ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟನದ್ದೇ ಸೌಂಡು. ಒಂದಲ್ಲ ಒಂದು ವಿಚಾರಕ್ಕೆ ಗಿಲ್ಲಿ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಅಶ್ವಿನಿ ಗೌಡ, ಜಾಹ್ನವಿಯಿಂದ ಹಿಡಿದು ಎಲ್ಲರೂ ಇವರ ಹೆಸರೇ ಹೇಳುತ್ತಿದ್ದಾರೆ. ಈಗ ಗಿಲ್ಲಿ ನಟನಿಗೆ ಮಾನವೀಯತೆ ಇಲ್ಲ, ಅಜ್ಜಿ ಸತ್ತರೂ ನಗುತ್ತಿದ್ದರಂತೆ.
ಆಟದ ವಿಚಾರಕ್ಕೆ, ಕಾಮಿಡಿ ವಿಚಾರಕ್ಕೆ ಗಿಲ್ಲಿ ನಟನನ್ನು ಧನುಷ್, ಧ್ರುವಂತ್, ಅಶ್ವಿನಿ ಗೌಡ, ಜಾಹ್ನವಿ, ರಾಶಿಕಾ ಶೆಟ್ಟಿ, ರಿಷಾ ಗೌಡ, ಅಭಿಷೇಕ್ ಶ್ರೀಕಾಂತ್ ಅವರು ಕೂಡ ವಿರೋಧಿಸಿದ್ದರು. ಗಿಲ್ಲಿ ಕಾಮಿಡಿ ಕಾವ್ಯ ಶೈವಗೂ ಬೇಸರ ತಂದಿತ್ತು. ಬೇರೆಯವರನ್ನು ತೇಜೊವಧೆ ಮಾಡಿ ಮಾಡ್ತಾರೆ ಎಂಬ ಆರೋಪ ಇತ್ತು.
25
ಸಾಯುತ್ತಿದ್ದರೂ ನೀರು ಕೊಡಲ್ಲ
“ಯಾರಾದರೂ ಪಕ್ಕದಲ್ಲಿ ಸಾಯುತ್ತಿದ್ದರೆ, ಗಿಲ್ಲಿ ನಟ ಒಂದು ಗ್ಲಾಸ್ ನೀರು ಕೊಡಲ್ಲ. ಸಾವಿನ ಮನೆಯಲ್ಲಿಯೂ ತಮಾಷೆ ಮಾಡುತ್ತಾನೆ” ಎಂದು ಧ್ರುವಂತ್ ಹೇಳಿದ್ದಾರೆ. “ಅಜ್ಜಿ ತೀರಿಕೊಂಡಾಗ ನಗುತ್ತಿದ್ದೆ ಎಂದು ಗಿಲ್ಲಿಯೇ ಹೇಳಿದ್ದಾನೆ. ಅವನಿಗೆ ಮಾನವೀಯತೆ ಇಲ್ಲ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
35
“ಗಿಲ್ಲಿ ನನಗೆ ಕ್ಷಮೆ ಕೇಳಿಲ್ಲ
ಟಾಸ್ಕ್ ನಂತರ ಅಭಿಷೇಕ್, ಸ್ಪಂದನಾ ಸೋಮಣ್ಣ ಮಾತನಾಡಿಕೊಂಡಿದ್ದಾರೆ.
“ಗಿಲ್ಲಿ ನನಗೆ ಕ್ಷಮೆ ಕೇಳಿಲ್ಲ. ಅಶ್ವಿನಿ ಗೌಡ ಜೊತೆ ಗಿಲ್ಲಿ ಕೆಟ್ಟದಾಗಿ ಮಾತನಾಡಿದ. ಆರಂಭದಲ್ಲಿ ಜಗಳ ಶುರು ಮಾಡಿದ್ದೇ ಅಶ್ವಿನಿ. ನನ್ನ ತಾಯಿಗೆ ಹೀಗೆ ಯಾರಾದರೂ ಮಾಡಿದರೆ ನಾನು ಸುಮ್ಮನೆ ಇರುತ್ತಿದ್ದೆ? ಅಶ್ವಿನಿ ಅವರಿಗೆ ಹೀಗೆ ಆಯ್ತು ಅಂತ ಟಿವಿಯಲ್ಲಿ ಅವರ ಮನೆಯವರು ನೋಡಿದಾಗ, ಯಾರೂ ಸಪೋರ್ಟ್ ಮಾಡಿಲ್ಲ ಅಂದಾಗ ಏನಾಗುತ್ತದೆ? ಹೀಗಾಗಿ ನಾನು ಈ ಥರ ಮಾತಾಡಬೇಡ ಎಂದು ಹೇಳಿದೆ” ಎಂದು ಅಭಿಷೇಕ್ ಹೇಳಿದ್ದಾರೆ.
“ರಘು, ರಕ್ಷಿತಾ, ಕಾವ್ಯ ಬಿಟ್ಟು ಎಲ್ಲರನ್ನು ಕಾಲೆಳೆಯುತ್ತಾನೆ, ಕಾಮಿಡಿ ಮಾಡುತ್ತಾನೆ. ಇದನ್ನು ಬಿಟ್ಟು ಬೇರೆ ಇಲ್ಲ” ಎಂದು ಅಭಿಷೇಕ್ ಹೇಳಿದ್ದಾರೆ. ಅಭಿಷೇಕ್‌ಗೂ, ಗಿಲ್ಲಿಗೂ ಮನಸ್ತಾಪ ಆಗಿದ್ದೂ ಇದೆ, ವಾದ-ವಿವಾದ ಆಗಿದ್ದೂ ಇದೆ.
55
ಗಿಲ್ಲಿ ಕಾಮಿಡಿ ಜಾಸ್ತಿ ಆಯ್ತಾ?
ಗಿಲ್ಲಿ ಕಾಮಿಡಿ ವೀಕ್ಷಕರ ಮನಸ್ಸು ಗೆದ್ದಿದೆ. ಈಗ ಗಿಲ್ಲಿ ಕಾಮಿಡಿ ಅತಿರೇಕ ಆಗಿದೆ ಎನ್ನೋದು ಎಲ್ಲರ ಕಂಪ್ಲೆಂಟ್ ಆಗಿದೆ. ಟಾಸ್ಕ್ ವಿಚಾರವಾಗಿ ಉಸ್ತುವಾರಿಗಳಾದ ಗಿಲ್ಲಿ ನಟ, ಅಶ್ವಿನಿ ಗೌಡ ಮಧ್ಯೆ ಜಗಳ ಆಯ್ತು. ಗಿಲ್ಲಿ ನಟ ಹೀಗೆಲ್ಲ ಮಾತಾಡಿದ್ರು ಎಂದು ಅಶ್ವಿನಿ ಅವರು ಅತ್ತಿದ್ದಾರೆ.