Rakshitha Shetty best friend: ಬಿಗ್‌ಬಾಸ್ ಕನ್ನಡ ಮುಗಿದು ಈಗಾಗಲೇ ಮೂರು ದಿನ ಆಗಿದೆ. ಆದ್ರೂ ಈ ಬಿಗ್‌ಬಾಸ್ ಮನೆಯಲ್ಲಿ ನಡೆದ ಪ್ರಸಂಗಗಳ ಬಗ್ಗೆ ಇನ್ನೂ ಚರ್ಚೆ ಮಾತ್ರ ಮುಗಿದಿಲ್ಲ.
ಬಿಗ್ ಬಾಸ್ (BBK 12) ಮನೆಯಲ್ಲಿ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಫ್ರೆಂಡ್‌ಶಿಪ್ ಹೇಗಿತ್ತು ಎಂಬ ಬಗ್ಗೆ ವೀಕ್ಷಕರಿಗೆ ಹೆಚ್ಚೇನು ಹೇಳಬೇಕಿಲ್ಲ. ಗಿಲ್ಲಿಯನ್ನು ರಕ್ಷಿತಾ ಶೆಟ್ಟಿ ತುಂಬಾ ಇಷ್ಟಪಡುತ್ತಿದ್ದರು.
27
ಮನೆಯಲ್ಲಿ ನಡೆದ ಪ್ರಸಂಗಗಳ ಚರ್ಚೆ
ಬಿಗ್‌ಬಾಸ್ ಕನ್ನಡ ಮುಗಿದು ಈಗಾಗಲೇ ಮೂರು ದಿನ ಆಗಿದೆ. ಆದ್ರೂ ಈ ಬಿಗ್‌ಬಾಸ್ ಮನೆಯಲ್ಲಿ ನಡೆದ ಪ್ರಸಂಗಗಳ ಬಗ್ಗೆ ಇನ್ನೂ ಚರ್ಚೆ ಮಾತ್ರ ಮುಗಿದಿಲ್ಲ. ಸದ್ಯ ರನ್ನರ್ ಅಪ್ ಆದ ರಕ್ಷಿತಾ ಶೆಟ್ಟಿಯವರು ಗಿಲ್ಲಿ (Gilli Nata) ಮೇಲಿದ್ದ ಫೀಲಿಂಗ್ಸ್ ಬಗ್ಗೆ ಈಗಾಗಲೇ ಅನೇಕ ಸಂದರ್ಶನದಲ್ಲಿ ಮಾತನಾಡುತ್ತಲೇ ಇದ್ದಾರೆ.
37
ತಮಾಷೆಗೆ ಹೊಡೆಯುತ್ತಿದ್ದ ಗಿಲ್ಲಿ
ಎಷ್ಟೋ ಬಾರಿ ತಮಾಷೆಗೆ ಗಿಲ್ಲಿ ನಟ ಅವರು ರಕ್ಷಿತಾ ಶೆಟ್ಟಿಗೆ ಹೊಡೆದಿದ್ದರು. ಒಂದು ವೇಳೆ ಆ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೆ ದೊಡ್ಡ ರಂಪಾಟ ಆಗುವ ಸಾಧ್ಯತೆ ಇರುತ್ತಿತ್ತು. ಆದರೆ ಈ ಬಗ್ಗೆಯೂ ರಕ್ಷಿತಾ ಶೆಟ್ಟಿ ಅವರು ಮಾತನಾಡಿದ್ದಾರೆ.
‘ನಾನು ಮತ್ತು ಗಿಲ್ಲಿ ಟಾಮ್ ಆ್ಯಂಡ್ ಜೆರಿ ರೀತಿ ಇದ್ದೆವು. 24 ಗಂಟೆಯಲ್ಲಿ ಅವರು ಹಲವು ಬಾರಿ ನನಗೆ ಹೊಡೆಯುತ್ತಿದ್ದರು. ಅದನ್ನೆಲ್ಲ ಬಿಗ್ ಬಾಸ್ ಕಟ್ ಮಾಡುತ್ತಾರೆ ಎಂದುಕೊಂಡಿದ್ದೆ. ಈಗ ಮೊಬೈಲ್‌ನಲ್ಲಿ ನೋಡಿದೆ. ಅವರು ತಳ್ಳಿದಾಗ ನಾನು ಬಿದ್ದಿದ್ದಕ್ಕೆ ಎಷ್ಟು ನೋವಾಯಿತು ಗೊತ್ತಾ? ಅವರು ಹೊಡೆದಾಗ ನನಗೆ ಖುಷಿ ಆಗುತ್ತಿತ್ತು. ಬೇಜಾರು ಆಗುತ್ತಿರಲಿಲ್ಲ. ನಾನು ಎಂಜಾಯ್ ಮಾಡುತ್ತಿದ್ದೆ’ ಎಂದು ಹೇಳಿದ್ದಾರೆ ರಕ್ಷಿತಾ.
57
ರಕ್ಷಿತಾ ಬೆಸ್ಟ್ ಫ್ರೆಂಡ್ ಯಾರು?
ಇದೆಲ್ಲಾ ಸರಿ. ಬಿಗ್ ಬಾಸ್ ಮನೆಯೊಳಗೆ ರಕ್ಷಿತಾ ಶೆಟ್ಟಿ- ಗಿಲ್ಲಿ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಆದರೆ ಹೊರಗೆ ರಕ್ಷಿತಾ ಬೆಸ್ಟ್ ಫ್ರೆಂಡ್ ಯಾರು ಎಂಬ ಬಗ್ಗೆ ಅವರೇ ರಿವೀಲ್ ಮಾಡಿದ್ದಾರೆ.
67
ಈಗ ಸಿಕ್ಕರು
ರಕ್ಷಿತಾ ಶೆಟ್ಟಿ ಬೆಸ್ಟ್ ಫ್ರೆಂಡ್ ಯಾರು ಇರಬಹುದು ಎಂಬ ಕುತೂಹಲ ನಿಮಗೆಲ್ಲರಿಗೂ ಇದೆ. ಸದ್ಯ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ರಕ್ಷಿತಾ, ನನಗೆ ಇದುವರೆಗೆ ಬೆಸ್ಟ್ ಫ್ರೆಂಡ್ಸ್ ಅಂತ ಯಾರೂ ಇರಲಿಲ್ಲ. ಆದರೆ ಈಗ ಸಿಕ್ಕರು ಎಂದಿದ್ದಾರೆ.
77
ನನ್ನ ಬೆಸ್ಟ್ ಫ್ರೆಂಡ್ ಅವರು
ಹೌದು. "ನನ್ನ ಲೈಫಲ್ಲಿ ಫ್ರೆಂಡ್ಸ್ ಯಾರೂ ಇಲ್ಲ. ಫ್ರೆಂಡ್ಸ್ ಇದ್ದಾರೆ ದೂರ ದೂರ. ಹತ್ತಿರದವರು ಇಲ್ಲ. ಬೆಸ್ಟ್ ಫ್ರೆಂಡ್ಸ್ ನಮ್ಮ ಲೈಫಲ್ಲಿ ಬಂದರೆ ಎಂಥ ಫೀಲ್ ಆಗುತ್ತೆ ಅಲ್ವಾ. ಬಟರ್‌ಫ್ಲೈ ಫೀಲ್ ಆಗುತ್ತೆ. ಹಾಗೆಯೇ ಮನೆಯಿಂದ ಬಂದ ಮೇಲೆ ಗಿಲ್ಲಿಯನ್ನ ತುಂಬಾ ಮಿಸ್ ಮಾಡಿಕೊಳ್ತಾ ಇದ್ದೇನೆ. ನಮ್ಮಿಬ್ಬರಿಗೂ ಬೆಸ್ಟ್ ಫ್ರೆಂಡ್ಸ್ ಅಂತಾರಲ್ಲ ಅಂತಹ ಕನೆಕ್ಷನ್, ಬಾಂಡಿಂಗ್ ಇತ್ತು ಎನ್ನುವ ಮೂಲಕ ರಕ್ಷಿತಾ ಗಿಲ್ಲಿ ನನ್ನ ಬೆಸ್ಟ್ ಫ್ರೆಂಡ್ ಎಂಬುದನ್ನ ರಿವೀಲ್ ಮಾಡಿದ್ದಾರೆ. ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.