Amruthadhaare Serial: ವೀಕ್ಷಕರು ಅಂದುಕೊಂಡಿದ್ದೊಂದು; ಈ ಮೂವರು ಮಾಡೋಕೆ ಹೊರಟಿದ್ದೇ ಇನ್ನೊಂದು

Published : Nov 04, 2025, 07:42 AM IST

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌, ಭೂಮಿಕಾ ವಿವಾಹ ವಾರ್ಷಿಕೋತ್ಸವ ಹತ್ತಿರ ಇದೆ. ಇನ್ನೊಂದು ಕಡೆ ನಿಜವಾದ ಮಗಳನ್ನು ಹುಡುಕಿ ಪತ್ನಿಯನ್ನು ಸೇರೋಣ ಎಂದು ಗೌತಮ್‌ ಅಂದುಕೊಂಡಿದ್ದಾನೆ, ಜಯದೇವ್‌, ಎಂಎಲ್‌ಎ ಸೇರಿಕೊಂಡು ಗೌತಮ್‌, ಭೂಮಿಕಾರನ್ನು ಟಾರ್ಗೆಟ್‌ ಮಾಡಿದ್ದಾರೆ. ಸದ್ಯ ಪ್ರೋಮೋ ರಿಲೀಸ್‌ ಆಗಿದೆ.

PREV
15
ಜೊತೆಗಿದ್ಕೊಂಡೇ ಹೊಡೆಯಲು ಪ್ಲ್ಯಾನ್‌

ಶಕುಂತಲಾ, ಜಯದೇವ್‌ ಇಬ್ಬರೂ ನನಗೆ ಮೋಸ ಮಾಡಿದರು, ಬೇಕಾದಷ್ಟು ದಿನ ನನ್ನನ್ನು ಬಳಸಿಕೊಂಡು, ಈಗ ನನ್ನನ್ನು ದೂರ ಇಟ್ಟರು. ಇಷ್ಟೆಲ್ಲ ಆಸ್ತಿ ಇದ್ದರೂ ಕೂಡ 50000 ರೂಪಾಯಿ ಕೊಟ್ಟು ಕೂಡ ನನ್ನನ್ನು ಬಿಡಿಸಲಿಲ್ಲ. ಇವರ ಜೊತೆಗಿದ್ದುಕೊಂಡೇ ಹಳ್ಳಿ ತೋಡ್ತೀನಿ ಎಂದು ಲಕ್ಷ್ಮೀಕಾಂತ್‌ ಮಾವ ಪಣ ತೊಟ್ಟಿದ್ದಾನೆ.

25
ಪಾರಿವಾಳ ಆದ ಶಕುನಿ ಮಾವ

ಗೌತಮ್‌ ಗೆಳೆಯ ಆನಂದ್‌ ಜೊತೆ ಲಕ್ಷ್ಮೀಕಾಂತ್‌ ಮಾವ ಸೇರಿಕೊಂಡಿದ್ದಾನೆ. ಜಯದೇವ್‌ ಏನು ಮಾಡುತ್ತಿದ್ದಾನೆ? ಏನಾಗ್ತಿದೆ ಎಂದು ಲಕ್ಷ್ಮೀಕಾಂತ್‌, ಆನಂದ್‌ಗೆ ಮಾಹಿತಿ ನೀಡುತ್ತಿದ್ದಾನೆ. ಈಗ ಇವರ ಜೊತೆ ಮಲ್ಲಿಯೂ ಸೇರಿಕೊಂಡಿದ್ದಾಳೆ. ಈಗ ಈ ಮೂವರು ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ.

35
ಈ ಮೂವರ ಯೋಜನೆ ಏನು?

ಗೌತಮ್‌ ಹಾಗೂ ಭೂಮಿಕಾ ಇಬ್ಬರನ್ನು ಒಂದು ಮಾಡಬೇಕು. ಒಂದು ಕೂಪನ್‌ ಸಿಗ್ತು ಅಂತ ಹೇಳಿಕೊಂಡು ನೀನು ಭೂಮಿಕಾಳನ್ನು ಕರೆದುಕೊಂಡು ಬಾ, ಮತ್ತೊಂದು ಕಡೆ ಗೌತಮ್‌ನನ್ನು ಕರೆದುಕೊಂಡು ಬನ್ನಿ ಎಂದು ಲಕ್ಷ್ಮೀಕಾಂತ್‌ ಮಾವ, ಮಲ್ಲಿ, ಆನಂದ್‌ಗೆ ಹೇಳಿದ್ದಾನೆ. ಅದರಂತೆ ಗೌತಮ್‌, ಭೂಮಿಕಾ ಬರುತ್ತಾರಾ? ಇವರಿಬ್ಬರು ಒಂದಾಗುತ್ತಾರಾ ಎಂದು ಕಾದು ನೋಡಬೇಕಿದೆ.

45
ತಪ್ಪು ತಿಳಿದುಕೊಂಡಿರೋ ಭೂಮಿ, ಗೌತಮ್‌

ನಾನು ಮನೆಯಿಂದ, ಮನೆಯವರಿಂದ ದೂರ ಇದ್ದರೆ ಮಾತ್ರ ನನ್ನವರು ಚೆನ್ನಾಗಿ ಇರುತ್ತಾರೆ ಎಂದು ಶಕುಂತಲಾ, ಭೂಮಿಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದಳು. ಹೀಗಾಗಿ ಭೂಮಿ ತನ್ನ ಗಂಡನಿಂದ ದೂರ ಇದ್ದಾಳೆ. ಮಗಳು ಹುಟ್ಟಿರೋದು, ಕಾಣೆಯಾಗಿರೋ ವಿಷಯವನ್ನು ಮುಚ್ಚಿಟ್ಟಿದ್ದಕ್ಕೆ ಭೂಮಿ ನನ್ನಿಂದ ದೂರ ಇದ್ದಾಳೆ ಅಂತ ಗೌತಮ್‌ ಅಂದುಕೊಂಡಿದ್ದಾನೆ.

55
ಮುಂದೆ ಏನಾಗಲಿದೆ?

ಈಗ ಮಲ್ಲಿ, ಆನಂದ್‌, ಲಕ್ಷ್ಮೀಕಾಂತ್‌ ಸೇರಿಕೊಂಡು ಭೂಮಿ, ಗೌತಮ್‌ನನ್ನು ಒಂದು ಮಾಡ್ತಾರಾ ಎಂದು ಕಾದು ನೋಡಬೇಕಿದೆ. ಭೂಮಿಕಾ ಮಗಳು ಸಿಗೋದು ಯಾವಾಗ? ಜಯದೇವ್‌ ಏನು ಮಾಡ್ತಾನೆ ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories