ಗಿಲ್ಲಿ ನಟ, ಟಾಸ್ಕ್‌ನಲ್ಲಿ ಸೋತ ನಂತರ ಫಲಿತಾಂಶ ಪ್ರಕಟಿಸಲು ನಿರಾಕರಿಸಿದರು. ಈ ಮೊಂಡುವಾದದ ವರ್ತನೆಯು ಸಹ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಯಿತು. ಅಂತಿಮವಾಗಿ ಬಿಗ್‌ಬಾಸ್ ಆದೇಶ ನೀಡಬೇಕಾಯಿತು. ಈ ಘಟನೆಯಿಂದಾಗಿ ಗಿಲ್ಲಿ ನಟನ ಆಟದ ವೈಖರಿ ಮತ್ತು ವ್ಯಕ್ತಿತ್ವದ ಬಗ್ಗೆ ಮನೆಯೊಳಗೆ ಚರ್ಚೆಗಳು ಆರಂಭವಾಗಿವೆ.
ಬಿಗ್‌ಬಾಸ್ ಮನೆಯಲ್ಲಿ ಮತ್ತು ಹೊರಗಡೆ ಸ್ಪರ್ಧಿ ಗಿಲ್ಲಿ ನಟ ಅವರ ಕುರಿತ ಅಭಿಪ್ರಾಯಗಳು ಸಣ್ಣದಾಗಿ ಬದಲಾಗಲು ಆರಂಭಿಸಿವೆ. ಆರಂಭದಿಂದಲೂ ತಮ್ಮ ಮಾತುಗಳಿಂದಲೇ ಗಿಲ್ಲಿ ನಟ ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿದ್ದರು. ಇದೀಗ ಒಂದು ತಂಡದ ನಾಯಕತ್ವದ ಜವಾಬ್ದಾರಿ ಗಿಲ್ಲಿ ನಟ ಮೇಲಿದೆ. ಈ ಹಿಂದೆಯೂ ಗಿಲ್ಲಿ ವೈಯಕ್ತಿಕವಾಗಿ ಆಡಿದ ಆಟಗಳಲ್ಲಿ ಬಹುತೇಕ ಸೋಲು ನೋಡಿರುವ ಸ್ಪರ್ಧಿಯಾಗಿದ್ದಾರೆ.
28
ಗಿಲ್ಲಿ ವರ್ತನೆಗೆ ಬೇಸರ
ಈ ವಾರ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಎರಡು ತಂಡಗಳ ನಾಯಕರಾಗಿದ್ದಾರೆ. ಈಗಾಗಲೇ ನೀಡಲಾಗಿರುವ ಎರಡೂ ಆಟಗಳಲ್ಲಿ ಗಿಲ್ಲಿ ನಟ ನೇತೃತ್ವದ ತಂಡ ಸೋಲಿನ ರುಚಿ ನೀಡಿದೆ. ಸ್ವಯಂಕೃತ ತಪ್ಪುಗಳಿಂದಾಗಿ ಗಿಲ್ಲಿ ನಟ ತಂಡ ಸೋತಿದೆ ಎಂಬ ವಿಶ್ಲೇಷಣೆಗಳು ಮನೆಯ ಸದಸ್ಯರ ನಡುವೆ ನಡೆದಿವೆ. ಎರಡನೇ ಬಾರಿ ತಮ್ಮ ತಂಡ ಸೋತಾಗ ಗಿಲ್ಲಿ ನಟ ನಡೆದುಕೊಂಡ ರೀತಿಗೆ ವೀಕ್ಷಕರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
38
ಫಲಿತಾಂಶ ಪ್ರಕಟಿಸದ ಗಿಲ್ಲಿ ನಟ
ಟಾಸ್ಕ್ ಮುಗಿಯುತ್ತಿದ್ದಂತೆ ಎರಡು ತಂಡದ ನಾಯಕರು ಫಲಿತಾಂಶ ಪ್ರಕಟಿಸಬೇಕು ಎಂದು ಬಿಗ್‌ಬಾಸ್ ಸೂಚಿಸಿರುತ್ತಾರೆ. ತಮ್ಮ ತಂಡ ಗೆದ್ದ ಖುಷಿಯಲ್ಲಿ ಅಶ್ವಿನಿ ಗೌಡ ಫಲಿತಾಂಶ ಘೋಷಿಸಿ, ತಮ್ಮ ಸದಸ್ಯರೊಂದಿಗೆ ಸಂಭ್ರಮಾಚರಣೆ ಮಾಡುತ್ತಾರೆ. ಆದ್ರೆ ಗಿಲ್ಲಿ ನಟ ಫಲಿತಾಂಶ ಪ್ರಕಟಿಸದೇ ದೂರ ಹೋಗಿ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ದೀರ್ಘ ಸಮಯದವರೆಗೂ ಬಿಗ್‌ಬಾಸ್ ಸಹ ಯಾವುದೇ ಘೋಷಣೆ ಮಾಡಲ್ಲ.
ಇದರಿಂದಾಗಿ ಮನೆಯ ಸದಸ್ಯರು ಗಿಲ್ಲಿ ನಟ ಅವರಿಗೆ ಫಲಿತಾಂಶ ಪ್ರಕಟಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ನಾನು ಮಾತು ಮುಗಿಸುವ ಮೊದಲೇ ಅಶ್ವಿನಿ ಗೌಡ ಮಧ್ಯ ಪ್ರವೇಶಿಸಿ ಫಲಿತಾಂಶ ಪ್ರಕಟಿಸಿದ್ದು ತಪ್ಪು ಎಂದು ಗಿಲ್ಲಿ ನಟ ಹೇಳುತ್ತಾರೆ. ಇದರಿಂದಾಗಿ ಅಶ್ವಿನಿ ಗೌಡ ಮತ್ತೆ ಫಲಿತಾಂಶ ಪ್ರಕಟಿಸಲು ಅಶ್ವಿನಿ ಗೌಡ ಮುಂದಾಗುತ್ತಾರೆ ಮತ್ತು ಆಟದ ಮೈದಾನದಲ್ಲಿಯೇ ಕುಳಿತುಕೊಳ್ಳುತ್ತಾರೆ.
58
ಜವಾಬ್ದಾರಿ ಮರೆತ್ರಾ ಗಿಲ್ಲಿ ನಟ?
ಕೆಂಪು ತಂಡದ ಸದಸ್ಯರೆಲ್ಲರೂ ಜೊತೆಯಾಗಿ ಒಮ್ಮತದಿಂದ ನಿರ್ಧಾರ ಪ್ರಕಟಿಸಬೇಕು ಎಂದು ಹೇಳಿದರೂ ಗಿಲ್ಲಿ ನಟ ಮಾತ್ರ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ. ಮತ್ತೆ ಮತ್ತೆ ತಮ್ಮ ಮೊಂಡುವಾದವನ್ನು ಗಿಲ್ಲಿ ನಟ ಎಲ್ಲರ ಮುಂದೆ ಮಂಡಿಸುತ್ತಾರೆ. ಇದರಿಂದ ಬೇಸತ್ತ ಕ್ಯಾಪ್ಟನ್ ರಘು ಎಚ್ಚರಿಕೆ ನೀಡಿದ್ರೂ ಗಿಲ್ಲಿ ನಟ ಎಚ್ಚೆತ್ತುಕೊಳ್ಳಲ್ಲ.
ನಾನು ಮಾತ್ರ ಗಿಲ್ಲಿಯನ್ನು ಕರೆಯಲ್ಲ. ಆಟ ಮುಗಿದ ಬಳಿಕ ಫಲಿತಾಂಶ ಪ್ರಕಟಿಸೋದು ಉಸ್ತುವಾರಿಯ ಜವಾಬ್ದಾರಿ. ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿರುವೆ ಎಂದು ಅಶ್ವಿನಿ ಗೌಡ ತಮ್ಮ ನಿರ್ಧಾರಕ್ಕೆ ಬದ್ಧವಾಗುತ್ತಾರೆ.
68
ಬಿಗ್‌ಬಾಸ್ ಆದೇಶ
ಕೊನೆಗೆ ಬಿಗ್‌ಬಾಸ್ ಉಸ್ತುವಾರಿಗಳು ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಬಿಗ್‌ಬಾಸ್ ಆದೇಶಿಸುತ್ತಾರೆ. ಆಗ ಅಶ್ವಿನಿ ಗೌಡ ಮತ್ತೊಮ್ಮೆ ಫಲಿತಾಂಶ ಪ್ರಕಟಿಸುತ್ತಾರೆ. ನಂತರ ಗಿಲ್ಲಿ ನಟ ಎಲ್ಲಿಯೂ ಅಶ್ವಿನಿ ಗೌಡ ಹೆಸರು ಹೇಳದೇ ಧ್ರುವಂತ್ ಆಟದಿಂದಲೇ ಕೆಂಪು ತಂಡ ಗೆದ್ದಿದೆ. ಆದ್ರೆ ಆ ತಂಡಕ್ಕೆ ಧ್ರುವಂತ್ ಮೇಲೆ ನಂಬಿಕೆಯೇ ಇರಲಿಲ್ಲ ಎಂದು ಹೇಳಿ ಫಲಿತಾಂಶ ಪ್ರಕಟಿಸುತ್ತಾರೆ.
78
ಹುಳಿ ಹಿಂಡುವ ಕೆಲಸ
ಅಂತಿಮವಾಗಿ ಅಭಿಷೇಕ್ ಮತ್ತು ಧ್ರುವಂತ್ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ. ಗಿಲ್ಲಿ ವರ್ತನೆ ಬಗ್ಗೆ ಕಾವ್ಯಾ ಶೈವ ಸಹ ನೇರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಮಾತು ಹೊರತುಪಡಿಸಿದ್ರೆ ಉಳಿದೆಲ್ಲಾ ಚಟುವಟಿಕೆಗಳಲ್ಲಿ ಗಿಲ್ಲಿ ಝೀರೋ ಎಂದು ಅಭಿಷೇಕ್ ಹೇಳಿದ್ದಾರೆ. ಟಾಸ್ಕ್ ಸೋತಿದ್ದಕ್ಕೆ ಗಿಲ್ಲಿ ನಟ ಇಷ್ಟೊಂದು ಡ್ರಾಮಾ ಮಾಡುವ ಅಗತ್ಯ ಇರಲಿಲ್ಲ.
ಅಶ್ವಿನಿ ಗೌಡ ಎದುರಿನ ಸೋಲನ್ನು ಗಿಲ್ಲಿ ಅವರಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಅವರ ತಂಡದ ಸದಸ್ಯರ ನಡುವೆ ಹುಳಿ ಹಿಂಡುವ ಕೆಲಸ ಮಾಡ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.