ಕ್ಯಾಪ್ಟನ್ ರಘು ಜೊತೆಗಿನ ಜಗಳದಿಂದಾಗಿ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ರಕ್ಷಿತಾ ಶೆಟ್ಟಿ ಇಬ್ಬರ ನಡುವಿನ ಜಗಳದ ಕಾರಣವನ್ನು ವಿಶ್ಲೇಷಿಸಿದ್ದು, ವೀಕ್ಷಕರಲ್ಲಿ ಅಶ್ವಿನಿ ಸಿಂಪತಿ ಕಾರ್ಡ್ ಬಳಸುತ್ತಿದ್ದಾರೆಯೇ ಅಥವಾ ರಘು ದ್ವೇಷ ಸಾಧಿಸುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
ರಘು ಜೊತೆಗಿನ ಜಗಳದಿಂದಾಗಿ ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ ಆರಂಭಿಸುತ್ತಿದ್ದಾರೆ. ಉಪವಾಸಕ್ಕೆ ಮುಂದಾಗಿರುವ ಕ್ಯಾಪ್ಟನ್ ರಘು ಅವರಿಂದ ಅಶ್ವಿನಿ ಗೌಡ ಕ್ಷಮೆ ಬಯಸುತ್ತಿರುವಂತೆ ಕಾಣಿಸುತ್ತಿದೆ. ಊಟ ಮಾಡದೇ ಕುಳಿತ ಅಶ್ವಿನಿ ಗೌಡ ಅವರ ಮನವೊಲಿಸಲು ಜಾನ್ವಿ ಸೇರಿದಂತೆ ಎಲ್ಲಾ ಸದಸ್ಯರು ಪ್ರಯತ್ನಿಸುತ್ತಿದ್ದಾರೆ.
25
ರಕ್ಷಿತಾ ಹೇಳಿದ ಮಾತು
ಮತ್ತೊಂದೆಡೆ ರಘು ಅವರೊಂದಿಗೆ ಈ ವಿಷಯದ ಬಗ್ಗೆ ಸದಸ್ಯರು ಮಾತನಾಡುತ್ತಿದ್ದಾರೆ. ಇಬ್ಬರಲ್ಲಿ ತಪ್ಪು ಯಾರದ್ದು? ಅಲ್ಲಿ ನಡೆದಿದ್ದು ಏನು? ತಮಗೆ ಕಾಣಿಸಿದ್ದು ಏನು ಎಂಬುದರ ರಘು ಜೊತೆ ಕುಳಿತು ಸ್ಪರ್ಧಿಗಳು ಚರ್ಚಿಸುತ್ತಿದ್ದಾರೆ. ಇನ್ನು ಕೆಲವರು ನಮಗ್ಯಾಕೆ ಈ ವಿಷಯ ಅಂತ ಅಂತರ ಕಾಯ್ದುಕೊಂಡಿದ್ದರೆ. ಈ ಎಲ್ಲಾ ಸದಸ್ಯರ ನಡುವೆ ರಘು ಮುಂದೆ ಬಂದು ರಕ್ಷಿತಾ ಹೇಳಿದ ಮಾತುಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
35
ರಘು ಮತ್ತು ಅಶ್ವಿನಿ ಗೌಡ
ರಘು ಮತ್ತು ಅಶ್ವಿನಿ ಗೌಡ ಜಗಳ ಅತಿರೇಕಕ್ಕೆ ಹೋಗಿದ್ದು ಎಲ್ಲಿ ಎಂಬುದನ್ನು ಜಾನ್ವಿ ಮತ್ತು ರಕ್ಷಿತಾ ಶೆಟ್ಟಿ ಗುರುತಿಸಿದಂತೆ ಕಾಣಿಸುತ್ತಿದೆ. ನೀವು ಏನು ದಬ್ಬಾಕಿದ್ದೀರಿ ಅಂದ್ರೆ ಅವರಿಗೆ ಕೋಪ ಬರಲ್ಲವಾ ಎಂದು ರಘುಗೆ ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಇತ್ತ 10 ನಿಮಿಷದಲ್ಲಿ ಬೆನ್ನುನೋವು ಕಡಿಮೆಯಾಗುತ್ತಾ ಎಂಬ ಮಾತು ಅಶ್ವಿನಿ ಅವರನ್ನು ಟ್ರಿಗರ್ ಮಾಡಿತು ಎಂದು ಜಾನ್ವಿ ಹೇಳಿದ್ದಾರೆ.
ಚಿಕ್ಕ ಹುಡುಗಿಯಾದ್ರೂ ರಕ್ಷಿತಾ ಶೆಟ್ಟಿ ತುಂಬಾ ಮೆಚ್ಯೂರ್ ಆಗಿ ಚಿಂತಿಸುತ್ತಾರೆ. ಇದೀಗ ಅದು ಮತ್ತೊಮ್ಮೆ ಸಾಬೀತಾಗಿದೆ. ರಘು ಅವರ ತಪ್ಪನ್ನು ನೇರವಾಗಿ ಹೇಳುವ ಧೈರ್ಯವನ್ನು ರಕ್ಷಿತಾ ಮಾಡಿದ್ದಾರೆ ಎಂದು ತುಳು ಪುಟ್ಟಿಯ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ರಘು ತಮ್ಮನ್ನು ನೇರವಾಗಿ ನಾಮಿನೇಟ್ ಮಾಡಿದ್ದನ್ನು ಸಹ ರಕ್ಷಿತಾ ಅದನ್ನು ಪಾಸಿಟಿವ್ ಆಗಿ ಸ್ವೀಕರಿಸಿದ್ದರು.