ಈಗ ಮುಗಿಯುವ ಎಲ್ಲಾ ಸೂಚನೆಗಳೂ ಸಿಗುತ್ತಿವೆ. ಅತ್ತ ಆಕಾಶ್​ಗೆ ಗೌತಮ್​ನೇ ತನ್ನ ಅಪ್ಪ ಎನ್ನುವ ವಿಷಯ ತಿಳಿದಿದೆ. ಅಪ್ಪ-ಅಮ್ಮನನ್ನು ಒಂದು ಮಾಡಲು ಆಕಾಶ್​ ಮತ್ತು ಮಿಂಚು ಕೈಜೋಡಿಸಿದ್ದಾರೆ.

27
ಅಪ್ಪನ ಬಳಿ ಹೋಗುವ ಪ್ಲ್ಯಾನ್​

ಇದೀಗ ಆಕಾಶ್​ಗೆ ಶಾಲೆಯಲ್ಲಿ ಪ್ರಾಜೆಕ್ಟ್​ ಕೊಟ್ಟಿದ್ದಾರೆ. ಹೇಗಾದರೂ ಮಾಡಿ ಅಪ್ಪನ ಕೈಯಲ್ಲಿ ಪ್ರಾಜೆಕ್ಟ್​ ಮಾಡಿಸಿಕೊಳ್ಳುವ ಆಸೆ ಆಕಾಶ್​ಗೆ. ಆದ್ದರಿಂದ ಏನಾದರೂ ನೆಪ ಹೇಳುವ ಪ್ಲ್ಯಾನ್​ ಮಾಡಿದ್ದಾನೆ.

37
ಆಕಾಶ್​ಗೆ ಪ್ರಾಜೆಕ್ಟ್​

ಭೂಮಿಕಾಗೆ ಪ್ರಾಜೆಕ್ಟ್​ ಬರಲ್ಲ ಎಂದಾಗ, ನಾನೇ ಬರ್ತೇನೆ ಇರು ಎಂದಿದ್ದಾಳೆ ಭೂಮಿಕಾ. ಆದರೆ ಆಕಾಶ್​ಗೆ ಅಪ್ಪ ಬೇಕಾಗಿದೆ. ಕೊನೆಗೆ ಮಲ್ಲಿ ಅಲ್ಲಿಗೆ ಬಂದಾಗ, ಆಕಾಶ್​​ ನಾನು ಫ್ರೆಂಡ್ ಮನೆಯಲ್ಲಿ ಪ್ರಾಜೆಕ್ಟ್​ ಮಾಡುವಂತೆ ಏನಾದ್ರೂ ಪ್ಲ್ಯಾನ್​ ಮಾಡು ಎಂದಿದ್ದಾನೆ.

47
ಮಲ್ಲಿಯಿಂದ ಪ್ಲ್ಯಾನ್​

ಆಕಾಶ್​ಗೆ ಸತ್ಯ ಗೊತ್ತಿರೋ ವಿಷ್ಯ ಮಲ್ಲಿಗೂ ತಿಳಿದಿಲ್ಲ. ಆದರೂ ಗೌತಮ್​ ಬಳಿ ಪ್ರಾಜೆಕ್ಟ್​ ಮಾಡಿಸಿಕೊಳ್ಳಲು ಅವಳೂ ಬಯಸಿದ್ದರಿಂದ ಏನೋ ನೆಪ ಹೇಳಿದ್ದಾಳೆ. ಕೊನೆಗೆ ಭೂಮಿಕಾಗೆ ವಿಷಯ ಗೊತ್ತಾಗಿ, ಎಲ್ಲಿ ಹೋಗ್ತಿದ್ದಿಯಾ ಎಂದು ಕೇಳಿದ್ದಾಳೆ.

57
ಭೂಮಿಕಾ ಗ್ರೀನ್​ ಸಿಗ್ನಲ್​

ಅದಕ್ಕೆ ಚಿಕ್ಕಿಗೆ ಪ್ರಾಜೆಕ್ಟ್​ ಬರಲ್ಲ, ಫ್ರೆಂಡ್​ ಮನೆಗೆ ಹೋಗ್ತಿದ್ದೇನೆ ಎಂದಾಗ ಭೂಮಿಕಾ ಕೂಡ ಎದುರು ಮಾತನಾಡದೇ ಗ್ರೀನ್​ ಸಿಗ್ನಲ್​ ಕೊಟ್ಟೇ ಬಿಟ್ಟಿದ್ದಾಳೆ. ಮಲ್ಲಿ ಬಿಡ್ತಾಳಾ, ಭೂಮಿಕಾ ಕಾಲೆಳೆದಿದ್ದಾಳೆ.

67
ಮಿಂಚುಗೂ ಖುಷಿ

ಕೊನೆಗೆ ಅಪ್ಪನ ಬಳಿಯೇ ಪ್ರಾಜೆಕ್ಟ್​ ಮಾಡಿಸಿಕೊಂಡಿದ್ದಾನೆ ಆಕಾಶ್​. ಮಿಂಚು ಇದನ್ನು ನೋಡಿ ಸಕತ್​ ಖುಷಿ ಪಟ್ಟುಕೊಂಡಿದ್ದಾಳೆ. ಹೇಗಾದರೂ ಮಾಡಿ ಅಪ್ಪ-ಅಮ್ಮನನ್ನು ಒಂದು ಮಾಡುವುದು ಇಬ್ಬರ ಆಸೆಯಷ್ಟೇ.

77
ಜೈದೇವ್​ ಮುಗಿಸಲು ದಿಯಾ ಸ್ಕೆಚ್​

ಅದೇ ಇನ್ನೊಂದೆಡೆ ಜೈದೇವ್​  ಮತ್ತು ಶಕುಂತಲಾಗೆ ಬುದ್ಧಿ ಕಲಿಸಲು ದಿಯಾ ಸ್ಕೆಚ್​ ಹಾಕುತ್ತಿದ್ದಾಳೆ. ಗಂಡನನ್ನು ಪ್ರೀತಿ ಮಾಡಿದಂತೆ ನಾಟಕ ಮಾಡುತ್ತಿದ್ದಾಳೆ. ಮಲ್ಲಿ ಕೊಟ್ಟ ಡಿವೋರ್ಸ್​ಗೆ ಸಹಿ ಹಾಕಬೇಡಿ, ಅವಳಿಗೆ ಬುದ್ಧಿ ಕಲಿಸೋಣ ಎಂದು ಜೈದೇವ್​ಗೆ ಹೇಳಿ ಜೈದೇವ್​ ಮತ್ತು ಶಕುಂತಲಾರನ್ನು ಮುಗಿಸಲು ತಂತ್ರ ರೂಪಿಸುತ್ತಿದ್ದಾಳೆ. ಈಗ ಆಕೆ ಶಕುನಿ ಮಾಮನ ಜೊತೆ ಕೈಜೋಡಿಸುವಲ್ಲಿ ಸಂಶಯವೇ ಇಲ್ಲ! 

Read more Photos on
click me!

Recommended Stories