BBK 12: ರಕ್ಷಿತಾ ಶೆಟ್ಟಿ ಎಲಿಮಿನೇಶನ್ ಬಳಿಕ, ಇನ್ನೋರ್ವ ಸ್ಪರ್ಧಿ ನಾಪತ್ತೆ, ಹಾಗಾದ್ರೆ ಅವರೆಲ್ಲಿ?

Published : Oct 03, 2025, 12:06 AM IST

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಕೆಲವರು ಜಗಳ ಆಡಿದರೆ ಮಾತ್ರ ಇಲ್ಲಿ ಉಳಿಯುತ್ತೇನೆ ಎಂದು ನಂಬಿಕೊಂಡು ಬಂದಹಾಗಿದೆ. ಕೆಲವರು ಫ್ಲರ್ಟ್‌ ಮಾಡಬೇಕು ಅಂತ ಅಂದುಕೊಂಡರೆ, ಮಲ್ಲಮ್ಮ ಜೊತೆಗಿದ್ದರೆ ನಾವು ಕ್ಯಾಮರಾ ಕಣ್ಣಿಗೆ ಬೀಳ್ತೀವಿ ಅಂದುಕೊಂಡಿದ್ದಾರೆ. ಹೀಗಿರುವಾಗ ಓರ್ವ ನಟಿ ಮಾತ್ರ ಎಲ್ಲಿಯೂ ಕಾಣುತ್ತಿಲ್ಲ.

PREV
17
ಸ್ಪರ್ಧಿಗಳು ಯಾರು?

ಸ್ಪಂದನಾ ಸೋಮಣ್ಣ, ಕರಿಬಸಪ್ಪ, ಅಶ್ವಿನಿ ಗೌಡ, ಧನುಷ್‌ ಗೌಡ, ಅಶ್ವಿನಿ, ಧ್ರುವಂತ್‌, ಕಾವ್ಯ ಶೈವ, ಆರ್‌ಜೆ ಅಮಿತ್‌, ಡಾಗ್‌ ಸತೀಶ್‌, ಮಲ್ಲಮ್ಮ, ರಾಶಿಕಾ ಶೆಟ್ಟಿ, ಚಂದ್ರಪ್ರಭ, ಜಾಹ್ನವಿ, ಗಿಲ್ಲಿ ನಟ, ಮಂಜುಭಾಷಿಣಿ, ಕಾಕ್ರೋಚ್‌ ಸುಧಿ, ರಕ್ಷಿತಾ ಶೆಟ್ಟಿ, ಕರಿಬಸಪ್ಪ, ಮಾಳು ನಿಪನಾಳ, ಅಭಿಷೇಕ್‌ ಶ್ರೀಕಾಂತ್‌ ಅವರು ಸ್ಪರ್ಧಿಗಳು.

27
ಈಗ ಕಾಣಿಸ್ತಿರೋದು ಯಾರು?

ನಿತ್ಯವೂ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ 1.5 ಗಂಟೆ ಎಪಿಸೋಡ್‌ನಲ್ಲಿ ಈ ಸ್ಪರ್ಧಿಗಳಲ್ಲಿ ಅಶ್ವಿನಿ ಗೌಡ, ಕಾಕ್ರೋಚ್‌ ಸುಧಿ, ಜಾಹ್ನವಿ, ಚಂದ್ರಪ್ರಭ, ಕಾವ್ಯಾ ಶೈವ, ಮಂಜುಭಾಷಿಣಿ, ಗಿಲ್ಲಿ ನಟ, ಧನುಷ್‌ ಗೌಡ, ಧ್ರುವಂತ್‌, ಮಲ್ಲಮ್ಮ ಮಾತ್ರ ಕಾಣಿಸುತ್ತಿದ್ದಾರೆ.

37
ಅಪರೂಪದವರು ಯಾರು?

ಸ್ಪಂದನಾ ಸೋಮಣ್ಣ, ಮಾಳು ನಿಪನಾಳ, ಕರಿಬಸಪ್ಪ, ಆರ್‌ಜೆ ಅಮಿತ್‌, ಡಾಗ್‌ ಸತೀಶ್‌, ಜಾಹ್ನವಿ, ಅಶ್ವಿನಿ ಅವರು ಪ್ರತಿನಿತ್ಯ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ರಾಶಿಕಾ ಶೆಟ್ಟಿ ಅವರು ಇಲ್ಲಿಯವರೆಗೆ 3-4 ಶಬ್ದ ಮಾತನಾಡಿರೋದು ಕಾಣಿಸಿದೆ.

47
ರಾಶಿಕಾ ಶೆಟ್ಟಿ ಇದ್ದಾರಾ?

ರಾಶಿಕಾ ಶೆಟ್ಟಿ ಅವರಿಗೆ ಅಭಿಷೇಕ್‌ ಶ್ರೀಕಾಂತ್‌ ಅವರು ಮೇಕಪ್‌ ಮಾಡಿದ್ದರು, ಆಮೇಲೆ ಅಭಿ, ರಾಶಿಕಾ ಡ್ಯಾನ್ಸ್‌ ಮಾಡಿದ್ದರು. ಇದನ್ನು ಬಿಟ್ಟರೆ ರಾಶಿಕಾ ಚಪಾತಿ ತಟ್ಟಿ, ಬೇಯಿಸುತ್ತ ಕಳೆದುಹೋಗಿದ್ದಾರೆ. ವೀಕ್ಷಕರಿಗೂ ಕೂಡ ರಾಶಿಕಾ ಎಲ್ಲಿ ಎನ್ನೋ ಪ್ರಶ್ನೆ ಬಂದಿದೆ.

57
ರಾಶಿಕಾ ಶೆಟ್ಟಿ ಯಾರು?

ನಟಿಯಾಗಬೇಕು ಎಂದು ಚಿಕ್ಕ ವಯಸ್ಸಿನಲ್ಲಿಯೇ ಕನಸು ಕಂಡಿದ್ದ ರಾಶಿಕಾ ಶೆಟ್ಟಿ ಅವರು, ಸಾಕಷ್ಟು ಆಡಿಷನ್‌ಗಳನ್ನು ಕೊಟ್ಟು ರಿಜೆಕ್ಟ್‌ ಆಗಿದ್ದರು. ಆಮೇಲೆ ಯೋಗರಾಜ್‌ ಭಟ್‌ ನಿರ್ದೇಶನದ ‘ಮನದ ಕಡಲು’ ಸಿನಿಮಾದಲ್ಲಿ ನಟಿಸಿದ್ದಾರೆ.

67
ಸಿಕ್ಕಾಪಟ್ಟೆ ಹೈಪರ್

ಜಗತ್ತಿನಲ್ಲಿ ನಂ 1 ಸೋಂಬೇರಿ ನಾನು ಎಂದು ಹೇಳಿಕೊಳ್ಳೋ ರಾಶಿಕಾ ಶೆಟ್ಟಿ ಅವರು, ಸಿಟ್ಟು, ನಗು ಎಲ್ಲವೂ ಅತಿಯಾಗಿಯೇ ಮಾಡುತ್ತಾರಂತೆ.

77
ರಮ್ಯಾ ಜೊತೆ ಡ್ಯಾನ್ಸ್‌

ನಟಿ ರಮ್ಯಾ ಅವರ ‘ತನನಂ ತನನಂ’ ಸಿನಿಮಾದ ಹಾಡಿನಲ್ಲಿ ಅವರ ಜೊತೆ ಡ್ಯಾನ್ಸ್‌ ಮಾಡಿದ್ದರು. ಆಗ ಅವರಿಗೆ ವಯಸ್ಸು ಕಡಿಮೆಯಾಗಿತ್ತು. ಯಾವಾಗಲೂ ತುಂಬ ಊಟ ಮಾಡುವ ರಾಶಿಕಾ ಶೆಟ್ಟಿ ಅವರು, ಬಿಗ್‌ ಬಾಸ್‌ ಮನೆಯಲ್ಲಿ ಹೇಗಿದ್ದಾರೋ ಏನೋ!

Read more Photos on
click me!

Recommended Stories