Bigg Bossನಲ್ಲಿ ಸು ಫ್ರಂ ಸೋ: ಎಲ್ಲ ಬಿದ್ದೂ ಬಿದ್ದೂ ನಕ್ಕರೂ, ನಗಲಿಲ್ಲ ಅಶ್ವಿನಿ ಗೌಡ! ರಾಜಮಾತೆ ಸ್ಥಿತಿ ಗಂಭೀರ

Published : Nov 21, 2025, 08:51 PM IST

ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ಜಗಳ ತಾರಕಕ್ಕೇರಿದೆ. ಹೆಸರಿನಿಂದ ಕರೆದಿದ್ದಕ್ಕೆ ಅಶ್ವಿನಿ ಗೌಡರಿಗೆ ಕೋಪ ಬಂದಿದ್ದು, ಗಿಲ್ಲಿ ನಟ ಹಾಸ್ಯದ ಮೂಲಕ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿದ್ದಾರೆ. 

PREV
17
ಸ್ಥಿತಿ ಗಂಭೀರ

ಬಿಗ್​ಬಾಸ್​ (Bigg Boss)ನಲ್ಲಿ ಸದ್ಯ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಅವರ ಮಧ್ಯೆ ಪರಿಸ್ಥಿತಿ ಗಂಭೀರವಾಗಿದೆ. ಇದಾಗಲೇ ಗಿಲ್ಲಿನಟ ಅಶ್ವಿನಿ ಗೌಡ ಬಗ್ಗೆ ಸಾಕಷ್ಟು ಬಾರಿ ಮಿಮಿಕ್ರಿಯನ್ನೂ ಮಾಡಿದ್ದಾರೆ. ಇದರ ಹೊರತಾಗಿಯೂ ಗಿಲ್ಲಿ ಮೇಲೆ ಅಶ್ವಿನಿ ಗೌಡ ಅವರಿಗೆ ಮುನಿಸು ಹೋಗುವ ಹಾಗೆ ಕಾಣಿಸುತ್ತಿಲ್ಲ.

27
ಇಗೋ ಹರ್ಟ್​

ಇದಾಗಲೇ ಚಿಕ್ಕದೊಂದು ಜಗಳದಿಂದ ಅಶ್ವಿನಿ ಗೌಡ (Bigg Boss Ashwini Gowda) ಕೋಪ ಮಾಡಿಕೊಂಡು ಉಪವಾಸವನ್ನೂ ಮಾಡುತ್ತಿದ್ದಾರೆ. ಅಶ್ವಿನಿ ಎಂದು ಹೆಸರು ಹಿಡಿದು ಕರೆದದ್ದಕ್ಕೆ ಅವರಿಗೆ ಅಷ್ಟು ಕೋಪ. ತಮಗೆ ಮರ್ಯಾದೆ ಕೊಡುತ್ತಿಲ್ಲ ಎನ್ನುವುದು ಅವರ ಇಗೋ ಹರ್ಟ್​ ಮಾಡಿದೆ.

37
ನನಗಿಂತ ಚಿಕ್ಕವರಾಗಿದ್ರೆ

ಇದನ್ನೇ ಬಂಡವಾಳ ಮಾಡಿಕೊಂಡು ಗಿಲ್ಲಿ ನಟ (Bigg Boss Gilli Nata) ಈಗ ಅಶ್ವಿನಿ ಗೌಡ ಅವರನ್ನು ನಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಶ್ವಿನಿ ಎಂದು ಹೆಸರು ಹೇಳಿದ್ದೇ ತಪ್ಪಾ, ನೀವೇನಾದ್ರೂ ನನಗಿಂತ ಚಿಕ್ಕವರಾಗಿದ್ರೆ ನಾನೂ ಅಶ್ವಿನಿ ಅವರೇ ಎಂದೇ ಕರೆಯುತ್ತಿದ್ದೆ ಎಂದಿದ್ದಾರೆ ಗಿಲ್ಲಿ ನಟ.

47
ಎ ಅಶ್ವಿನಿ...

ನಿಮ್ಮ ಇನಿಷಿಯಲ್​ ಎ ಆಗಿದ್ದರೆ, ನಾನು ಎ ಅಶ್ವಿನಿ ಎಂದೇ ಕರೆಯುತ್ತಿದ್ದೆ. ಏನಿವಾಗ ಎನ್ನುತ್ತಲೆ ಇಂಗ್ಲಿಷ್​ನಲ್ಲಿ ಮಾತನಾಡಿದ್ದಾರೆ. ಸೋ ಏನು ಎನ್ನುತ್ತಲೇ ಸು ಫ್ರಂ ಸೋ ಎಂದಿದ್ದಾರೆ. ಎಲ್ಲರೂ ಬಿದ್ದೂ ಬಿದ್ದೂ ನಕ್ಕಿದ್ದಾರೆ.

57
ಕರಗದ ಕೋಪ

ಇಷ್ಟಾದರೂ ಅಶ್ವಿನಿ ಗೌಡ ಕೋಪ ಮಾತ್ರ ಕರಗಲಿಲ್ಲ. ಜೊತೆಗೆ ಅಲ್ಲಿದ್ದ ಉಳಿದ ಸ್ಪರ್ಧಿಗಳ ನಗು ಬೇರೆ. ಇದು ಅಶ್ವಿನಿ ಅವರನ್ನು ರೇಗಿಸಿಬಿಟ್ಟಿದೆ.

67
ರಾಜಮಾತೆ ನೀನಿನ್ನು ಸತ್ತೆ

ಇಷ್ಟಾದರೂ ಅಶ್ವಿನಿ ರಿಸ್​ಪಾನ್ಸ್​ ಮಾಡದೇ ಇರುವ ಕಾರಣ ಗಿಲ್ಲಿ ನಟ, ರಾಜಮಾತೆ ನೀನಿನ್ನು ಸತ್ತೆ ಎಂದಿದ್ದಾರೆ. ಆದರೆ ಈ ಮಾತಿನ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಬೇರೆಲ್ಲಾ ಓಕೆ, ಆದರೆ ಈಮಾತನ್ನು ಗಿಲ್ಲಿ ನಟ ಹೇಳಬಾರದಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.

77
ಇಷ್ಟು ಸಿಟ್ಟೇಕೆ?

ಒಟ್ಟಿನಲ್ಲಿ ಅಶ್ವಿನಿ ಗೌಡ ಅವರನ್ನು ಉರಿಸಲು ಗಿಲ್ಲಿನಟ ಏನು ಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಅಶ್ವಿನಿ ಅವರ ಕೋಪ ಮಾತ್ರ ಕರಗುತ್ತಿಲ್ಲ. ತಮ್ಮನ್ನು ಅವಮಾನ ಮಾಡುತ್ತಿದ್ದಾರೆ. ಮರ್ಯಾದೆ ಕೊಡುತ್ತಿಲ್ಲ. ಹೆಸರಿನಿಂದ ಕರೆಯುತ್ತಾರೆ ಎನ್ನುವುದು ಅವರ ಸಿಟ್ಟು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories