BBK 12: ರಕ್ಷಿತಾ ಶೆಟ್ಟಿಗೆ ಕನ್ನಡ ಬರತ್ತೆ, ಅರ್ಧಂಬರ್ಧ ಮಾತಾಡೋದೆಲ್ಲ ಡ್ರಾಮಾ! ರಿವೀಲ್‌ ಮಾಡಿದ್ಯಾರು?

Published : Oct 18, 2025, 06:45 AM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿಗೆ ಸರಿಯಾಗಿ ಕನ್ನಡ ಮಾತಾಡೋಕೆ ಬರೋದಿಲ್ಲ. ತುಳು, ಇಂಗ್ಲಿಷ್‌ ಪದಗಳನ್ನು ಸೇರಿಸಿಕೊಂಡು ಅವರು ಕನ್ನಡ ಮಾತನಾಡುತ್ತಾರೆ. ಈ ಬಗ್ಗೆ ಈಗ ಪ್ರಶ್ನೆ ಎದುರಾಗಿದ್ದು, ಇದು ಡ್ರಾಮಾ ಎನ್ನಲಾಗ್ತಿದೆ. 

PREV
15
ಮುಂಬೈನಲ್ಲಿ ಬೆಳೆದಿದ್ದಾರೆ

ರಕ್ಷಿತಾ ಶೆಟ್ಟಿ ಅವರು ಮುಂಬೈನಲ್ಲಿ ಬೆಳೆದಿದ್ದಾರೆ. ಇವರ ಮನೆಯಲ್ಲಿ ತುಳು ಭಾಷೆ ಮಾತನಾಡಲಾಗುತ್ತದೆ. ಅಂದಹಾಗೆ ಮಂಗಳೂರಿನಲ್ಲಿ ಅಜ್ಜಿ ಮನೆಗೆ ಬಂದಿದ್ದು, ಇಲ್ಲಿಗೆ ಬಂದಾಗ ಅವರು ಕನ್ನಡ ಮಾತಾಡುತ್ತಾರೆ. ಕೊರೊನಾ ನಂತರದಲ್ಲಿ ಅವರು ಇಲ್ಲಿಯೇ ವಿಡಿಯೋ ಮಾಡುತ್ತಿರೋದಿಕ್ಕೆ ಸ್ವಲ್ಪ ಕನ್ನಡ ಮಾತನಾಡುವುದನ್ನು ಕಲಿತಿದ್ದಾರಂತೆ. ಇದನ್ನೇ ಅವರು ಹೇಳಿದ್ದರು.

25
ಕನ್ನಡ ಮಾತಾಡೋಕೆ ಕಷ್ಟ

ಕನ್ನಡ ಮಾತಾಡೋಕೆ ರಕ್ಷಿತಾ ಶೆಟ್ಟಿ ಕಷ್ಟಪಡುತ್ತಾರೆ, ಆದರೂ ಮಾತನಾಡುತ್ತಿರುವುದು ವೀಕ್ಷಕರಿಗೆ ಖುಷಿ ಕೊಟ್ಟಿದೆ. ಅಂದಹಾಗೆ ರಕ್ಷಿತಾಗೆ ಕನ್ನಡವನ್ನು ಕಲಿಸಿ ಎಂದು ಕಿಚ್ಚ ಸುದೀಪ್‌ ಅವರೇ ಅಶ್ವಿನಿ ಗೌಡಗೆ ಹೇಳಿದ್ದರು. ಅದರಂತೆ ಕನ್ನಡವನ್ನು ರಕ್ಷಿತಾ ಕಲಿಯುವ ಪ್ರಯತ್ನ ಮಾಡಿದ್ದರು.

35
ಅರ್ಧಂಬರ್ಧ ಮಾತು

ಈಗ ರಕ್ಷಿತಾ ಶೆಟ್ಟಿ ಅವರು ಕನ್ನಡ ಭಾಷೆಯನ್ನು ಅರ್ಧಂಬರ್ಧ ಬಳಸಿ ಮಾತನಾಡೋದು ಸಾಕಷ್ಟು ಸದ್ದು ಮಾಡ್ತಿದೆ, ಜನರ ಗಮನಸೆಳೆಯುತ್ತಿದೆ. ಇದನ್ನೇ ಜಾಹ್ನವಿ, ಧ್ರುವಂತ್‌, ಅಶ್ವಿನಿ ಗೌಡ ಅವರು ಬೆಡ್‌ ರೂಮ್‌ ಏರಿಯಾದಲ್ಲಿ ಚರ್ಚೆ ಮಾಡಿದ್ದಾರೆ.

45
ಇದೆಲ್ಲವೂ ಡ್ರಾಮಾ

ರಕ್ಷಿತಾ ಶೆಟ್ಟಿಗೆ ಸರಿಯಾಗಿ ಕನ್ನಡ ಮಾತನಾಡೋಕೆ ಬರುತ್ತದೆ, ಇದೆಲ್ಲವೂ ಡ್ರಾಮಾ ಎಂದು ಈ ಮೂವರು ಚರ್ಚೆ ಮಾಡಿದ್ದಾರೆ.

55
ಧ್ರುವಂತ್‌ ಉಲ್ಟಾ ಹೊಡೆದದ್ದು ಯಾಕೆ?

ರಕ್ಷಿತಾ ಶೆಟ್ಟಿ ಈ ಮನೆಯಲ್ಲಿ ಇರೋಕೆ ಅರ್ಹತೆ ಇದೆ, ಸ್ಪಂದನಾ ಸೋಮಣ್ಣಗೆ ಇಲ್ಲ ಎಂದು ಹೋದ ವಾರ ಹೇಳಿದ್ದ ಧ್ರುವಂತ್‌ ಈ ಬಾರಿ ರಕ್ಷಿತಾ ತಾನು ಈ ರೀತಿ ಮಾತನಾಡಿದ್ರೆ ಇಲ್ಲಿ ಇರಬಹುದು ಎಂದು ಅರ್ಥ ಮಾಡಿಕೊಂಡಿದ್ದಾಳೆ, ಅದನ್ನು ಬಿಟ್ಟು ಏನೋ ಮಾಡೋದಿಲ್ಲ ಎಂದಿದ್ದಾರೆ.

“ಸಿಕ್ಕಾಪಟ್ಟೆ ನಾಟಕ ಮಾಡುತ್ತಿದ್ದಾಳೆ. ಸರ್‌ವೈವ್‌ ಆಗೋಕೆ ಪ್ಯಾಟರ್ನ್‌ ಹಾಕಿಕೊಂಡಿದ್ದು, ಅದನ್ನೇ ಅವಳು ಬಳಸಿಕೊಂಡು ಸರ್‌ವೈವ್‌ ಆಗುತ್ತಿದ್ದಾಳೆ, ಕನ್ನಡ ಹೇಳಿಕೊಟ್ರೂ ಸರಿಯಾಗಿ ಹೇಳಲ್ಲ, ಅವಳು ಮುಗ್ಧಳಲ್ಲ” ಎಂದು ಧ್ರುವಂತ್‌ ಹೇಳಿದ್ದಾರೆ.

Read more Photos on
click me!

Recommended Stories