Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಧ್ರುವಂತ್ ಹಾಗೂ ರಕ್ಷಿತಾ ನಡುವೆ ಮನಸ್ತಾಪ ಆಗಿದೆ. ದೊಡ್ಮನೆಯಲ್ಲಿ ಈಗಾಗಲೇ ಕೆಲವು ಬಾರಿ ಇನ್‌ಸ್ಟಂಟ್ ಕರ್ಮ ವರ್ಕ್ ಆಗಿದೆ ಎಂದು ವೀಕ್ಷಕರು ಹೇಳಿದ್ದರು. ಈಗ ಅದೇ ಘಟನೆ ಮತ್ತೆ ಮರುಕಳಿಸಿದೆ. ಹಾಗಾದರೆ ಏನಾಯ್ತು?
ರಕ್ಷಿತಾ ಅವರು ಸರಿಯಾಗಿ ಮೈಕ್ ಧರಿಸಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಆಮೇಲೆ ರಕ್ಷಿತಾ ಅವರು ಕ್ಷಮೆ ಕೇಳಿದ್ದಾರೆ. ಎಲ್ಲರ ಬಳಿಯೂ ಹೋಗಿ ಕ್ಷಮೆ ಕೇಳಬೇಕು ಎಂದು ಬಿಗ್ ಬಾಸ್ ಮನೆಯ ಈ ವಾರದ ಕ್ಯಾಪ್ಟನ್ ರಘು ಹೇಳಿದ್ದರು. ಅದರಂತೆ ರಕ್ಷಿತಾ ಕ್ಷಮೆ ಕೇಳಿದ್ದಾರೆ.
26
ಎಲ್ಲರಿಗೂ ಕ್ಷಮೆ ಕೇಳಿದ ಪುಟ್ಟಿ
ಮನೆಯಲ್ಲಿದ್ದವರ ಬಳಿ ಹೋಗಿ ರಕ್ಷಿತಾ ಅವರು ಕ್ಷಮೆ ಕೇಳಿದ್ದಾರೆ. ಮೈಕ್ ಉಲ್ಟಾ ಆಗಿ ಹಾಕಿಕೊಂಡಿದ್ದೆ, ಮುಂದಿನ ಸಲ ಸರಿಯಾಗಿ ಹಾಕಿಕೊಳ್ತೀನಿ ಎಂದು ರಕ್ಷಿತಾ ಅವರು ಹೇಳಿದ್ದಾರೆ.
36
ರಕ್ಷಿತಾ ನಾಟಕ ಮಾಡ್ತಾರಂತೆ
ಅಂದಹಾಗೆ ಧ್ರುವಂತ್, ರಕ್ಷಿತಾ ಮಧ್ಯೆ ಮನಸ್ತಾಪ ಇತ್ತು. ರಕ್ಷಿತಾ ನಾಟಕ ಮಾಡುತ್ತಾರೆ, ಅವರಿಗೆ ಕನ್ನಡ ಬರುತ್ತದೆ ಎಂದು ಧ್ರುವಂತ್ ಹೇಳಿದ್ದರು. ಪದೇ ಪದೇ ರಕ್ಷಿತಾ ವಿರುದ್ಧ ಧ್ರುವಂತ್ ಆರೋಪ ಮಾಡಿದ್ದರು. ಇದಕ್ಕಾಗಿಯೇ ಇವರ ಮಧ್ಯೆ ಆಗ ವಾದ-ವಿವಾದ ಆಗುತ್ತಿತ್ತು.
ಧ್ರುವಂತ್ ಅವರನ್ನು ಅಣ್ಣ ಅಂತ ಕರೆಯೋಕೆ ಮನಸ್ಸು ಆಗೋದಿಲ್ಲ, ಅವರು ನನ್ನ ಅಣ್ಣ ಆಗುವ ಯೋಗ್ಯತೆ ಇಲ್ಲ, ಅದಕ್ಕಾಗಿ ಸರ್ ಅಂತ ಕರೆಯುತ್ತೇನೆ ಎಂದು ರಕ್ಷಿತಾ ಹೇಳಿದ್ದರು. ರಕ್ಷಿತಾ ಅವರು ಧ್ರುವಂತ್ ಬಳಿ ಹೋಗಿ “ಮುಂದಿನ ಸಲ ಸರಿಯಾಗಿ ಮೈಕ್ ಹಾಕಿಕೊಳ್ತೀನಿ, ಧ್ರುವಂತ್ ಸರ್” ಎಂದು ಹೇಳಿದ್ದಾರೆ.
56
ಅಣುಕಿಸಿದ್ದ ಧ್ರುವಂತ್
ರಕ್ಷಿತಾ ಕ್ಷಮೆ ಕೇಳಿದಾಗ, ಧ್ರುವಂತ್ ಅವರು “ಕೇಳಿಸಿಲ್ಲ” ಎಂದು ನಾಟಕ ಮಾಡಿದ್ದರು. ಇನ್ನೊಮ್ಮೆ ಅವರು ಸ್ಪ್ರೇ ಮಾಡೋ ಥರ ನಾಟಕ ಮಾಡಿದ್ದರು. ಆಗ ರಕ್ಷಿತಾ, “ಬಿಗ್ ಬಾಸ್ ಮನೆಯಲ್ಲಿ ಇರೋವಷ್ಟು ದಿನ ಅಲ್ಲ, ಈ ಜನ್ಮದಲ್ಲಿ ಮೈಕ್ ಸಮಸ್ಯೆ ಮಾಡಲ್ಲ” ಎಂದು ಹೇಳಿದ್ದರು. ರಕ್ಷಿತಾ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ.
66
ಕರ್ಮ ವರ್ಕ್ ಆಯ್ತು
ಧ್ರುವಂತ್ ಅವರು ಮೈಕ್ ಹಾಕಿರಲಿಲ್ಲ. ಹೀಗಾಗಿ ಅವರು ರಕ್ಷಿತಾ ಬಳಿ ಬಂದು, “ಎಂಥ ಗೊತ್ತುಂಟ, ನಾನು ಮೈಕ್ ಸರಿಯಾಗಿ ಹಾಕಿಲ್ಲ, ಕ್ಷಮೆ ಕೇಳುತ್ತೀನಿ” ಎಂದು ಹೇಳಿದ್ದಾರೆ. ಆಗ ರಕ್ಷಿತಾ ಅವರು, “ಕ್ಷಮಿಸೋದಿಲ್ಲ” ಎಂದಿದ್ದಾರೆ. ಕರ್ಮ ಎನ್ನೋದು ಎಲ್ಲಿಗೂ ಹೋಗೋದಿಲ್ಲ ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.